ಒಗ್ಗಟ್ಟು ಮತ್ತು ಶಾಂತಿಯುತ ಹೋರಾಟವೇ ನಮ್ಮ ಶಕ್ತಿ: ಅನಿಲ್

ಒಗ್ಗಟ್ಟು ಮತ್ತು ಶಾಂತಿಯುತ ಹೋರಾಟವೇ ನಮ್ಮ ಶಕ್ತಿ: ಅನಿಲ್  Unity and peaceful struggle are our strength: Anil


ಶಿಗ್ಗಾವಿ, ಆ.27: ಧರ್ಮ, ದೇವಾಲಯ ಹಾಗೂ ಸಂಸ್ಕೃತಿಯ ರಕ್ಷಣೆಯ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶಾಂತಿಯುತವಾಗಿ ಸ್ಪಂದಿಸಿರುವ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಬಿಜೆಪಿ ಮಂಡಳಿಯ ಯುವ ಮೋರ್ಚಾ ಅಧ್ಯಕ್ಷ ಅನಿಲ್ ಸಾತಣ್ಣವರ ಹೇಳಿದರು.  

ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ, ದೇವಾಲಯ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ನಮ್ಮ ಒಗ್ಗಟ್ಟು ಹಾಗೂ ಶಾಂತಿಯುತ ಹೋರಾಟವೇ ನಮ್ಮ ಶಕ್ತಿ. ಮುಂದೆಯೂ ಇದೇ ರೀತಿಯ ಸಹಕಾರ, ಒಗ್ಗಟ್ಟು ಹಾಗೂ ಶಾಂತಿಯುತ ಹೋರಾಟ ಮುಂದುವರಿಯಲಿ ಎಂದು ಆಶಿಸಿದರು.