ಅನ್ನ ದಾಸೋಹ, ಅಂಬ್ಯುಲನ್ಸ ಸೇವೆಗೆ ಎರಡು ವರ್ಷ: ಉದ್ಯಮಿ ರವಿ ಪೂಜಾರಿ
Two years for food distribution, ambulance service: Businessman Ravi Poojary
ಅಥಣಿ, 18 ; ಆರ್.ಎಸ್.ಪಿ ಸಮೂಹ ಸಂಸ್ಥೆಯಿಂದ ಪ್ರಾರಂಭಿಸಿದ ಅನ್ನ ದಾಸೋಹ ಮತ್ತು ಉಚಿತ ಅಂಬ್ಯುಲನ್ಸ ಸೇವೆ ಪ್ರಾರಂಭಗೊಂಡು ಶ್ರಾವಣ ಮಾಸದ ನಾಲ್ಕನೇಯ ಸೋಮವಾರದಂದು ಎರಡು ವರ್ಷಗಳಾಗಿದ್ದು, ಈ ಎರಡೂ ಸೇವೆಗಳಿಂದ ಸಾವಿರಾರು ಬಡ, ನಿರ್ಗತಿಕ, ಅನಾಥರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾಕಷ್ಟು ಅನಕೂಲವಾಗಿದೆ ಎಂದು ಉದ್ಯಮಿ, ಆರ್.ಎಸ್.ಪಿ ಸಮೂಹ ಸಂಸ್ಥೆಯ ಅಧ್ಯಕ್ಷ ರವಿ ಪೂಜಾರಿ ಹೇಳಿದರು.
ಅವರು ಸುದ್ದಿಗೋಷ್ಟಿಯಲ್ಲಿ ಆರ್.ಎಸ್.ಪಿ ಕಛೇರಿಯಲ್ಲಿ ಮಾತನಾಡುತ್ತಿದ್ದರು. ಪ್ರಾರಂಭದಲ್ಲಿ ಇದು ಎಷ್ಟು ದಿನ ನಡೆಸಿಕೊಂಡು ಹೋಗುತ್ತಾರೋ ಎಂದು ಅನೇಕರು ಹಗುರವಾಗಿ ನಮ್ಮ ಸಂಸ್ಥೆಯ ಸೇವೆಯ ಬಗೆಗೆ ಮಾತನಾಡಿದ್ದರು ಆದರೆ ಅಥಣಿಯ ಮಹಾ ಜನತೆ, ಸಂಘ ಸಂಸ್ಥೆಗಳ ಸಹಕಾರದಿಂದ ಈ ಎರಡೂ ಸೇವೆಗಳು ಎರಡು ವರ್ಷಗಳಿಂದಲೂ ನಿರಂತರವಾಗಿ ಮುನ್ನಡೆಯುತ್ತಿವೆ ಎಂದ ಅವರು ಅನ್ನ ದಾಸೋಹ ಮತ್ತು ಉಚಿತ ಅಂಬ್ಯುಲನ್ಸ ಸೇವೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅಥಣಿ ಮಹಾ ಜನತೆಯಲ್ಲಿ ಮನವಿ ಮಾಡಿದರು.
ಜೀವನ ಎಂದರೆ ಹಣ ಗಳಿಸುವುದು ಮತ್ತು ಅದನ್ನು ಅನುಭವಿಸುವುದಷ್ಟೇ ಅಲ್ಲ ಗಳಿಕೆ ಮಾಡಿದ ಹಣವನ್ನು ಸೇವಾ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದ ಅವರು ರಾಜಕೀಯ ಕ್ಷೇತ್ರದ ಬಗೆಗೆ ಇಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಆದರೆ ಅವಕಾಶ ಸಿಕ್ಕಿದಲ್ಲಿ ಸದುಪಯೋಗ ಮಾಡಿಕೊಳ್ಳುವೆ ಎಂದರು.
ಸಮಾಜ ಸೇವಕ ಆನಂದ ಹಡಗಿನಾಳ ಮಾತನಾಡಿ ಉದ್ಯಮಿ ರವಿ ಪೂಜಾರಿ ಅನೇಕ ವರ್ಷಗಳಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅವರ ಸಾಮಾಜಿಕ ಕಾರ್ಯಗಳಿಗೆ ನಾವೆಲ್ಲ ಸಹಕಾರ ನೀಡೋಣ ಎಂದರು.ಈ ಸಂದರ್ಭದಲ್ಲಿ ತೆವರಟ್ಟಿಯ ವಿಠ್ಠಲ್ ಮಹಾರಾಜರು, ಪ್ರಕಾಶ ಹಿಡಕಲ್ ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 