ಎರಡು ದಿನಗಳ ಅಂತರ್ ಮಹಾವಿದ್ಯಾಲಯ ಖೋ ಖೋ ಪಂದ್ಯಾವಳಿ .ಮುಕ್ತಾಯ ,ವಿಜೇತ ತಂಡವಾಗಿ ಹೊರಹೊಮ್ಮಿದ ಎಸ್ಕೆಎನ್‌.ಜಿ.ಕಾಲೇಜು ಖೋ ಖೋ ತಂಡ

ಎರಡು ದಿನಗಳ ಅಂತರ್ ಮಹಾವಿದ್ಯಾಲಯ ಖೋ ಖೋ ಪಂದ್ಯಾವಳಿ .ಮುಕ್ತಾಯ ,ವಿಜೇತ ತಂಡವಾಗಿ ಹೊರಹೊಮ್ಮಿದ ಎಸ್ಕೆಎನ್‌.ಜಿ.ಕಾಲೇಜು ಖೋ ಖೋ ತಂಡ Two-day inter-college Kho Kho tournament concludes, SKNG College Kho Kho team emerges as the winner

ಗಂಗಾವತಿ 18:  ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಕಾಲೇಜು ಆವರಣದಲ್ಲಿ ನಡೆದ ಎರಡು ದಿನಗಳ ಅಂತರ ಮಹಾವಿದ್ಯಾಲಯ ಖೋಖೋ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ತಂಡದ ಅಯ್ಕೆ ಇಂದು ಮುಕ್ತಾಯಗೊಂಡಿದೆ.ಕೊಪ್ಪಳ ವಿಶ್ವವಿದ್ಯಾಲಯ, ಎಸ್‌.ಕೆ.ಎನ್‌.ಜಿ. ಕಾಲೇಜು,,ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದಲ್ಲಿ ನಡೆದ ಈ ಅಂತರ ಮಹಾವಿದ್ಯಾಲಯ ಖೋಖೋ (ಪುರುಷ ಹಾಗೂ ಮಹಿಳಾ) ಪಂದ್ಯಾವಳಿಯಲ್ಲಿ  ನಗರದ ಶ್ರೀ ಕೊಲ್ಲಿ ನಾಗೇಶ್ಬರಾವ್ ಮಹಾವಿದ್ಯಾಲಯದ ಪುರುಷರ ಖೋಖೋ ತಂಡವು (ವಿಜೇತ)ಪ್ರಥಮ ಸ್ಥಾನವನ್ನು ಪಡೆದರೆ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಪುರುಷರ ಖೋ ಖೋ ತಂಡವು (ರನ್ನರ್ ಅಪ್) ಎರಡನೇ  ಸ್ಥಾನವನ್ನು ಪಡೆದುಕೊಂಡಿದೆ.

ಮಹಿಳಾ ವಿಭಾಗದಲ್ಲಿ  ಶ್ರೀ ಗವಿಸಿದ್ದೇಶ್ವರ ಕಾಲೇಜಿಮ ಖೋ ಖೋ ತಂಡವು ಪ್ರಥಮ ಸ್ಥಾನವನ್ನು ಪಡೆದಿದ್ದರೆ, ಕನಕಗಿರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಖೋಖೋ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.ದೈಹಿಕ  ಶಿಕ್ಷಣ ವಿಭಾಗದ ಕೊಪ್ಪಳ ವಿಶ್ವವಿದ್ಯಾಲಯದ ನಿರ್ದೇಶಕರಾದ ಮಂಜುನಾಥ್, ನೇತೃತ್ಬದಲ್ಲಿ  ಕ್ರೀಡಾ ನಿರ್ದೇಶಕರುಗಳಾದ ಶೋಭಾ ಕೆ.ಎಸ್‌., ಅನೀಲ್ ಎಡ್ವರ್ಡ, ಶಾಂತಾ, ಜಯರಾಮ್, ಇನ್ನಿತರರ ನೇತೃತ್ವದಲ್ಲಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವರಾಜ್ ಗುರಿಕಾರ್ ಪ್ರಾದ್ಯಾಪಕರುಗಳಾದ ಡಾ.ಮಂಜುನಾಥ್ ಕೆ.ಎಚ್‌. ಡಾ.ಫಣಿರಾಜ್,ಡಾ. ಮಾರುತಿ, ಡಾ.ಬಸವರಾಜ್ ಗಡಾದ ಇನ್ನಿತರರ ಸಹಕಾರದೊಂದಿಗೆ ಪಂದ್ಯಾವಳಿಗಳು ಮುಕ್ತಾಯಗೊಂಡಿವೆ.  

ಅಭಿನಂದನೆ: ಅಂತರ್ ವಿಶ್ವವಿದ್ಯಾಲಯಖೋ ಖೋ.ಪಂದ್ಯಾವಳಿಯಲ್ಲಿ ಎಸ್‌.ಕೆ.ಎನ್‌.ಜಿ, ಮಹಾವಿದ್ಯಾಲಯದ ಖೋಖೋ  ತಂಡವು ವಿಜೇತ ತಂಡವಾಗಿ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಕೊಲ್ಲಿ ನಾಗೇಶ್ವರಾವ್   ಕಾಲೇಜಿನ ಪ್ರಾಚಾರ್ಯರಾದ ಡಾ.ಶಿವರಾಜ್ ಗುರಿಕಾರ, ಐಕ್ಯೂಎಸಿ ಸಂಚಾಲಕರಾದ ಮಂಜುನಾಥ್ ಕೆ.ಎಚ್‌. ಇತರೆ ಪ್ರಾದ್ಯಾಪಕರು ಹಾಗೂ ಸಿಬ್ನಂಧಿ ಹರ್ಷ ವ್ಯಕ್ತಪಡಿಸಿದ್ದು, ವಿಜೇತ ತಂಡಕ್ಕೆ ಅಭಿನಂದನೆ  ಸಲ್ಲಿಸಿದ್ದಾರೆ.ಬಹುಮಾನ ವಿತರಣೆ: ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಸಮಾರಂಙ ಸಂಜೆ ಜರುಗಿದ್ದು, ಈ ವೇಳೆ ವಿಶ್ವವಿದ್ಯಾಲಯ ರಜಿಸ್ಟ್ರಾರ್ ಕೆ.ರಮೇಶ. ಪ್ರಾಚಾರ್ಯರಾದ ಡಾ. ಶಿವರಾಜ ಗುರಿಕಾರ, ವಿಶ್ವವಿದ್ಯಾಲಯದ ದೈಹಿಕ ನಿರ್ದೇಶಕರಾದ ಮಂಜುನಾಥ್,  ಎಸ್‌.ಕೆನ್‌.ಜಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶೋಭಾ ಕೆ.ಎಸ್, ಇವರುಗಳು ಮಾತನಾಡಿ ಕ್ರೀಡೆಗಳು ದೈಹಿಕವಾಗಿ ಹಾಗೂ. ಮಾನಸಿಕವಾಗಿ ಸದೃಢಗೊಳಿಸಿ , ವಿದ್ಯಾರ್ಥಿಗಳನ್ನು ಒಳ್ಳೆಯ ನಾಗರಿಕನ್ನಾಗಿ, ನಾಯಕರುಗಳನ್ನಾಗಿ ಸಿದ್ದಗೊಳಿಸಲು ನೆರವಾಗುತ್ತವೆ ಎಂದರು.ಈ ವೇಳೆ ಕಾಲೇಜಿನ ವಿವಿಧ ಪ್ರಾದ್ಯಾಪಕರು, ವಿವಿಧ ಕ್ರೀಡಾ ನಿರ್ದೇಶಕರು,ಕ್ರೀಡಾ ಶಿಕ್ಷಕರು, ಕ್ರೀಡಾ ಪಟುಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.