ಟಿ.ಎ.ಪಿ.ಸಿ.ಎಂ.ಸಿ ನಿರ್ದೇಶಕರ ಸ್ಥಾನಗಳಿಗೆ ಅವಿರೋದ ಆಯ್ಕೆ
Unopposed election for the positions of TAPCMC directors
ಲೋಕದರ್ಶನ ವರದಿ
ಟಿ.ಎ.ಪಿ.ಸಿ.ಎಂ.ಸಿ ನಿರ್ದೇಶಕರ ಸ್ಥಾನಗಳಿಗೆ ಅವಿರೋದ ಆಯ್ಕೆ
ಕಂಪ್ಲಿ 20 : ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಸೋಮವಾರದಂದು 21 ಜನ ನಾಮಪತ್ರ ಹಿಂಪಡೆದ ಹಿನ್ನಲೆ 8 ಜನ ನೂತನ ನಿರ್ದೇಶಕರಾಗಿ ಅವಿರೋದವಾಗಿ ಆಯ್ಕೆಗೊಂಡರು. ಸಂಘದ ಚುನಾವಣೆಯಲ್ಲಿ 8 ಸ್ಥಾನಗಳ ನಿರ್ದೇಶಕರ ಸ್ಥಾನಗಳಿಗೆ ಒಟ್ಟು 29 ಜನರು ನಾಮಪತ್ರ ಸಲ್ಲಿಸಿದ್ದರು. ಆದರೆ, ಸೋಮವಾರಂದು 8 ಜನ ಅಭ್ಯರ್ಥಿಗಳು ಸಂಘದ ನಿರ್ದೇಶಕರಾಗಿ ಆಯ್ಕೆಯಾದರು. ವಿ.ಬಿ.ನಾಗರಾಜ ಎನ್.ಆಂಜನೇಯಲು ಗೌಡ್ರುಅಂಜಿನಪ್ಪ ಕೆ.ಭಾಸ್ಕರ್ ರೆಡ್ಡಿ ಅರಳೆ ಮುತ್ತಯ್ಯ, ಹನುಮಂತಪ್ಪಕುರುಬರು ಜಿ.ಅಯ್ಯಮ್ಮ, ಕೆ.ರಾಧಾ ಇವರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರರಾಗಿ ಆಯ್ಕೆಯಾಗಿದ್ದಾರೆ. ಮತ್ತು ಕಡೆಮನೆ ನಾಗರಾಜ(ದೇವಸಮುದ್ರ ಟಿ.ರಾಮು(ಎಮ್ಮಿಗನೂರು),ಕೆ.ದೊಡ್ಡಬಸಪ್ಪ(ಹಂಪಾದೇವನಹಳ್ಳಿ),ಅಳ್ಳಿನಾಗರಾಜ(ಕಂಪ್ಲಿಪಿ.ಚೊಕ್ಕರಾವ್(ಸಣಾಪುರ) ಇವರು ಸಹಕಾರ ಸಂಘದ ಡೆಲಿಗೇಟ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.
ನಂತರ ರಿಟರ್ನಿಂಗ್ ಅಧಿಕಾರಿ ರಾಮು ಮಾತನಾಡಿ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ 29 ಜನ ನಾಮಪತ್ರ ಸಲ್ಲಿಸಿದ್ದರು. ಆದರೆ, ಸೋಮವಾರ 3ಗಂಟೆ ಒಳಗಾಗಿ 21 ಜನ ನಾಮಪತ್ರ ಹಿಂಪಡೆದ ಹಿನ್ನಲೆ ಕಣದಲ್ಲಿ ಉಳಿದ 8 ಜನರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಸಹಾಯಕ ರಿಟರ್ನಿಂಗ್ ಅಧಿಕಾರಿ ರಮೇಶ, ಮುಖ್ಯಕಾರ್ಯನಿರ್ವಾಹಕ ಕೆ.ವಿರೇಶ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಾಮ ನಿರ್ದೇಶಿತ ಸದಸ್ಯ ಬಳ್ಳಾಪುರ ಲಿಂಗಪ್ಪ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಪುರಸಭೆ ಸದಸ್ಯರಾದ ಡಾ.ವಿ.ಎಲ್.ಬಾಬು, ಎನ್.ರಾಮಾಂಜಿನೇಯಲು, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಬಿ.ನಾರಾಯಣಪ್ಪ, ಅಳ್ಳಳ್ಳಿ ವಿರೇಶ, ಕಡೆಮನೆ ಪಂಪಾಪತಿ, ವೆಂಕಟರಾಮರಾಜು, ದೇವೇಂದ್ರಗೌಡ, ಕೆ.ಮನೋಹರ,ಸಿದ್ದಯ್ಯ ಹೊನ್ನೂರಸಾಬ್, ಶಿವುಕುಮಾರ, ಜಿ.ಮರೇಗೌಡ, ಹೊಸಕೋಟೆ ಜಗದೀಶ, ವೆಂಕೋಬನಾಯಕ್ ಬಳೆ ಮಲ್ಲಿಕಾರ್ಜುನ, ಬಿ.ವಿ.ಗೌಡ, ಕೆ.ರಮೇಶ, ಶರಣ, ಮಂಜುನಾಥ, ಕೆ.ಬಸವರಾಜ, ದೊಡ್ಡಬಸುವ, ಸಹಕಾರ ಸಂಘದ ಸಿಬ್ಬಂದಿಗಳಾದ ಕೆ.ಕರಿಬಸುವ, ಎ.ಸಿದ್ದೇಶ, ಬಿ.ಶ್ರೀನಿವಾಸ, ಮಣಿಕಂಠ, ಉಮೇಶ, ಶರಣಗೌಡ ಸೇರಿದಂತೆ ರೈತ ಮುಖಂಡರು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 