ಮಹಾಲಿಂಗಪುರದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಎರಡು ಕೃತಿಗಳ ಲೋಕಾರೆ್ಣ
Two books released by Rashtrotthana Parishat in Mahalingapura
ಲೋಕದರ್ಶನ ವರದಿ
ಮಹಾಲಿಂಗಪುರ, ಜು. 12: ರಾಷ್ಟ್ರಭಕ್ತಿ, ಭಾರತೀಯ ಸಂಸ್ಕೃತಿ, ಇತಿಹಾಸ, ಶಿಕ್ಷಣ ಹಾಗೂ ಸಮಾಜಮುಖಿ ಚಿಂತನೆಗಳನ್ನು ಯುವಜನರಲ್ಲಿ ಬೆಳೆಸುವ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್, ಬೆಂಗಳೂರು ಹಾಗೂ ರಾಷ್ಟ್ರೋತ್ಥಾನ ಬಳಗ, ಬಾಗಲಕೋಟೆ ಜಿಲ್ಲೆ ಆಶ್ರಯದಲ್ಲಿ ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಎರಡು ಕೃತಿಗಳ ಲೋಕಾರೆ್ಣ ಕಾರ್ಯಕ್ರಮ ನಡೆಯಿತು.
ಡಾ. ಬಾಬು ಕೃಷ್ಣಮೂರ್ತಿ ಮತ್ತು ಬೆಳೂರು ಸುದರ್ಶನ ರಚಿಸಿರುವ ‘ಅವಿಶ್ರಾಂತ ಧ್ಯೇಯಜೀವಿ ಎಂ.ಸಿ. ಜಯದೇವ: ೈ್ದು್ದೂಹಿ್ಪೂೂ್ದೃ' ಹಾಗೂ ಎಸ್.ಆರ್. ರಾಮಸ್ವಾಮಿ ಅವರ ‘ಇತಿಹಾಸದ ಸೆರೆಗು’ ಕೃತಿಗಳನ್ನು ಲೋಕಾರೆ್ಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಬ್ರಿಗೇಡ್ ರಾಜ್ಯ ಪ್ರಖಲ್ಪ ಪ್ರಮುಖ ಹಾಗೂ ಪ್ರಶಿಕ್ಷಣಾರ್ಥಿ ಸಂಪನ್ಮೂಲ ವ್ಯಕ್ತಿ ಕಿರಣ್ ರಾಮ್, “ಎಂ.ಸಿ. ಜಯದೇವ ಅವರ ಜೀವನವು ಕೇವಲ ವ್ಯಕ್ತಿಯ ಬದುಕಿನ ಕಥೆಯಲ್ಲ; ರಾಷ್ಟ್ರಸೇವೆಗೆ ಸಮರ್ಿತವಾದ ಆದರ್ಶ ಜೀವನಗಾಥೆಯಾಗಿದೆ” ಎಂದು ಹೇಳಿದರು.
ಜಯದೇವ ಅವರು ಯಾವುದೇ ಪ್ರಚಾರ ಅಥವಾ ಪ್ರಶಂಸೆಯನ್ನು ಬಯಸದ ನಿಸ್ವಾರ್ಥ ಸಮಾಜಸೇವಕರಾಗಿದ್ದು, ತಮ್ಮ ಜೀವನವನ್ನು ರಾಷ್ಟ್ರಸೇವೆಗೆ ಅರ್ಿಸಿದ್ದರು. “ಮೊದಲು ದೇಶ, ನಂತರ ಮನೆ; ದೇಶ ಉಳಿದರೆ ಮನೆ ಉಳಿಯುತ್ತದೆ” ಎಂಬ ಅವರ ಧ್ಯೇಯವಾಕ್ಯ ಇಂದಿನ ಯುವಜನತೆಗೆ ಮಾರ್ಗದರ್ಶಿಯಾಗಬೇಕು ಎಂದು ಅವರು ತಿಳಿಸಿದರು.
ಎಸ್.ಆರ್. ರಾಮಸ್ವಾಮಿ ಅವರ ‘ಇತಿಹಾಸದ ಸೆರೆಗು’ ಕೃತಿಯ ಕುರಿತು ಮಾತನಾಡಿದ ಅವರು, ಭಾರತದ ಸಾಂಸ್ಕೃತಿಕ ಪರಂಪರೆ, ವಿದೇಶಿ ಆಕ್ರಮಣಗಳು, ಸ್ವಾತಂತ್ರ್ಯ ಹೋರಾಟ, ರಾಷ್ಟ್ರೀಯ ಪುನರುತ್ಥಾನ ಹಾಗೂ ಸಮಕಾಲೀನ ರಾಷ್ಟ್ರೀಯ ವಿಚಾರಗಳನ್ನು ಸಮಗ್ರವಾಗಿ ವಿಶ್ಲೇಷಿಸಿರುವ ಈ ಕೃತಿ ಇತಿಹಾಸ ಮಾತ್ರವಲ್ಲ, ಭವಿಷ್ಯದ ಭಾರತ ನಿರ್ಮಾಣಕ್ಕೂ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 