ನಿಲ್ಲದ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ರೈತರ ಪರದಾಟ
Unceasing strike of village administrative officers is the cause of farmers
ಇಂಡಿ 17 : ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಇಂಡಿ ಹಾಗೂ ಚಡಚಣ ಘಟಕ ವತಿಯಿಂದ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೈಗೊಂಡ ಮುಷ್ಕರ 8ನೇ ದಿನಕ್ಕೆ ಕಾಲಿಟ್ಟಿದ್ದೆ.
ಹೌದು ರಾಜ್ಯ ಸರ್ಕಾರ ನಮ್ಮ ನ್ಯಾಯಯುತವಾದ ವಿವಿಧ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಆದ್ದರಿಂದ ನಾವು ನಮ್ಮ ಬೇಡಿಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸುತ್ತಿದ್ದೆವೆ ಎಂದು ಇಂಡಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ವಾಯ್ ಎಲ್ ಪೂಜಾರಿ ಅವರು ಹೇಳಿದರು, ಆದರೆ ಸರ್ಕಾರ ಮಾತ್ರ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಬಗ್ಗೆ ಕ್ಯಾರೇ ಅನ್ನುತ್ತಿಲ, ಆದರೆ ಜನ ಸಾಮಾನ್ಯರ ಹಾಗೂ ರೈತರ ಪರದಾಟ ಯಾರು ಹೇಳ ತೀರದಾಗಿದೆ, ಏನು ಅಂತಾ ಅಲ್ಲಾ ಗಂಡ ಹೆಂಡರ ಮಧ್ಯೆ ಕೂಸು ಬಡು ವಾಯಿತು, ಎನ್ನುವಂಗ ಆಗಿದೆ ರೈತರ ಗೋಳು, ಈಗಾಗಲಾದರು ಸರ್ಕಾರ ಮಧ್ಯಪ್ರವೇಶ ಮಾಡಿ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳನ್ನು ಬಗೆಹರಿಸಿ, ರೈತರ ಹಾಗೂ ಜನ ಸಾಮಾನ್ಯರ ಕೆಲಸಗಳು ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರ ಆಗ್ರಹ ವಾಗಿದೆ.
ಇಂದಿನ ಮುಷ್ಕರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಉಪಾಧ್ಯಕ್ಷರಾದ ಎಸ್ ಎಸ್ ಲಾಳಸಂಗಿ, ಗ್ರಾಮ ಆಡಳಿತ ಅಧಿಕಾರಿಗಳಾದ ಮಾಹಾತೇಶ ಗುರುಬಟ್ಟಿ, ಎಸ್ ಎಸ್ ಮೋದಿ, ಎಮ್ ಆರ್ ರಾಠೋಡ, ಸಿದ್ದು ಪೂಜಾರಿ ವಿ ಎಮ್ ಕೊಳಿ, ಜೆ ಕೆ ಪಾಯಪ್ಪಗೋಳ, ಶಿವಾನಂದ ವಾಲಿಕಾರ, ಜಿ ಎಮ್ ಬಿರಾದಾರ, ಸಿದ್ದು ಪೂಜಾರಿ, ಪ್ರಕಾಶ್ ಚವಡಿಹಾಳ, ಮಹೇಶ್ ರಾಠೋಡ, ಮಸ್ತಾನ ನಧಾಪ್, ವಿದ್ಯಾ ಸರಸಂಬಿ, ಕವಿತಾ ಕರಜಗಿ, ಈರಮ್ಮ ಜೋಗುರ, ಶ್ವೇತಾ ಹಚಡದ, ಭೂಮಿಕಾ ಅವರಾದಿ, ಸೇರಿದಂತೆ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 