ಜು. 03ರಂದು ಸರ್ವ ಧರ್ಮ ಗುರುಗಳಿಂದ ಭಾವೈಕ್ಯತಾ ನಡಿಗೆ ಕಾರ್ಯಕ್ರಮ
Unity Walk Program by All Religion Gurus on July 03
ಶಿಗ್ಗಾವಿ 29: ಪ್ರವಾದಿ ಮಹಮ್ಮದ ಪೈಗಂಬರರ ಗೌರವಾರ್ಥ ಮೊಹರಂ ಹಬ್ಬದ ಪ್ರಯುಕ್ತ ಮ.ನಿ.ಪ್ರ ಸಂಗನಬಸವ ಮಹಾಸ್ವಾಮಿಗಳು, ಸಾಲಗೇರಿ ಓಣಿಯ ಬಹಲೇ ಸುನ್ನತ್ ವಲ್ ಜಮಾತ, ಪುರಸಭೆ ಸದಸ್ಯೆ ನಸ್ರೀನಬಾನು ಮುಕ್ತಾರಖಾನ ತಿಮ್ಮಾಪೂರ ಸೇರಿದಂತೆ ಸಮಸ್ತ ಹಿಂದೂ-ಮುಸ್ಲಿಂ ಬಾಂಧವರ ಸಹಯೋಗದೊಂದಿಗೆ ಭಾವೈಕ್ಯತಾ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಾಜ ಸೇವಕ ಮುಕ್ತಾರಖಾನ ತಿಮ್ಮಾಪೂರ ಹೇಳಿದ್ದಾರೆ.
ಪಟ್ಟಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ದಿ 03 ಗುರುವಾರ ಮಧ್ಯಾಹ್ನ 3 ಗಂಟೆಗೆ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ ದಿಂದ ಮಾರ್ಕೆಟ್ ರಸ್ತೆ ಮಾರ್ಗವಾಗಿ ಪಟ್ಟಣದ ಸಾಲಗೇರಿ ಓಣಿಯ ದೊಡ್ಡ ದೇವರ ದರ್ಗಾದವರೆಗೆ ಭಾವೈಕ್ಯತಾ ನಡಿಗೆಯಲ್ಲಿ ಸರ್ವ ಧರ್ಮಗಳ ಗುರುಗಳಾದ ಗಂಜೀಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು,ಬಂಕಾಪೂರ ಅರಳೇಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು,ಸದಾಶಿವಪೇಟೆ ಶಿವದೇವ ಶರಣರು, ಅಂಬಿಗರ ಚೌಡಯ್ಯ ಗುರುಪಿಠದ ಶಾಂತಭಾಷ್ಯ ಚೌಡಯ್ಯ ಮಹಾಸ್ವಾಮಿಗಳು, ಕಾಗಿನಲೆ ಕನಕ ಗುರುಪೀಠನಿರಂಜನಾನಂದಪುರಿ ಮಹಾಸ್ವಾಮಿಗಳು, ಹುಬ್ಬಳ್ಳಿ ಸೇವಾಲಾಲ ಬಂಜಾರ ಗುರುಪೀಠತಿಪ್ಪೇಶ್ವರ ಮಹಾಸ್ವಾಮಿಗಳು, ಭಾವನಮಠ ಚಂದ್ರ್ಪ ಕಾಳೆ ಸಾಧುಮಹಾರಾಜರು,ಕ್ರೈಸ್ತ ಧರ್ಮದ ಗುರುಗಳಾದ ಶಿಗ್ಗಾವಿ ಹೋಲಿ ಟ್ರಿನಿಟಿ ಚರ್ಚನವಂದನೀಯ ಹಾದರ ಮೈಕೇಲ್ ವಾಗ್ ವಿಚಾರಣೆ ಗುರುಗಳು, ಸಿಖ್ ಧರ್ಮದ ಗುರುಗಳಾದ ಹುಬ್ಬಳ್ಳಿ ಗುರುಸಿಂಗ್ ಸಭಾ ಗುರುದ್ವಾರದ ಗ್ಯಾನಿ ಗುರುವಂತಸಿಂಗ್.ಜಿ ಹಾಗೂ ಜನ್ಮೇಲಸಿಂಗ್ ಗಿಲ್ ,ಮುಸ್ಲಿಂ ಧರ್ಮದ ಗುರುಗಳಾದ ಹುಬ್ಬಳ್ಳಿಯ ಎ. ತರೀಖತ ಸೈಯದ ತಾಜುದ್ದೀನ ಖಾದ್ರಿ, ಧಾರವಾಡದ ಪೀರ.ಎ.ತರೀಖತ ಹಜರತ್ ಸೈಯದ ಶಾ ವಲೀಯುಲ್ಲಾ ಖಾದ್ರಿ , ಬಂಕಾಪೂರದ ಸೈಯದ ಶಾ ಮೊಹ್ಮದ ಖುತುಬ್ ಎ. ಅಲಂ ಖಾದ್ರಿ, ಹುಬ್ಬಳ್ಳಿಯ ಪೀರ ಎ ತರೀಖತ ಹಜರತ್ ಮೌಲಾನಾ ಸ್ವಾಜಾ ಮೊಹಿಯುದ್ದೀನ ಖಾದ್ರಿ, ಧಾರವಾಡದ ಪೀರ ಎ. ತರೀಖತ ಹಾಫೀಜ್ ಜಹೀರ ರಝಾ ಸುತಾರಿ,ಧಾರವಾಡ ಅಮ್ಮಿನಬಾವಿ ಪೀರ ಎ. ತರೀಖತ ಅಬ್ದುಲಖಾದರ ಜೀಲಾನಿ ಸಾಹೇಬ ಖಾನಕಾ ಎ. ಖಾದ್ರಿ, ಬೌದ್ಧ ಧರ್ಮದ ಮುಂಡಗೋಡದ ಗೋಲ್ಡನ್ ಟೆಂಪಲ್ ನಂ 1 ಗುರುಗಳಾದ ಜೀಸೇ ಸೋನಮ್ ಜಾಂಗ್ ಚುಪ್, ಜೀಸೇ ಜಂಪಾ ಲೋಬಸಂಗ, ಜೀಸೇ ನಂಗವಾಂಗ್ ಲುಡುಪ್ , ಜೀಸೇ ಲೋಬಸಂಗ್ ಟಾಪ್ ಗೇಲ್ ಸೇರಿದಂತೆ ಇನ್ನೂ ಅನೇಕ ಧರ್ಮಗುರುಗಳು ಸದರಿ ಭಾವೈಕ್ಯತಾ ನಡಿಗೆಯಲ್ಲಿ ಪಾಲ್ಗೊಳ್ಳುವವರು ಅಲ್ಲದೇ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿವಿಜಯಮಹಾಂತೇಶ ಬಿ. ದಾನಮ್ಮನವರ, ಜಿಲ್ಲಾ ಪೋಲಿಸ್ ಅಧೀಕ್ಷಕ ಅಂಶು ಕುಮಾರ ಘನ ಉಪಸ್ಥಿತಿವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಧರ್ಮಪ್ಪ ಶಿವಪ್ಪ, ಓಲೇಕಾರ, ಮಖಬೂಲ ಅಹ್ಮದ ಗುಜ್ಜರ, ಅಸ್ಕರ ಅಲಿ ಮುದ್ದೇರಿ, ಮೌಲಾಲಿ ಟಪಾಲ, ರಬ್ಬಾನಿ ಗೋಟಗೋಡಿ, ಅಬ್ದುಲಬಾದರ್ ಸವಣೂರ, ಇಮಾಮಹುಸೇನ ಅದಂಬಾಯಿ ಸೇರಿದಂತೆ ಅಹಲೇ ಸುನ್ನತ್ ವಲ್ ಜಮಾತ ಸಾಲಗೇರಿ ಓಣಿ ತಿಗ್ಗಾಂದ ಹಾಗೂ ಸರ್ವ ಸದಸ್ಯರು, ಅಹಲೇ ಸುನ್ನತ್ ವಬ್ ಜಮಾತನ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಕಾರ್ಯಕ್ರಮ ವ್ಯವಸ್ಥಾಪಕ ಜಿಲಾನಿ ಜಂಗ್ಲಿ ಪ್ರಕಟಣೆಗೆ ಕೋರಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 