ಲೋಕ ಅದಾಲತ್ನಲ್ಲಿ ಒಂದಾದ ಎರಡು ಕುಟುಂಬಗಳು
Two families reunited at the Lok Adalat
ಮುದ್ದೇಬಿಹಾಳ 13: ಕಳೆದ ನಾಲ್ಕು ವರ್ಷಗಳಿಂದ ಕುಟುಂಬ ಕಲಹದಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದ ಎರಡು ಕುಟುಂಬಗಳು ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಪೊಲೀಸ್ ಸಿಬ್ಬಂದಿಯ ಸಮಾಲೋಚನೆಯ ಫಲವಾಗಿ ಮತ್ತೆ ಒಂದಾದ ಮನಕಲಕುವ ಘಟನೆ ಇಲ್ಲಿನ ನ್ಯಾಯಾಲಯದಲ್ಲಿ ನಡೆದಿದೆ.
ಕುಟುಂಬ ಕಲಹದಿಂದ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎರಡು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ಒಂದು ಪ್ರಕರಣದಲ್ಲಿ ಮೂರು ಮಕ್ಕಳಿದ್ದ ದಂಪತಿ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಪೋಷಕರಿಂದ ದೂರವಾಗಿದ್ದ ಮಕ್ಕಳ ಮೇಲೆ ಇದರ ದುಷ್ಪರಿಣಾಮ ಉಂಟಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಅಂಗವಿಕಲ ಮಹಿಳೆಯನ್ನು ವಿವಾಹವಾಗಿದ್ದ ಪತಿ ಕುಟುಂಬ ಕಲಹದಿಂದ ದೂರವಾಗಿದ್ದರು.
ಲೋಕ ಅದಾಲತ್ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಹಾಗೂ ಸಿವಿಲ್ ನ್ಯಾಯಾಧೀಶ ರಾಮಮೂರ್ತಿ ಎನ್. ಅವರು ಉಭಯ ಪಕ್ಷಗಳೊಂದಿಗೆ ಪ್ರತ್ಯೇಕ ಹಾಗೂ ಜಂಟಿ ಸಮಾಲೋಚನೆ ನಡೆಸಿದರು. ಕುಟುಂಬದ ಮಹತ್ವ, ಮಕ್ಕಳ ಭವಿಷ್ಯ ಹಾಗೂ ಪರಸ್ಪರ ವಿಶ್ವಾಸದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ ಎರಡೂ ಕುಟುಂಬಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮತ್ತೆ ಒಟ್ಟಾಗಿ ಬದುಕಲು ಒಪ್ಪಿಗೆ ಸೂಚಿಸಿದವು.
ಅಂಗವಿಕಲ ಪತ್ನಿಯ ಕೈಹಿಡಿದು ಜೀವನ ಕಟ್ಟಿಕೊಂಡಿರುವುದು ದೊಡ್ಡ ಮಾನವೀಯತೆ. ಕ್ಷಣಿಕ ಕೋಪಕ್ಕಾಗಿ ಅಮೂಲ್ಯವಾದ ದಾಂಪತ್ಯವನ್ನು ಕಳೆದುಕೊಳ್ಳಬಾರದು ಎಂದು ನ್ಯಾಯಾಧೀಶರು ಪತಿಗೆ ಸಲಹೆ ನೀಡಿದರು.
ಒಪ್ಪಂದದ ಬಳಿಕ ನ್ಯಾಯಾಲಯದಲ್ಲೇ ಪರಸ್ಪರ ಹಾರ ಬದಲಾಯಿಸಿಕೊಂಡ ದಂಪತಿಗಳು ಸಿಹಿ ಹಂಚಿಕೊಂಡು ಹೊಸ ಜೀವನ ಆರಂಭಿಸಲು ಸಮ್ಮತಿಸಿದರು. ತಮ್ಮ ಪೋಷಕರು ಮತ್ತೆ ಒಂದಾಗಿರುವುದನ್ನು ಕಂಡ ಮಕ್ಕಳ ಸಂತಸ ಎಲ್ಲರ ಗಮನ ಸೆಳೆಯಿತು.
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ 