ಇರಾಕ್ ವಾಯು ನೆಲೆ ಮೇಲೆ ರಾಕೆಟ್ ದಾಳಿ ಅಮೆರಿಕಾ ಖಂಡನೆ

ವಾಷಿಂಗ್ಟನ್, ಜ 13, ಇರಾಕ್ ನ  ಕೇಂದ್ರೀಯ  ಸಲಾಹುದ್ದೀನ್  ಪ್ರಾಂತ್ಯದ   "ಅಲ್ ಬಲಾದ್"   ಅಮೆರಿಕಾ  ವಾಯುನೆಲೆಯ ಮೇಲೆ  ಇರಾನ್  ರಾಕೆಟ್ ದಾಳಿ  ನಡೆಸಿ ನಾಲ್ವರು  ವಾಯುಪಡೆ ಸಿಬ್ಬಂದಿಯನ್ನು ಗಾಯಗೊಳಿಸಿರುವ ಕೃತ್ಯವನ್ನು  ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಖಂಡಿಸಿದ್ದಾರೆ.

ಇರಾಕಿ ವಾಯುನೆಲೆ ಮೇಲೆ ಮತ್ತೊಂದು ರಾಕೆಟ್ ದಾಳಿಯ ವರದಿಯಿಂದ ಆಕ್ರೋಶಗೊಂಡಿದ್ದೇವೆ.  ಗಾಯಗೊಂಡವರು ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ.  ಇರಾಕಿ ಜನರ ಮೇಲೆ  ನಡೆದ  ಈ ದಾಳಿಯ ಹೊಣೆಯನ್ನು ಇರಾನ್ ಸರ್ಕಾರ  ಹೊರಬೇಕು ಎಂದು ಒತ್ತಾಯಿಸುವುದಾಗಿ  ಪಾಂಪಿಯೋ ಟ್ವೀಟ್ ನಲ್ಲಿ ತಿಳಿಸಿದ್ದಾರೆ.ದೇಶಕ್ಕೆ ನಿಷ್ಟರಲ್ಲದ  ಗುಂಪುಗಳು, ಇರಾಕ್   ಸಾರ್ವಭೌಮತ್ವ  ಉಲ್ಲಂಘನೆಯನ್ನು   ಅಂತ್ಯಗೊಳಿಸಬೇಕು   ಎಂದು ಅವರು  ಕರೆ ನೀಡಿದ್ದಾರೆಇರಾಕ್ ಸಾರ್ವಭೌಮತ್ವ  ಉಲ್ಲಂಘನೆಯನ್ನು  ಮುಂದುವರಿಸಿರುವ  ಈ  ಗುಂಪುಗಳು   ಇರಾಕ್ ಸರ್ಕಾರಕ್ಕೆ ನಿಷ್ಟರಾಗಿಲ್ಲ ಹಾಗಾಗಿ ಈ ದಾಳಿಗಳನ್ನು ಅಂತ್ಯಗೊಳಿಸಬೇಕು ಎಂದು ಅವರು  ಹೇಳಿದ್ದಾರೆ.ದಾಳಿ ಸಂಬಂಧ ಯಾರ ವಿರುದ್ದವೂ ಆರೋಪ ಮಾಡದೆ ಸಂಯಮ ವಹಿಸಿರುವ ಮೈಕ್ ಪಾಂಪಿಯೋ, ಈ ಪ್ರದೇಶದಲ್ಲಿ ಸಕ್ರೀಯವಾಗಿರುವ ಇರಾನ್ ಪರ  ಸೇನಾ ಗುಂಪುಗಳು  ಇರಾಕ್ ನಲ್ಲಿರುವ ಅಮೆರಿಕಾ ಪಡೆಗಳಿಗೆ  ಪದೇ ಪದೇ ಬೆದರಿಕೆಯೊಡ್ಡಿವೆ ಎಂದು ಹೇಳಿದ್ದಾರೆ

ಭಾನುವಾರ  ರಾತ್ರಿ   ಇರಾಕ್ ನ  ಸಲಾಹುದ್ದೀನ್  ಕೇಂದ್ರೀಯ ಪ್ರಾಂತ್ಯದ  "ಅಲ್ ಬದಾದ್"   ವಾಯು ನೆಲೆಯ ಮೇಲೆ  ಎಂಟು ರಾಕೆಟ್ ದಾಳಿ  ನೆಡಸಲಾಗಿದ್ದು, ಕನಿಷ್ಟ ನಾಲ್ವರು ಇರಾಕ್ ವಾಯುಪಡೆ ಸಿಬ್ಬಂದಿ ಗಾಯಗೊಂಡಿದ್ದರು.ಈ ವಾಯುನೆಲೆಯಲ್ಲಿ ಹಿಂದೆ ಅಮೆರಿಕಾಪಡೆಗಳು ನೆಲೆಸಿದ್ದವು, ಯಾವುದೇ ಅಮೆರಿಕನ್ನರು ದಾಳಿಯಲ್ಲಿ ಗಾಯಗೊಂಡಿರುವ  ಬಗ್ಗೆ ವರದಿಯಾಗಿಲ್ಲ