ಶ್ರೀನಗರ, ಜೂನ್ 30 : ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಮಂಗಳವಾರ ಜಂಟಿ ದ ಶೋಧಾನಾ ಕಾರ್ಯಚರಣೆಯಲ್ಲಿ ಭದ್ರತಾಪಡೆಗಳು ಇಬ್ಬರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಇದರೊಂದಿಗೆ, ಕಳೆದ 24 ಗಂಟೆಗಳಲ್ಲಿ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಎರಡು ವಿಭಿನ್ನ ಎನ್‌ಕೌಂಟರ್‌ಗಳಲ್ಲಿ ಒಟ್ಟು ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ.ಉಗ್ರರು ಅಡಗಿರುವ ಖಚಿತ ಮಾಹಿತಿಯ ನಂತರ ರಾಷ್ಟ್ರೀಯ ರೈಫಲ್ಸ್ (ಆರ್ಆರ್), ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಮತ್ತು ಸಿಆರ್‌ಪಿಎಫ್ ಅನಂತ್‌ನಾಗ್‌ನಲ್ಲಿರುವ ಬಿಜ್‌ಬೆಹರಾದ ವಾಘಾಮಾದಲ್ಲಿ ಜಂಟಿ ಕಾರ್ಯಚರಣೆ ಪ್ರಾರಂಭಿಸಿದೆ.
ಭದ್ರತಾ ಪಡೆಗಳು ಎಲ್ಲಾ ನಿರ್ಗಮನ ಸ್ಥಳಗಳಿಗೆ ಮೊಹರು ಹಾಕಿದ ನಂತರ ಹಳ್ಳಿಯ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಡಗಿಕೊಂಡಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ವಿವೇಚನೆಯಿಲ್ಲದೆ ಮನಬಂದಂತೆ ಗುಂಡು ಹಾರಿಸಿದರು ಎನ್ನಲಾಗಿದೆ.ಇದಕ್ಕೆ ಪ್ರತಿಯಾಗಿ ಭದ್ರತಾಡೆಗಳು , ಗುಂಡಿನ ಕಾರ್ಯಾಚರಣೆ ನಡೆಸಿದಾಗ . ಇಬ್ಬರು ಅಪರಿಚಿತ ಉಗ್ರರು ಸಾವನ್ನಪ್ಪಿದ್ದಾರೆ .ಯಾವುದೇ ಸವಾಲು ಎದುರಿಸಲು ಹೆಚ್ಚುವರಿ ಭದ್ರತಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ನಡುವೆ , ಅನಂತ್‌ನಾಗ್‌ನಲ್ಲಿ ಎರಡನೇ ದಿನವಾದ ಇಂದು ಸಹ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.