ಟೆಹ್ರಾನ್ ಬಳಿ ಉಕ್ರೇನಿಯನ್ ವಿಮಾನ ಅಪಘಾತ

ಮಾಸ್ಕೋ, ಜ 8 ಇರಾನ್ನ ಖೊಮೇನಿ ವಿಮಾನ ನಿಲ್ದಾಣದ ಬಳಿ 180 ಪ್ರಯಾಣಿಕರಿದ್ದ ಉಕ್ರೇನಿಯನ್ ವಿಮಾನ ಅಪಘಾತಕ್ಕೀಡಾಗಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಅಪಘಾತ ಸಂಭವಿಸಿದೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.ಕೀವ್ಗೆ ಹೋಗುವ ಬೋಯಿಂಗ್ 737 ವಿಮಾನವಾಗಿದ್ದು ಇದರಲ್ಲಿ ಇದ್ದ ಪ್ರಯಾಣಿಕರ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಹೆಚ್ಚಿನ ವಿವರಗಳನ್ನು ಕಾಯಲಾಗುತ್ತಿದೆ.