ಕುಷ್ಟಗಿ ತಾಲೂಕು ಘಟಕಕ್ಕೆ ಪದಾಧಿಕಾರಿಗಳ ಅವಿರೋಧವಾಗಿ ಆಯ್ಕೆ
Unopposed election of office bearers for Kushtagi Taluk unit
ಕುಷ್ಟಗಿ 16: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕ ಘಟಕ ಕುಷ್ಟಗಿ ಘಟಕದ ಅಧ್ಯಕ್ಷರಾಗಿ ಪವಾಡೆಪ್ಪ ಚೌಡ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲಕುಮಾರ ಕಮ್ಮಾರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್.ವೈ, ರಾಜ್ಯ ಸಮಿತಿ ಸದಸ್ಯರಾದ ವೀರಣ್ಣ ಕಳ್ಳಿಮನಿ ಘೋಷಿಸಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ 2025-28ನೇ ಸಾಲಿನ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲಗಲಾಧ್ಯಕ್ಷ ಹನಮಂತಪತಪ ಹಳ್ಳಿಕೇರಿ ಅವರ ಅಧ್ಯಕ್ಷತೆಯಲ್ಲಿ, ಜಿಲ್ಲಾ ಕಾರ್ಯದರ್ಶಿ ರವೀಂದ್ರ ಬಾಕಳೆ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಬಸವರಾಜ ಪಲ್ಲೇದ್ ಅವರ ನೇತೃತ್ವದಲ್ಲಿ ಇಂದು ತಾಲೂಕ ಘಟಕದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ, ತಾಲೂಕ ಘಟಕಕ್ಕೆ ನೂತನ ಅಧ್ಯಕ್ಷರಾದಿಯಾಗಿ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಪವಾಡೆಪ್ಪ ಚೌಡ್ಕಿ, ಉಪಾಧ್ಯಕ್ಷರಾಗಿ ಶರಣಪ್ಪ ಲೈನೆದ್, ಚಂದ್ರಶೇಖರ ಕುಂಬಾರ್, ಪ್ರಧಾನ ಕಾರ್ಯದರ್ಶಿ ಅನಿಲ ಕಮ್ಮಾರ್, ಕಾರ್ಯದರ್ಶಿಯಾಗಿ ಶರಣಪ್ಪ ನವಲಹಳ್ಳಿ, ಖಾಜಾಸಾಬ ಮುದಗಲ್, ಖಜಾಂಚಿಯಾಗಿ ಭೀಮಸೇನರಾವ್ ಕುಲಕರ್ಣಿ, ತಾಲೂಕಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಗಮೇಶ ಲೂತಿಮಠ, ಭೀಮನಗೌಡ ಪಾಟೀಲ್, ಏಕನಾಥ ಮೆದಕೇರಿ, ಮುತ್ತು ಗ್ವಾತಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ವಿಆರ್. ತಾಳಿಕೋಟಿ, ನಿಕಟಪೂರ್ವ ಅಧ್ಯಕ್ಷರಾದ ವೆಂಕಟೇಶ ಕುಲಕರ್ಣಿ, ಎನ್. ಶ್ಯಾಮೀದ, ಸಂಗಮೇಶ ಸಿಂಗಾಡಿ, ಶ್ರೀನಿವಾಸ ಜಹಗೀರದಾರ, ಗೀರೀಶ ದಿವಾನಜಿ, ಮೈಲಾರ್ಪ ಮಂತ್ರಿ, ವಸಂತಕುಮಾರ, ಪರಶಿವಮೂರ್ತಿ ಮಾಟಲದಿನ್ನಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 