ಉಕ್ರೇನ್ ವಿಮಾನಾಪಘಾತ : 180 ಪ್ರಯಾಣಿಕರ ಸಾವು

ತೆಹ್ರಾನ್, ಜ 08 ತೆಹ್ರಾನ್ನಲ್ಲಿ ಉಕ್ರೇನಿಯನ್ ವಿಮಾನ ಅಪಘಾತ ಸಂಭವಿಸಿದ್ದು, 180 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ನೂರಾ ಎಂಭತ್ತು ಪ್ರಯಾಣಿಕರಿದ್ದ 732 ಬೋಯಿಂಗ್ ವಿಮಾನವು ಇಮಾಮ್ ಖೊಮೈನಿ ಏರ್ಪೋಟ್ನರ್ಿಂದ ಟೇಕ್ ಆಫ್ ಆದ ಬಳಿಕ ಅಪಘಾತ ಸಂಭವಿಸಿದೆ. ಇರಾನಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನವು ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಘಟನೆಯ ಬಳಿಕ ರಾಷ್ಟ್ರೀಯ ವಾಯುಯಾನ ಇಲಾಖೆಯ ತನಿಖಾ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಮುಂದಿನ ಪ್ರಕಟಣೆಗಳಲ್ಲಿ ಹೆಚ್ಚಿನ ವರದಿಗಳನ್ನು ನೀಡುತ್ತೇವೆ" ಎಂದು ಇರಾನಿನ ವಾಯುಯಾನ ಸಂಸ್ಥೆ ತಿಳಿಸಿದೆ. ಇರಾಕ್ನಲ್ಲಿ ಅಮೆರಿಕ ಮಿಲಿಟರಿ ಮತ್ತು ಸಮ್ಮಿಶ್ರ ಪಡೆಗಳ ವಿರುದ್ಧ ಇರಾನ್ ಒಂದು ಡಜನ್ಗೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ ಕೆಲವೇ ಗಂಟೆಗಳ ನಂತರ ಈ ಘಟನೆ ಸಂಭವಿಸಿದೆ.