ಬಾಗ್ದಾದ್, ಡಿ 12 (ಸ್ಫುಟ್ನಿಕ್)
ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬುಧವಾರ ತಡರಾತ್ರಿ ಎರಡು ರಾಕೆಟ್ ಬಿದ್ದಿದೆ ಎಂದು
ಇರಾಕಿ ಭದ್ರತಾ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ
ಯಾರೂ ಮೃತಪಟ್ಟಿಲ್ಲ ಅಥವಾ ಗಾಯಗೊಂಡಿಲ್ಲ ಎಂದೂ ಮೂಲಗಳು ಹೇಳಿವೆ. ಈ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ
ನಿರೀಕ್ಷಿಸಲಾಗಿದೆ. ಸೋಮವಾರ ಬೆಳಗಿನ ಜಾವ ಸಹ ಇಂತಹುದೇ
ಘಟನೆ ನಡೆದಿದ್ದು, ಎರಡು ರಾಕೆಟ್ ಗಳು ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಿದ್ದ
ಪರಿಣಾಮ ಆರು ಇರಾಕಿ ಸಿಬ್ಬಂದಿ ಗಾಯಗೊಂಡಿದ್ದರು.