ಕೊಪ್ಪಳದ ಇನ್ನರ್ ವೀಲ್ ಕ್ಲಬ್‌ಗೆ ಅತ್ಯುತ್ತಮ ಕ್ಲಬ್ ಪ್ರಶಸ್ತಿ
Uma Tambralli gets Superstar President's Award
ಉಮಾ ತಂಬ್ರಳ್ಳಿಗೆ ಸೂಪರ್ ಸ್ಟಾರ್ ಅಧ್ಯಕ್ಷರ ಪ್ರಶಸ್ತಿ
ಕೊಪ್ಪಳ ಜೂಲೈ 16: ಕೊಪ್ಪಳ ಇನ್ನರ್ ವೀಲ್ ಕ್ಲಬ್ ಕಳೆದ 2024-25 ನೇ ಸಾಲಿನ ಉತ್ತಮ ಸೇವೆ ಮತ್ತು ಸಾಧನೆಗಾಗಿ ಅತ್ಯುತ್ತಮ ಕ್ಲಬ್ ಹಾಗೂ ಆ ಸಾಲಿನ ಅಧ್ಯಕ್ಷರಾಗಿ ಗಮನಾರ್ಹ ಸಾಧನೆ ಮಾಡಿ ಸೂಪರ್ ಸ್ಟಾರ್ ಅಧ್ಯಕ್ಷರ ಪ್ರಶಸ್ತಿಗೆ ಉಮಾ ಮಹೇಶ್ ತಂಬ್ರಳ್ಳಿ ಭಾಜನ ರಾಗಿದ್ದಾರೆಎಂದು ಆ ಸಾಲಿನ ಕ್ಲಬ್ ನ ಜಿಲ್ಲಾಧ್ಯಕ್ಷ ರಾಗಿದ್ದ ಸುಷ್ಮಾ ಪತಂಗೆ ಯವರು ಘೋಷಿಸಿ ಉಮಾ ತಂಬ್ರಳ್ಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಪಕ್ಕದ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಜರುಗಿದ ಇನ್ನರ್ ವೀಲ್ ಡಿಸ್ಟ್ರಿಕ್ಟ್ 316 ಆಯೋಜಿಸಿದ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಅಂತರ ರಾಜ್ಯ ಭಾಗದ ವಿವಿಧ ಜಿಲ್ಲೆ ಗಳಿಂದ ಸುಮಾರು 29 ಕ್ಲಬ್ ಗಳು ಭಾಗವಾಯಿಸಿದ ಕಾರ್ಯಕ್ರಮದ ಸಂದರ್ಭದಲ್ಲಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅತ್ಯುತ್ತಮ ಪ್ರಶಸ್ತಿಗೆ ಭಾಜನಾರಾದರೆ, ಕಳೆದ ಸಾಲಿನ 2024-25 ರಲ್ಲಿ ನೀರೀಕ್ಷಗೂ ಮೀರಿ ಸಾಧನೆಮಾಡಿರುವದಲ್ಲದೆ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ಕೂಡ ಪಡೆದುಕೊಂಡಿದ್ದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಹಾಗೂ ಆ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಉಮಾ ಮಹೇಶ್ ತಂಬ್ರಳ್ಳಿಗೆ ವಿಶೇಷ ಸೂಪರ್ ಸ್ಟಾರ್ ಅಧ್ಯಕ್ಷರ ಪ್ರಶಸ್ತಿ ಲಭಿಸಿದೆ. ಕ್ಲಬ್‌ನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವಲ್ಲಿ ತನ್ನ ಕ್ರಿಯಾತ್ಮಕ ಮತ್ತು ಕ್ರಿಯಾಶೀಲತೆ ನಾಯಕತ್ವದ ದೃಷ್ಟಿ ಹಾಗೂ ಸಮರೆ್ಣಗಾಗಿ ಉಮಾ ಮಹೇಶ್ ತಂಬ್ರಳ್ಳಿ ಗೆ ಸೂಪರ್ ಸ್ಟಾರ್ ಅಧ್ಯಕ್ಷರ ಪ್ರಶಸ್ತಿ ಲಭಿಸಿದೆ.
ಅದರಂತೆ ಅವರ ತಂಡದಲಿದ್ದ ನಾಗವೇಣಿ ಗರೂರ್ ರವರ ಸಂವಹನ ಮತ್ತು ಸೃಜನ ಶೀಲತೆ ಪ್ರಸ್ತುತಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಅತ್ಯುತ್ತಮ ಸಂಪಾದಕರೆಂದು ಗೌರವಿಸಲ್ಪಟ್ಟಿದೆ, ಅದರಂತೆ ಆಶಾ ಕವಲೂರ್ ರವರನ್ನು ಕ್ಲಬ್ ನ ಅತ್ತೂತ್ತಮ ಸದ್ಯಸತ್ವ ಶುಲ್ಕವನ್ನು ಸಂಗ್ರಹಿಸಲು ಮತ್ತು ಕ್ಲಬ್ ದಲ್ಲಿ ವೇಗವಾಗಿ ಠೇವಣಿ ಇಟ್ಟಿದ್ದಕ್ಕಾಗಿ ಅತ್ಯುತ್ತಮ ಖಜಾಂಚಿ ಎಂದು ಪರಿಗಣಿಸಿ ಅವರನ್ನು ಗೌರವಿಸಲಾಗಿದೆ ಹಾಗೂ ಮಧು ನಿಲೋಗಲ್ ರವರನ್ನು ಅಂತಾರಾಷ್ಟ್ರೀಯ ಸೇವೆ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ತನ್ನ ಅನುಕರಣಿಯ ಪ್ರದರ್ಶನಕ್ಕಾಗಿ ಅತ್ಯುತ್ತಮ ಐ ಎಸ್ ಓ ಎಂದು ಗುರುತಿಸಲ್ಪಟ್ಟಿದೆ ಮತ್ತು ಅವರನ್ನು ಅಭಿನಂದಿಸಲಾಗಿದೆ ,ಈ ಅತ್ಯುತ್ತಮ ತಂಡವು ಶ್ರೇಷ್ಠತೆ, ಸೇವೆ ಮತ್ತು ಸಬಲೀಕರಣಕ್ಕೆ ಮಾನದಂಡವನ್ನು ನಿಗದಿಪಡಿಸಿದ್ದು ಇದಕ್ಕೆ ಕೊಪ್ಪಳ ದ ಇನ್ನರ್ ವೀಲ್ ಕ್ಲಬ್ ಹೆಮ್ಮೆ ಮತ್ತು ಸ್ಫೂರ್ತಿಯ ಸಂಕೇತವಾಗಿದೆ ಎಂದು ಕೊಪ್ಪಳದ ಇನ್ನರ್ ವೀಲ್ ಕ್ಲಬ್ ಕಳೆದ 2024-25 ನೇ ಸಾಲಿನ ಅತ್ಯುತ್ತಮ ಸಾಧನೆಗಾಗಿ ಉಮಾ ಮಹೇಶ್ ತಂಬ್ರಳ್ಳಿ ಯವರಿಗೆ ಮತ್ತು ಅವರ ನೇತೃತ್ವದ ತಂಡಕ್ಕೆ ಹಲವು ಪ್ರಶಸ್ತಿಗಳನ್ನು ವಿತರಣೆ ಮಾಡಿ ಅವರೆಲ್ಲರಿಗೂ ಅಭಿನಂದಿಸಲಾಯಿತು.
ಕೊಪ್ಪಳ ಇನ್ನರ್ ಕ್ಲಬ್ ಗೆ ಕಳೆದ ಸಾಲಿನ ಅಭೂತ ಪೂರವ ಸಾಧನೆಗಾಗಿ ಪ್ರಶಸ್ತಿಗಳ ಸುರಿಮಳೆ ಯಾಗಿರೋದು ಹೆಮ್ಮೆಯ ವಿಷಯ , ಎಲ್ಲಡೆ ವ್ಯಾಪಾಕವಾಗಿ ಉಮಾ ಮಹೇಶ್ ತಂಬ್ರಳ್ಳಿ ಮತ್ತು ಅವರ ತಂಡಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಕೊಪ್ಪಳ ದಲ್ಲಿ ಹರ್ಷದ ವಾತಾವರಣ ನಿರ್ಮಾಣಗೊಂಡು ಅಭಿನಂದನೆಗಳ ಮಹಾಪುರ ಹರಿದು ಬರುತ್ತಿವೆ.
ಪ್ರಶಸ್ತಿ ಸ್ವೀಕರಿಸಿದ ಈ ಶುಭ ಸಂದರ್ಭದಲ್ಲಿ ಅವರೊಂದಿಗೆ ಕ್ಲಬ್ಬಿನ ಹಿರಿಯ ಸದಸ್ಯರಾದ ಡಾ. ರಾಧಾ ಕುಲಕರ್ಣಿ, ಸುಜಾತಾ ಪಟ್ಟಣಶೆಟ್ಟಿ ಪ್ರತಿಮಾ ಪಟ್ಟಣಶೆಟ್ಟಿ ಪದ್ಮ ಜೈನ್, ಮಮತಾ ಶೆಟ್ಟರ್ ಸುಧಾ ಶೆಟ್ಟರ್ ನೀತಾ ತಂಬ್ರಳ್ಳಿ, ಶಾರದಾ ದಾದ್ಮಿ, ನೂತನ ಅಧ್ಯಕ್ಷರಾದ ಮಧು ಶೆಟ್ಟರ್, ನೂತನ ಕಾರ್ಯದರ್ಶಿ ರೇಖಾ ಕಡ್ಲಿ, ನೂತನ ಉಪಾಧ್ಯಕ್ಷ ರಾದ ಮೀನಾಕ್ಷಿ ಬಣ್ಣದ ಬಾವಿ, ಸೇರಿದಂತೆ ಪರಿಮಳ ಜಯ ಶ್ರೀ, ಲತಾ ಪಟ್ಟಣಶೆಟ್ಟಿ ಹೇಮಾ ಬಳ್ಳಾರೀ, ನಾಗವೇಣಿ ಗರೂರು, ಸುವರ್ಣ ಶೆಟ್ಟರ್, ಅನಿತಾ ಬಜಾರ್ ಮಠ, ನಾಗರತ್ನ, ಶಕುಂತಲಾ ಮಾಲಿಪಾಟೀಲ್ ಇನ್ನು ಅನೇಕರು ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 