ನಾಳೆಯಿಂದ ಉಡಾನ 12 ಉತ್ಸವ: ಗಂಗಾಧರ ಕೋಟಗಿ
Udana 12 festival from tomorrow: Gangadhar Kotagi
ಸಂಕೇಶ್ವರ 07: ಎಸ್.ಡಿ.ವ್ಹಿ.ಎಸ್. ಸಂಘದ ಆಶ್ರಯದಲ್ಲಿ ಎ.ಬಿ. ಪಾಟೀಲ ಪಬ್ಲಿಕ ಸ್ಕೂಲದಲ್ಲಿ "ಉಡಾನ 12" ಉತ್ಸವವನ್ನು ಜನೇವರಿ 9 ಮತ್ತು 10 ರಂದು ಜರುಗುವುದು. ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮಗಳು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಮತ್ತು ವಾರ್ಷಿಕ ಸ್ನೇಹ ಸಮ್ಮೇಲನ ಕಾರ್ಯಕ್ರಮಗಳು ಜರುಗಲಿವೆಂದು ಸಂಘದ ಕಾರ್ಯದರ್ಶಿ ಗಂಗಾಧರ ಚನ್ನಬಸಪ್ಪಾ ಕೋಟಗಿ ಅವರು
ಇಂದು ಸಿ.ಬಿ.ಎಸ್. ಶಾಲೆಯ ಕೊಠಡಿಯಲ್ಲಿ ಕರೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ದಿನಾಂಕ 9ರಂದು ಎಲ್.ಜಿ.ಬಿ. ಚೇರಮನ್ ಹಾಗೂ ನಿರ್ದೇಶಕ ವಿನಯ ಅಪ್ಪಯಗೌಡಾ ಪಾಟೀಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು ಮುಖ್ಯ ಅತಿಥಿಗಳಾಗಿ ಅಡ್ಮಿನಿಸ್ಟ್ರೇಟರ ಗ್ರೇಟರ್ ಬೆಂಗಳೂರು ಅಥೋರಿಟಿ ರವೀಂದ್ರ ಕರಲಿಂಗನವರ, ಗೌರಾವಾನ್ವಿತ ಅತಿಥಿ ಮಹೇಶ ಮುರಗೋಡ ಜಂಟಿ ನಿರ್ದೇಶಕರು ತೋಟಗಾರಿಕೆ ಬೆಳಗಾವಿ, ಇವರು ಉಪಸ್ಥಿತರಿರುವರು.
ದಿ. 10ರಂದು ಮಾಜಿ ಸಚಿವ ಸಂಘದ ಕಾರ್ಯಾಧ್ಯಕ್ಷ ಎ.ಬಿ.ಪಾಟೀಲ ಇವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಗೌರವಾನ್ವಿತ ಅತಿಥಿ ಮಹೇಶ ಬೆಲ್ಲದ, ಎಮ್.ಡಿ. ಮತ್ತು ಸಿ.ಇ.ಓ. ಆನಲೈನ್ ಇನ್ಸು-್ಟ್ರಮೆಂಟ ್ಘ ಮ್ಯಾಶಬೆಲ್ ಇಂಡಸ್ಟ್ರೀಸ್ ಬೆಂಗಳೂರು ಇವರೆಲ್ಲರೂ ಉಡಾನ ಉತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಬಗ್ಗೆ ಮಾತನಾಡುವರು.
ಬಡ ರೈತರ ಹಾಗೂ ಗ್ರಾಮೀಣ ಭಾಗದ ಮಕ್ಕಳ ಸಲುವಾಗಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ ದಿವಂಗತ ಅಪ್ಪಣಗೌಡಾ ಪಾಟೀಲ ಮತ್ತು ಬಸಗೌಡಾ ಪಾಟೀಲ ಇವರ ಮಾರ್ಗದರ್ಶನದಲ್ಲಿ ಈ ಶಿಕ್ಷಣ ಸಂಸ್ಥೆಗಳು ಬೆಳೆದು ಹೆಮ್ಮರವಾಗಿ ಬೆಳೆದಿವೆ. ಎಸ್.ಡಿ. ಹಾಯಸ್ಕೂಲ ಶತಮಾನ ಉತ್ಸವದ ಅಂಚಿನಲ್ಲಿದೆ ಎಂದು ಕೋಟಗಿ ಅವರು ತಿಳಿಸಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲಿ ಹಿರಿಯ ನಿರ್ದೇಶಕ ಆರ್.ಬಿ.ಪಾಟೀಲ, ಡಾ. ಬಿ.ಎ. ಪೂಜಾರಿ, ಇವರೆಲ್ಲರೂ ಸಹಿತ "ಉಡಾನ 12" ಉತ್ಸವದ ಬಗ್ಗೆ ಮಾಹಿತಿ ನೀಡಿದರು. ಪ್ರಾರಂಭದಲ್ಲಿ ಭಾರಗಿ ಕುನ್ನುಕರ ಇವರು ಪತ್ರಕರ್ತರನ್ನು ಸ್ವಾಗತಿಸಿದರು. ಗಜೇಂದ್ರ ಪವಾರ ಇವರು ಆಭಾರ ಮನ್ನಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 