ಅಸ್ಪಷ್ಟ ಆರ್ಥಿಕ ಚಿತ್ರಣ’ದ ಕೇಂದ್ರ ಮುಂಗಡ ಪತ್ರ ‘ನಿರಾಶಾದಾಯಕ’

ಅಸ್ಪಷ್ಟ ಆರ್ಥಿಕ ಚಿತ್ರಣ’ದ ಕೇಂದ್ರ ಮುಂಗಡ ಪತ್ರ ‘ನಿರಾಶಾದಾಯಕ’ Union Budget 'disappointing' with 'unclear economic picture'


ಗದಗ 02 : ಇಂದು ಕೇಂದ್ರ ಹಣಕಾಸು ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ರಾಷ್ಟ್ರದ ಆರ್ಥಿಕ ಪ್ರಗತಿಗೆ ಇಂಬು ಕೊಡಬಲ್ಲ ಮುಂಗಡ ಪತ್ರವಾಗಿರದೇ ರಾಷ್ಟ್ರದ ಅರ್ಥ ವ್ಯವಸ್ಥೆಯ ನೈಜ ಚಿತ್ರಣವನ್ನು ಮರೆಮಾಚಿದೆ. ರಾಜ್ಯಗಳಿಗೆ ಹಣಕಾಸು ಹಂಚಿಕೆ ಯಾವುದೇ ರೀತಿಯ ತಾರಕ್ಕಿಕ ಮತ್ತು ರಚನಾತ್ಮಕವಾಗಿರುವುದಿಲ್ಲ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ. ಪಾಟೀಲ ಹೇಳಿದ್ದಾರೆ. 

ಕೇಂದ್ರದ 2026-27ನೇ ಸಾಲಿನ ಬಜೆಟ್ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಘೋಷಣೆ ಮಾಡಿದ ವ್ಹಿಬಿಜಿ ಗ್ರಾಮಜಿ ಯೋಜನೆಗೆ ಎಷ್ಟು ತೆಗೆದಿರಿಸಿರುವುದಾಗಿ ಹೇಳದೇ ವ್ಹಿಬಿಜಿ ಗ್ರಾಮಜಿ ಯೋಜನೆಗೆ ತಿಲಾಂಜಲಿ ಇಟ್ಟಿದೆ. ಆಧಾಯಕರ ಮಿತಿಗಳನ್ನು ತರ್ಕಬದ್ದಗೊಳಿಸುವಿಕೆಯನ್ನು (ಖಚಿಣಠಚಿಟಚಿಣಠ) ಬಿಟ್ಟು ಹೊಸ ಹಣಕಾಸು ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ರಾಷ್ಟ್ರದ ಅರ್ಥವ್ಯವಸ್ಥೆಗೆ ತೀರಾ ಹಿನ್ನಡೆಯಾಗುತ್ತದೆ. ಆಧಾಯ ತೆರಿಗೆಯ ರಿಟರ್ನನನ್ನು ದಾಖಲಿಸುವಲ್ಲಿ ಮಾಡುವ ವಿಳಂಭವನ್ನು ಮನ್ನಾ ಮಾಡುವುದು ಮತ್ತು ರಿಟರ್ನನನ್ನು ಪರಿಷ್ಕರಿಸಲು ಅವಕಾಶ ನೀಡಿರುವುದು ಕಪ್ಪು ಹಣದ ಉತ್ಪತ್ತಿ ಹೆಚ್ಚಾಗಲು ಕಾರಣವಾಗುತ್ತದೆ.  

ಅದಲ್ಲದೇ ತೆರಿಗೆ ವಂಚನೆಯನ್ನು ನಿರಪರಾಧಿಕರಣಗೊಳಿಸಿರುವುದು ಸಹ ಕಪ್ಪು ಹಣದ ಸಂಗ್ರಹ ಮತ್ತು ಉತ್ಪತ್ತಿಗೆ ಕಾರಣವಾಗುತ್ತದೆ. ಕೇಂದ್ರ ಮುಂಗಡ ಪತ್ರದ ಎರಡು ಮೂರು ಕಡೆ ಕರ್ನಾಟಕದ ಹೆಸರು ಪ್ರಸ್ತಾಪವಾಗಿದ್ದರೂ ಸಹ ನೈಜ ಹಣಕಾಸಿನ ಸ್ಪಷ್ಟವಾದ ಉಲ್ಲೇಖವಿಲ್ಲದೇ ಯೋಜನೆಗಳು ಕೇವಲ ಕಾಗದದ ಹುಲಿಗಳಾಗಿವೆ. ಆದ್ದರಿಂದ ಅಸ್ಪಷ್ಟ  ಆರ್ಥಿಕ ಚಿತ್ರಣವನ್ನು ಒಳಗೊಂಡಿರುವ ಕೇಂದ್ರ ಮುಂಗಡ ಪತ್ರ ರಾಷ್ಟ್ರದ ಜನತೆಗೆ ನಿರಾಶಾದಾಯಕವಾಗಿದೆ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಕೆ. ಪಾಟೀಲ ಹೇಳಿದ್ದಾರೆ.