ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
Unidentified body case: Sankeshwar police solve woman's murder case; accused arrested.
ಬೆಳಗಾವಿ : ಸುಮಾರು ಒಂದೂವರೆ ತಿಂಗಳ ಹಿಂದೆ ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅನಾಮಧೇಯ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಆಗಿದ್ದಾರೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ತಿಳಿಸಿದರು.
ಬುಧವಾರ ತಮ್ಮ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ. 29ರಂದು ಕಣಗಲಾ ನಿವಾಸಿ ತಾನಾಜಿ ಯಲ್ಲಪ್ಪ ಶಟವು ಅವರು ನೀಡಿದ ಮಾಹಿತಿಯ ಮೇರೆಗೆ, ಮೇ 26ರಂದು ಸೊಲ್ಲಾಪೂರ ಗ್ರಾಮದ ಹದ್ದಿಯ ಪೂನಾ ಬೆಂಗಳೂರು ರಾಷ್ಟಿöçÃಯ ಹೆದ್ದಾರಿಯ ಪಶ್ಚಿಮ ಬದಿಯ ಸರ್ವಿಸ್ ರಸ್ತೆಯ ಬಳಿ ಸುಮಾರು 50–55 ವರ್ಷದ ಅನಾಮಧೇಯ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಜೂನ್ 1ರಂದು ಮಹಾರಾಷ್ಟçದ ಸಾಂಗಲಿ ಜಿಲ್ಲೆಯ ಶಬಾನಾ ಬಾದಶಾಹ ಮುಲ್ಲಾ ಅವರು ಠಾಣೆಗೆ ಆಗಮಿಸಿ, ಇನ್ಸ್ಟಾಗ್ರಾಂನಲ್ಲಿ ಪೊಲೀಸರು ಹಂಚಿಕೊಂಡಿದ್ದ ವಿಡಿಯೋ ನೋಡಿ ಮೃತಳು ತನ್ನ ತಾಯಿ ಎಂದು ಗುರುತಿಸಿದರು. ಮೃತೆಯನ್ನು ಬೇಬಿ ಬಾದಶಾಹ ಶೇಖ್(59), ಮೂಲತಃ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಶಾಹು ಕಾಲನಿ, ಟೆಂಬಳಾಯಿವಾಡಿ ನಿವಾಸಿ ಎಂದು ಗುರುತಿಸಲಾಯಿತು.
ಜುಲೈ 15ರಂದು ಶಬಾನಾ ಮುಲ್ಲಾ ನೀಡಿದ ದೂರಿನ ಮೇರೆಗೆ, ಮೃತೆಯೊಂದಿಗೆ ಹಣಕಾಸಿನ ವ್ಯವಹಾರ ಹೊಂದಿದ್ದ ಹಾಜಿಮಸ್ತಾನ ಮೈನುದ್ದೀನ್ ಭಾಗವಾನ್ ಎಂಬಾತನ ವಿರುದ್ಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 103(1) ಹಾಗೂ 238ರಡಿ ಕೊಲೆ ಪ್ರಕರಣ ದಾಖಲಾಗಿತ್ತು.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ (ಐಪಿಎಸ್), ಹೆಚ್ಚುವರಿ ಎಸ್ಪಿ ಆರ್.ಬಿ.ಬಸರಗಿ ಹಾಗೂ ಗೋಕಾಕ ಉಪವಿಭಾಗದ ಡಿಎಸ್ಪಿ ರವಿ ಡಿ. ನಾಯ್ಕ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್ಸೆö್ಪಕ್ಟರ್ ಜಿ.ಬಿ.ಕೊಂಗನೊಳ್ಳಿ ನೇತೃತ್ವದ ವಿಶೇಷ ತಂಡ ತನಿಖೆ ನಡೆಸಿ, ಕೊಲ್ಲಾಪುರದ ವಿಕ್ರಮ್ ನಗರ, ಜೋಶಿ ಗಲ್ಲಿ ನಿವಾಸಿ ಹಾಜಿಮಸ್ತಾನ ಮೈನುದ್ದೀನ್ ಭಾಗವಾನ ಈತನನ್ನು ಬಂಧಿಸಿತು.
ವಿಚಾರಣೆ ವೇಳೆ ಆರೋಪಿಯು ಮೃತೆಯಿಂದ 1.50 ಲಕ್ಷ ಸಾಲ ಪಡೆದಿದ್ದು, ಹಣ ವಾಪಸ್ ನೀಡುವಂತೆ ಆಕೆ ಪದೇಪದೇ ಒತ್ತಾಯಿಸುತ್ತಿದ್ದಳು ಎಂದು ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.
ಮೇ 25ರಂದು ಹಣ ನೀಡುವ ನೆಪದಲ್ಲಿ ಕಾರಿನಲ್ಲಿ ಕರೆದುಕೊಂಡು ಹೋಗಿ, ನೀರಿನ ಬಾಟಲಿಗೆ ವಿಷ ಬೆರೆಸಿ ಕುಡಿಸಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಭೇದಿಸುವಲ್ಲಿ ಸಂಕೇಶ್ವರ ಪೊಲೀಸ್ ಇನ್ಸಪೆಕ್ಟರ್ ಗಣಪತಿ ಬಿ.ಕೊಂಗನೊಳ್ಳಿ, ಪಿಎಸ್‌ಐ ವಿಠಲ ನಾಯಿಕ, ಎಎಸ್‌ಐ ಎಲ್.ಎಸ್.ಖೋತ, ಎಎಸ್‌ಐ ಸಿ.ಜೆ.ಸಾರಾಪೂರೆ ಹಾಗೂ ಸಿಬ್ಬಂದಿ ಜನರಾದ ಕೆ.ಡಿ.ಹಿರೇಮಠ, ಎಸ್.ಎಲ್.ಗಳತಗಿ, ಎಸ್.ಬಿ.ಪೂಜೇರಿ, ಎಸ್.ಎಮ್.ಯಕ್ಸಂಬಿ, ವಿ.ಜಿ.ಕುಡ್ಡಗೋಳ, ಎಮ್.ಕೆ.ಅತ್ತಾರ ಹಾಗೂ ಟೆಕ್ನಿಕಲ್ ಸೆಲ್ ಬೆಳಗಾವಿ ಸಿಬ್ಬಂದಿಯಾದ ವಿನೋದ ಠಕ್ಕನ್ನವರ, ಸಚೀನ ಪಾಟೀಲ ಇವರ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 