ಮಹಾಲಿಂಗಪುರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಎರಡು ಕೃತಿಗಳ ಲೋಕಾರೆ​‍್ಣ

ಮಹಾಲಿಂಗಪುರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಎರಡು ಕೃತಿಗಳ ಲೋಕಾರೆ​‍್ಣ  Two books released by Rashtrotthana Parishat in Mahalingapura

ಲೋಕದರ್ಶನ ವರದಿ 

ಮಹಾಲಿಂಗಪುರ, ಜು. 12: ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ, ಇತಿಹಾಸ, ಶಿಕ್ಷಣ ಹಾಗೂ ಸಮಾಜಮುಖಿ ಚಿಂತನೆಗಳನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು ಹಾಗೂ ರಾಷ್ಟ್ರೋತ್ಥಾನ ಬಳಗ, ಬಾಗಲಕೋಟೆ ಜಿಲ್ಲೆ ಆಶ್ರಯದಲ್ಲಿ ಸ್ಥಳೀಯ ಕೆಎಲ್‌ಇ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಎರಡು ಕೃತಿಗಳ ಲೋಕಾರೆ​‍್ಣ ಕಾರ್ಯಕ್ರಮ ನಡೆಯಿತು.  

ಡಾ. ಬಾಬು ಕೃಷ್ಣಮೂರ್ತಿ ಮತ್ತು ಬೆಳೂರು ಸುದರ್ಶನ ರಚಿಸಿರುವ ‘ಅವಿಶ್ರಾಂತ ಧ್ಯೇಯಜೀವಿ ಎಂ.ಸಿ. ಜಯದೇವ: ೈ್ದು್ದೂಹಿ್ಪೂೂ್ದೃ' ಹಾಗೂ ಎಸ್‌.ಆರ್‌. ರಾಮಸ್ವಾಮಿ ಅವರ ‘ಇತಿಹಾಸದ ಸೆರೆಗು’ ಕೃತಿಗಳನ್ನು ಲೋಕಾರೆ​‍್ಣ ಮಾಡಲಾಯಿತು.  

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಬ್ರಿಗೇಡ್ ರಾಜ್ಯ ಪ್ರಖಲ್ಪ ಪ್ರಮುಖ ಹಾಗೂ ಪ್ರಶಿಕ್ಷಣಾರ್ಥಿ ಸಂಪನ್ಮೂಲ ವ್ಯಕ್ತಿ ಕಿರಣ್ ರಾಮ್, “ಎಂ.ಸಿ. ಜಯದೇವ ಅವರ ಜೀವನವು ಕೇವಲ ವ್ಯಕ್ತಿಯ ಬದುಕಿನ ಕಥೆಯಲ್ಲ; ರಾಷ್ಟ್ರಸೇವೆಗೆ ಸಮರ​‍್ಿತವಾದ ಆದರ್ಶ ಜೀವನಗಾಥೆಯಾಗಿದೆ” ಎಂದು ಹೇಳಿದರು.  

ಜಯದೇವ ಅವರು ಯಾವುದೇ ಪ್ರಚಾರ ಅಥವಾ ಪ್ರಶಂಸೆಯನ್ನು ಬಯಸದ ನಿಸ್ವಾರ್ಥ ಸಮಾಜಸೇವಕರಾಗಿದ್ದು, ತಮ್ಮ ಜೀವನವನ್ನು ರಾಷ್ಟ್ರಸೇವೆಗೆ ಅರ​‍್ಿಸಿದ್ದರು. “ಮೊದಲು ದೇಶ, ನಂತರ ಮನೆ; ದೇಶ ಉಳಿದರೆ ಮನೆ ಉಳಿಯುತ್ತದೆ” ಎಂಬ ಅವರ ಧ್ಯೇಯವಾಕ್ಯ ಇಂದಿನ ಯುವಜನತೆಗೆ ಮಾರ್ಗದರ್ಶಿಯಾಗಬೇಕು ಎಂದು ಅವರು ತಿಳಿಸಿದರು.  

ಎಸ್‌.ಆರ್‌. ರಾಮಸ್ವಾಮಿ ಅವರ ‘ಇತಿಹಾಸದ ಸೆರೆಗು’ ಕೃತಿಯ ಕುರಿತು ಮಾತನಾಡಿದ ಅವರು, ಭಾರತದ ಸಾಂಸ್ಕೃತಿಕ ಪರಂಪರೆ, ವಿದೇಶಿ ಆಕ್ರಮಣಗಳು, ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯ ಪುನರುತ್ಥಾನ ಹಾಗೂ ಸಮಕಾಲೀನ ರಾಷ್ಟ್ರೀಯ ವಿಚಾರಗಳನ್ನು ಸಮಗ್ರವಾಗಿ ವಿಶ್ಲೇಷಿಸಿರುವ ಈ ಕೃತಿ ಇತಿಹಾಸ ಮಾತ್ರವಲ್ಲ, ಭವಿಷ್ಯದ ಭಾರತ ನಿರ್ಮಾಣಕ್ಕೂ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.