ತೋಳದ ದಾಳಿಗೆ ಎರಡು ಕುರಿಗಳು ಬಲಿ: ಮಹಿಳೆ ಕಂಗಾಲು
Two sheep killed in wolf attack: Woman distraught
ಇಂಡಿ 30: ರೈತ ಈ ದೇಶದ ಬೆನ್ನೆಲುಬು ರೈತರು ತನ್ನ ದೈನಂದಿಕ ಜೀವನಕ್ಕಾಗಿ ವ್ಯವಸಾಯದ ಜೊತೆಗೆ ಮತ್ತೊಂದು ಕಸುಬು ಮಾಡಿದ್ದಾಗ ಮಾತ್ರ ಜೀವನ ಸಾಗುತ್ತದೆ.ಆದರೆ ಆ ವಿಧಿ ಆಟದಿಂದ ರೈತನ ಕನಸು ನೂಚ್ಚು ನೂರಾಗಿ ಬದುಕು ಮೂರಾಬಟ್ಟೆ ಆಗುತ್ತದೆ ಎಂಬೂವುದಕ್ಕೆ ಈ ಘಟನೆ ಉದಾಹರಣೆ ಹೌದು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ನಿನ್ನೆ ಮಧ್ಯಾಹ್ನ 01-00 ಗಂಟೆ ಸುಮಾರಿಗೆ ಎರಡು ತೋಳಗಳು ಬಡ ರೈತನಿಗೆ ಸೇರಿದ ಕುರಿಗಳ ದೊಡ್ಡಿಗೆ ಹೊಕ್ಕು ಎರಡು ಕುರಿಗಳನ್ನು ಕೊಂದು ಹಾಕಿವೆ,ಈ ಕುರಿಗಳು ತಡವಲಗಾ ಗ್ರಾಮದ ಬಸವರಾಜ ಸಂಗಪ್ಪ ಜಾಡರ ಎಂಬುವರಿಗೆ ಸೇರಿದ ಕುರಿಗಳ ಎಂದು ತಿಳಿದುಬಂದಿದೆ. ರೈತ ಬಸಪ್ಪ ಜಾಡರ ಹಾಗೂ ಪತ್ನಿ ಶಶಿಕಲಾ ಅವರು ಕುರಿಗಳನ್ನು ದೊಡ್ಡಿಯಲ್ಲಿ ಕಟ್ಟಿ ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾರೆ.
ಮನೆಯಲ್ಲಿ ಸುಮಾರು ಎಂಬತ್ತು ವರ್ಷ ವಯಸ್ಸಿನ ಅಜ್ಜಿಯನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ.ಆದರೆ ಮದ್ಯಾಹ್ನ ಒಂದುವರೆ ಸುಮಾರಿಗೆ ಎರಡು ತೋಳಗಳು ದೊಡ್ಡಿಯಲ್ಲಿ ಕಟ್ಟಿದ ಎರಡು ಕುರಿಗಳನ್ನು ಕೊಂದು ಹಾಕಿವೆ.ಈ ಸಪ್ಪಳ ಕೇಳಿದ ಅಜ್ಜಿ ಹೋರಗಡೆ ಬರುತ್ತಿದ್ದಂತೆ ತೋಳಗಳು ಓಡಿ ಹೋಗಿ ಇದನ್ನು ಕಂಡ ಅಜ್ಜಿ ಚಿರಲು ಪ್ರಾರಂಬಿಸಿದ್ದಾಳೆ.ನಂತರ ನೆರೆ ಹೊರೆ ಬರುವಷ್ಟರಲ್ಲಿ ಎರಡು ಕುರಿಗಳನ್ನು ದೊಡ್ಡಿಯಲ್ಲಿ ಸತ್ತು ಹೋಗಿವೆ.ಈ ಸುದ್ದಿ ತಿಳಿದು ಇಂಡಿ ಗ್ರಾಮೀಣ ಅರಣ್ಯ ಇಲಾಖೆಯ ತಡವಲಗಾ ಬಿಟ್ ಪ್ರವೀಣಕುಮಾರ ಹಚ್ಚಾಳಕರ್ ಹಾಗೂ ತಡವಲಗಾ ಗ್ರಾಮ ಆಡಳಿತ ಅಧಿಕಾರಿ ಮಾಹಾತೇಶ ಗುರುಭೆಟ್ಟಿ ಹಾಗೂ ಪಶು ಸಂಗೋಪನಾ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪಂಚನಾಮೆ ಮಾಡಿದ್ದಾರೆ.ಕುರಿ ಕಳೆದುಕೊಂಡ ನೊಂದ ಮಹಿಳೆ ಶಶಿಕಲಾ ಬಸವರಾಜ ಜಾಡರ ಅವರು ಮಾತನಾಡಿ ಕಡು ಬಡತನದ ಮಧ್ಯೆಯೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಮೂವತ್ತು ಸಾವಿರ ಸಾಲ ಪಡೆದು ಕುರಿಗಳನ್ನು ಖರೀದಿ ಮಾಡಿದೆ ಜೀವನ ಸಾಗಿಸುತ್ತಿದ್ದೆ ಎಂದು ತಮ್ಮ ಅಳಲು ತೋಡಿಕೊಂಡಳು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 