ಸರ್ವಜ್ಞ ಕವಿಯ ಸಂದೇಶ ಅರಿಯಿರಿ: ತಹಶೀಲ್ದಾರ್ ಬಿರಾದಾರ
Understand the message of the omniscient poet: Tahsildar Biradar
ಲೋಕದರ್ಶನ ವರದಿ
ದೇವರಹಿಪ್ಪರಗಿ 20: ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು ಸಂತ ಕವಿ ಸರ್ವಜ್ಞರು ತ್ರಿಪದಿ ವಚನಗಳ ಮೂಲಕ ತಿದ್ದಿದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ವಚನಗಳ ಸಂದೇಶವನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅಭಿಪ್ರಾಯಪಟ್ಟರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತ್ಯುತ್ಸವದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು.ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ಮೊದಲು ಪ್ರತಿಯೊಬ್ಬರ ಮನಸ್ಥಿತಿ ಬದಲಾಗಬೇಕು. ಲಿಂಗ, ಜಾತಿ ತಾರತಮ್ಯ ಹೋಗಲಾಡಿಸಿ, ಸಮಾಜದಲ್ಲಿ ಸಮಾನತೆ ತರುವ ಸಲುವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತ್ರಿಪದಿ ವಚನಗಳನ್ನು ರಚಿಸಿದ್ದಾರೆ. ಅಂತಹ ಪ್ರತಿಯೊಂದು ವಚನಗಳನ್ನು ಮಕ್ಕಳಿಗೆ ಕಲಿಸಬೇಕು. ಜೊತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷರಾದ ಜಿ.ಪಿ.ಬಿರಾದಾರ ಅವರು,ಉಪನ್ಯಾಸ ನೀಡಿ, ಸರ್ವಜ್ಞನು ಗರ್ವದಿಂದ ಕಲಿತವನಲ್ಲ, ಸರ್ವರೊಳು ಒಂದೊಂದು ನುಡಿ ಕಲಿತು ಸರ್ವಜ್ಞನಾದನು. 16ನೇ ಶತಮಾನದಲ್ಲಿ ಸರಳ ಭಾಷೆಯ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಮ್ಮ ತ್ರಿಪದಿಯ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿದವರಲ್ಲಿ ಕವಿ ಸರ್ವಜ್ಞ ಒಬ್ಬರಾಗಿದ್ದಾರೆ. ಸರ್ವಜ್ಞ ಎಂಬುವುದು ಸರ್ವವನ್ನು ತಿಳಿದವರು ಎಂದು ಸರ್ವಜ್ಞನ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಉಪತಹಸೀಲ್ದಾರ್ ಗಿರಿಜಾಬಾಯಿ ಸಜ್ಜನ, ಶಿರಸ್ತೇದಾರಗಳಾದ ಸುರೇಶ ಮ್ಯಾಗೇರಿ, ದಶರಥ ಭೋವಿ, ಸಮುದಾಯದ ಮುಖಂಡರುಗಳಾದ ಶಿವಾನಂದ ಕುಂಬಾರ, ಭೀಮರಾಯ ಕುಂಬಾರ, ಕಾಶಿನಾಥ ಕುಂಬಾರ, ಮಡಿವಾಳಪ್ಪ ಕುಂಬಾರ, ರಮೇಶ ಕುಂಬಾರ, ಬಸವರಾಜ ಕುಂಬಾರ, ಕಾಸಪ್ಪ ಕುಂಬಾರ, ಮಡಿವಾಳಪ್ಪ ಕುಂಬಾರ (ಮುಳಸಾವಳಗಿ) , ಚಿದಾನಂದ ಕುಂಬಾರ, ಬಸವರಾಜ ಕುಂಬಾರ, ಬಸವರಾಜ ಭದ್ರಗೊಂಡ, ರವಿ ಮೆಟಗಾರ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 