ವಕ್ಫ್‌ ಸಂಸ್ಥೆಗಳ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ: ಯು.ಟಿ. ಖಾದರ್

  ವಕ್ಫ್‌ ಸಂಸ್ಥೆಗಳ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ: ಯು.ಟಿ. ಖಾದರ್ Unity essential for the development of Waqf institutions: U.T. Khader

  ವಕ್ಫ್‌ ಸಂಸ್ಥೆಗಳ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ: ಯು.ಟಿ. ಖಾದರ್ 

  ಹುಬ್ಬಳ್ಳಿ  13: ವಕ್ಫ್‌ ಸಂಸ್ಥೆಗಳ ಅಭಿವೃದ್ಧಿಗೆ ಒಗ್ಗಟ್ಟು ಮತ್ತು ಪರಸ್ಪರ ಸಹಕಾರ ಅತ್ಯಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್‌ ಹಾಗೂ ಹಜ್ ಸಚಿವರಾದ ಶ್ರೀ ಯು.ಟಿ. ಖಾದರ್ ಫರೀದ್ ಹೇಳಿದರು.  ಹುಬ್ಬಳ್ಳಿಯ ಅಂಜುಮನ್‌-ಎ-ಇಸ್ಲಾಂ ಸಂಸ್ಥೆಯ ನೆಹರು ಕಾಲೇಜು ಶಿಕ್ಷಣ ಆವರಣದ ಸರದಾರ ಮಹಬೂಬಲಿಖಾನ್ ಶಾಲಾ ಮೈದಾನದಲ್ಲಿ ಧಾರವಾಡ ಜಿಲ್ಲಾ ವಕ್ಫ್‌ ಸಂಸ್ಥೆಗಳ ಮುತವಲ್ಲಿಗಳ ಸಂವಾದ ಕಾರ್ಯಕ್ರಮ ನಡೆಯಿತು. ಅಂಜುಮನ್ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎ.ಎಂ. ಹಿಂಡಸಗೇರಿ ಅವರು ಸಚಿವರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.  ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ವಕ್ಫ್‌ ಸಂಸ್ಥೆಗಳ ಚುನಾಯಿತ ಮಂಡಳಿಯವರು ತಮ್ಮ ತಮ್ಮ ಮೊಹಲ್ಲಾಗಳ ಸಮಸ್ಯೆಗಳನ್ನು ಶಾಂತಿಯುತವಾಗಿ ಚರ್ಚಿಸಿ, ಪರಸ್ಪರ ಸಮನ್ವಯದಿಂದ ಪರಿಹರಿಸಿಕೊಳ್ಳಬೇಕು. ಸಂಸ್ಥೆಗಳ ಅಭಿವೃದ್ಧಿಗೆ ಮೊದಲು ನಮ್ಮೊಳಗಿನ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು. ಬೇರೆಯವರ ಮೇಲೆ ಅವಲಂಬಿತರಾಗುವುದಕ್ಕಿಂತ ಸ್ವಾವಲಂಬನೆಯೊಂದಿಗೆ ಮುನ್ನಡೆಯುವುದು ಸೂಕ್ತ ಎಂದು ಹೇಳಿದರು. ಮುತವಲ್ಲಿಗಳ ಅನಾನುಕೂಲತೆಗಳಿಗೆ ಸ್ಪಂದಿಸುವುದಾಗಿ ಅವರು ಭರವಸೆ ನೀಡಿದರು.  ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಪೂರ್ವ ಶಾಸಕ ಹಾಗೂ ರಾಜ್ಯ ಒಳಚರಂಡಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಶಿಗ್ಗಾವಿ ಶಾಸಕ ಯಾಸಿರ್‌ಖಾನ್ ಪಠಾಣ್, ಮಾಜಿ ಸಂಸತ್ ಸದಸ್ಯ ಎ.ಜಿ. ಸನದಿ, ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಾಮಟಗಾರ್, ಹುಬ್ಬಳ್ಳಿ ಅಂಜುಮನ್ ಉಪಾಧ್ಯಕ್ಷ ಅಲ್ಹಾಜ್ ಎ.ಎ. ಅತ್ತಾರ, ಕಾರ್ಯದರ್ಶಿ ಬಶೀರ್‌ಅಹ್ಮದ್ ಹಳವೂರ, ಜಂಟಿ ಕಾರ್ಯದರ್ಶಿ ಎಂ.ಎಸ್‌. ಬಂಕಾಪುರ, ಖಜಾಂಚಿ ದಾದಾಹಯಾತ್ ಖೈರಾತಿ, ಹಾಸ್ಪಿಟಲ್ ಕಾರ್ಯದರ್ಶಿ ಇರ್ಷಾದ್‌ಅಹ್ಮದ್ ಬಳ್ಳಾರಿ, ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನಾ ಮೊಹಮ್ಮದಲಿ ಖಾಝಿ ಸೇರಿದಂತೆ ಶಿಕ್ಷಣ ಮಂಡಳಿ ಹಾಗೂ ಹಾಸ್ಪಿಟಲ್ ಬೋರ್ಡ್‌ ಸದಸ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು, ಧಾರವಾಡ ಜಿಲ್ಲೆಯ ವಿವಿಧ ವಕ್ಫ್‌ ಸಂಸ್ಥೆಗಳ ಮುತವಲ್ಲಿಗಳು ಹಾಗೂ ಪಂಚರು ಉಪಸ್ಥಿತರಿದ್ದರು.