ಯುಕೆ ವಾರಿಯರ್ಸ್ ತಂಡಕ್ಕೆ ಕೆಸರಗೊಪ್ಪ ಪ್ರೀಮಿಯರ್ ಲೀಗ್ ಟ್ರೋಫಿ
UK Warriors win Kesaragoppa Premier League trophy
ಸಮೀರವಾಡಿ 29: ಇದೇ ಮೊದಲ ಬಾರಿಗೆ ಸಮೀರವಾಡಿ ಸಮೀಪದ ಕೆಸರಗೊಪ್ಪ ಗ್ರಾಮದಲ್ಲಿ ಮೂರು ದಿನಗಳ ಕಾಲ ಜರುಗಿದ ಕೆಸರಗೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಬಹುಮಾನದ ಟ್ರೋಫಿಯನ್ನು ಮಹಾಲಿಂಗಪುರದ ಯುಕೆ ವಾರಿಯರ್ಸ್ ತಂಡ ಗೆದ್ದುಕೊಂಡಿತು. ಕೆಸರಗೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ತರುಣ ಕ್ಷೇಮಾಭಿವೃದ್ಧಿ ಸಂಘ ಹಾಗೂ ನೇತಾಜಿ ಸ್ಪೋರ್ಟ್ಸ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೆಸರಗೊಪ್ಪ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟು ್ಟ8 ತಂಡಗಳು ಭಾಗವಹಿಸಿದ್ದವು. ಚಿಮ್ಮಡದ ವೀರ ಮದಕರಿ ತಂಡವು ದ್ವಿತೀಯ, ರನ್ನಬೆಳಗಲಿಯ ಬೆಳಗಲಿ ಬ್ರದರ್ಸ್ ತಂಡ ತೃತೀಯ ಬಹುಮಾನ ಪಡೆದುಕೊಂಡವು.
ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ದೈಹಿಕ ಶಿಕ್ಷಕ ಡಿ.ಎಂ.ಬ್ಯಾಕೂಡ ಅವರು ಮಾತನಾಡಿ, ನಮ್ಮ ಗ್ರಾಮದ ಯುವಕರು ಮೊದಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಆಟಗಾರರರಿಗೆ ಪ್ರೋತ್ಸಾಹ ನೀಡಿದ್ದು ಸ್ವಾಗತಾರ್ಹ. ಯುವಕರ ಕನಸಿಗೆ ಗ್ರಾಮದ ಹಿರಿಯರು ಪಕ್ಷಾತೀತ ಮತ್ತು ಜಾತ್ಯತೀತವಾಗಿ ಪಂದ್ಯಾವಳಿಗೆ ಪ್ರೋತ್ಸಾಹ, ಬೆಂಬಲ ನೀಡುವ ಮೂಲಕ ಪಂದ್ಯಾವಳಿ ಯಶಸ್ವಿಗೆ ಸಹಕರಿಸಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವಿವಿಧ ತಂಡಗಳ ಆಟಗಾರರಿಗೆ ಅಭಿನಂದಿಸಿದರು.
ಗ್ರಾಮದ ಹಿರಿಯರಾದ ಭೀಮಸಿ ಬ್ಯಾಕೂಡ, ಸಿದ್ದು ಸತ್ತಿಗೇರಿ, ಪ್ರಭು ಹುಬ್ಬಳ್ಳಿ ಷಣ್ಮುಖ ಸುತಾರ, ಶಿವಯ್ಯ ಮಠಪತಿ, ಮಹಾಲಿಂಗ ಮಾದರ, ರಾಮಚಂದ್ರ ಮೇತ್ರಿ, ಪರಶುರಾಮ ಮಾದರ, ಬಸವರಾಜ ಮರನೂರ, ನಾರಾಯಣ ನಿಕ್ಕಂ, ಬಸವರಾಜ ಢವಳೇಶ್ವರ, ಪ್ರಶಾಂತ ನ್ಯಾಮಗೌಡ, ಸಚಿನ ಸತ್ತಿಗೇರಿ, ರಾಯಪ್ಪಗೌಡ ಪಾಟೀಲ, ಪ್ರಶಾಂತ ದೇಸಾಯಿ, ಮಲ್ಲಪ್ಪ ಜಗದಾಳ, ಲಕ್ಷ್ಮಣ ಹುಣಶ್ಯಾಳ, ರಾಹುಲ್ ಹುಣಸಿಕಟ್ಟಿ ಪರಶುರಾಮ ಮಾದರ, ಮಾನಿಂಗ ಮಾದರ, ಹಣಮಂತ ಬ್ಯಾಕೂಡ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 