ಜೂ.2ರಂದು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ: ಸರ್ವ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಧಾರವಾಡ.29: ಬರುವ ಜೂನ್ 2 ರಂದು ಧಾರವಾಡದ 37 ಪರೀಕ್ಷಾ ಕೇಂದ್ರಗಳಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗದ (ಯುಪಿಎಸ್ಸಿ) 2019 ರ ನಾಗರಿಕ ಸೇವಾ ಪೂರ್ವಭಾವಿ ಹಂತದ ಪರೀಕ್ಷೆಗಳು ಜರುಗಲಿವೆ. 13,384 ಅಭ್ಯಥರ್ಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅರ್ಹ ಅಭ್ಯಥರ್ಿಗಳು ನಿಗದಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರಬೇಕು. ಪರೀಕ್ಷೆಯ ಮೇಲ್ವಿಚಾರಣಾ ಅಧಿಕಾರಿಗಳು,ಅಧೀಕ್ಷಕರು ಹಾಗೂ ಅಭ್ಯಥರ್ಿಗಳು ಮೊಬೈಲ್ ಸೇರಿದಂತೆ ಯಾವುದೇ ವಿದ್ಯನ್ಮಾನ ಗ್ಯಾಜೆಟ್ಗಳನ್ನು ಬಳಸುವದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು(ಬುಧವಾರ) ಬೆಳಿಗ್ಗೆ ನಡೆದ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.      ಪರೀಕ್ಷೆಗೆ ನಿಯೋಜನೆಗೊಂಡಿರುವ ಎಲ್ಲ ಮಾರ್ಗ ಅಧಿಕಾರಿಗಳು, ಮುಖ್ಯ ಅಧೀಕ್ಷಕರು ಅಚ್ಚುಕಟ್ಟಾಗಿ ಪರೀಕ್ಷೆಗಳನ್ನು ನಡೆಸಲು ಯುಪಿಎಸ್ಸಿ ನೀಡಿರುವ ಎಲ್ಲಾ ನಿದರ್ೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಶ್ನೆ ಪತ್ರಿಕೆಗಳ ಪೆಟ್ಟಿಗೆಗಳ ಸಾಗಣೆ, ಪ್ಯಾಕೆಟ್ಟುಗಳು ವಿತರಣೆ ಹಾಗೂ ಪ್ರಶ್ನೆ ಪತ್ರಿಕೆಗಳನ್ನು  ಅಭ್ಯಥರ್ಿಗಳು ತೆರೆಯಬೇಕಾದ ಸಮಯವು ನಿಗದಿತವಾಗಿ ನಡೆಯಬೇಕು.

  ಪರೀಕ್ಷಾ ಆಸನ ವ್ಯವಸ್ಥೆ ಹಾಗೂ ಕೊಠಡಿಗಳ ಮಾರ್ಗಗಳನ್ನು ಸೂಚಿಸುವ ಫಲಕಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲರಿಗೂ ಕಾಣುವಂತೆ ಅಳವಡಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಮೊಬೈಲ್ ಜಾಮರ್ಗಳನ್ನು ಹಾಕಲಾಗುವುದು.

      ಪರೀಕ್ಷೆಗೆ ಸಂಬಂಧಿಸಿದ ಯುಪಿಎಸ್ಸಿಯ ಎಲ್ಲಾ ಅನುಬಂಧಗಳನ್ನು ಪರೀಕ್ಷಾ ಕೇಂದ್ರಗಳ ಅಧೀಕ್ಷಕರು ಭತರ್ಿ ಮಾಡಿ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

    ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಡೆಸ್ಕ್ಗಳು, ಗಾಳಿ,ಬೆಳಕು,ಕುಡಿಯುವ ನೀರು, ಶೌಚಾಲಯಗಳಂತಹ ಕನಿಷ್ಟ ಮೂಲಭೂತ ಸೌಕರ್ಯಗಳ ಕಡೆಗೂ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಯುಪಿಎಸ್ಸಿ ಪರೀಕ್ಷೆಗಳ ನೋಡಲ್ ಅಧಿಕಾರಿಯಾಗಿರುವ,ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎಂ.ಎಲ್.ಹಂಚಾಟೆ ಮಾತನಾಡಿ, ಪರೀಕ್ಷೆ ನಡೆಸುವ  ವಿಧಿ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಉಪ ಪೊಲೀಸ್ ಆಯುಕ್ತ ಶಿವಕುಮಾರ್, ಎಸಿಪಿ ಎಂ.ಎನ್.ರುದ್ರಪ್ಪ ಸೇರಿದಂತೆ ಎಲ್ಲಾ 37 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು,ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.