2ನೇ ಅವಧಿಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ
Unopposed election for the positions of President and Vice President for the 2nd term
ರಾಯಬಾಗ, 17 : ತಾಲೂಕಿನ ಜಲಾಲಪೂರ ಗ್ರಾಮ ಪಂಚಾಯತಿಗೆ 2ನೇ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೀಪಾ ಆನಂದ ಚೌಗಲಾ (ಸಾಮಾನ್ಯ) ಮತ್ತು ಉಪಾಧ್ಯಕ್ಷರಾಗಿ ಪ್ರಮೀಳಾ ಅಣ್ಣಾಸಾಬ ಹಿಡಕಲ್ (ಸಾಮಾನ್ಯ ಮಹಿಳೆ) ಇವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಜಿ.ಪಂ. ಎಇಇ ಸುಭಾಷ ಭಜಂತ್ರಿ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಪಿಡಿಒ ಆಶ್ಫಾಕ ದಿಲಾವರ, ಅಣ್ಣಾಸಾಹೇಬ ಹೇರವಾಡೆ, ಅಣ್ಣಾಸಾಹೇಬ ಕೋಣೆ, ನಾಮದೇವ ಕಾಂಬಳೆ, ಬಸಗೌಡ ಪಾಟೀಲ, ಮೌಲಾನಾ ನದಾಫ, ವಿನಾಯಕ ಪವಾರ, ಪಾಂಡುರಂಗ ಹವಾಲ್ದಾರ, ಮೀನಾಕ್ಷಿ ಮಾನೆ, ಪಾರ್ವತಿ ದಾಸರ, ವಿನೋದ ಜಗದಾಳೆ, ಅಮರ ನಿಗವೆ, ಬಸು ಅವನ್ನವರ, ರಾಜು ಮುರಚಿಟ್ಟಿ, ಮಲ್ಲು ಜಗದಾಳೆ, ಬಾಹುಸಾಬ ಹವಾಲ್ದಾರ, ಮಾರುತಿ ಪಾಟೀಲ, ಬಾಬಾಸಾಬ ಅವಾಡೆ, ಕಿರಣ ಖನದಾಳೆ, ನಾನಾಸಾಬ ಸೋನಾರ, ರಾಜು ಜಾಧವ, ಬಸವರಾಜ ಚೌಗಲಾ, ಬಸವರಾಜ ಬೆಳ್ಳೆಸಿ, ಹಾಗೂ ಇತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 