ಕಾಗವಾಡದಲ್ಲಿ ಎರಡು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Two road development works launched in Kagawad
ಲೋಕದರ್ಶನ ವರದಿ
ಕಾಗವಾಡ 11: ಗ್ರಾಮೀಣ ಭಾಗದ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಉತ್ತಮ ತೋಟದ ರಸ್ತೆಗಳ ಅವಶ್ಯಕತೆ ಇದ್ದು, ಶಾಸಕ ರಾಜು ಕಾಗೆ ರೈತರ ಬೇಡಿಕೆಗೆ ಸ್ಪಂದಿಸಿ, ಪಟ್ಟಣದ ತೋಟದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ರಸ್ತೆ ಅಭಿವೃದ್ಧಿ ಪಡಿಸುತ್ತಿರುವದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಮುಖಂಡ ರಮೇಶ ಚೌಗಲಾ ಹೇಳಿದರು.
ಅವರು ಬುಧವಾರ ದಿ. 10 ರಂದು ಪಟ್ಟಣದಲ್ಲಿ ಶಾಸಕರ ಅನುದಾನದಲ್ಲಿ ಪಂಚಾಯತ ರಾಜ್ ಇಲಾಖೆಯಿಂದ ಮಂಜೂರಾದ 20 ಲಕ್ಷ ವೆಚ್ಚದ ಕಾಗವಾಡ-ಇಂಗಳಿ ರಸ್ತೆ ಹಾಗೂ 30 ಲಕ್ಷ ವೆಚ್ಚದ ಕಾಗವಾಡದಿಂದ ಮಗದುಮ್ಮಕೊಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು. ಶಾಸಕರು ಪಟ್ಟಣಕ್ಕೆ ಅತೀ ಹೆಚ್ಚಿನ ಅನುದಾನ ನೀಡಿದ್ದಾರೆ. ಅಧಿಕಾರಿಗಳು, ಗುತ್ತಿಗೆದಾರರು ಸಮಯದಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ, ಜನರಿಗೆ ಅನಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಈ ವೇಳೆ ಗುತ್ತಿಗೆದಾರ ಸುನೀಲ ಅವಟಿ, ಇಂಜಿನಿಯರ್ ಮಡಿವಾಳಪ್ಪ ಪಾಟೀಲ, ಮುಖಂಡರಾದ ಚಿದಾನಂದ ಅವಟಿ, ಪೋಪಟ ಪಾಟೀಲ, ಪ್ರಭಾಕರ ಕೋರೆ, ರೇವಣ್ಣ ಕೋಳೆಕರ, ಸಿದ್ದು ವಡೆಯರ, ಉಮರ್ ಪಾರೂಕ್, ಗಣೇಶ ಕೋಳೆಕರ, ಮಹಾದೇವ ಕೋಳೆಕರ, ಸುರೇಶ ಜಗನಾಡೆ, ಸುರೇಶ ಕೋಳೆಕರ, ಅನೀಲ ಪವಾರ, ಬಾಳು ಕೋಳೆಕರ, ಅರುಣ ಕರವ, ಅಭಿ ಪವಾರ, ಪ್ರಕಾಶ ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 