ಅವಳಿ ನಗರದ ಪ್ರಥಮ ಮಹಿಳಾ ಅಟೋ ರಿಕ್ಷಾ ಚಾಲಕಿಗೆ ಸನ್ಮಾನ

ಅವಳಿ ನಗರದ ಪ್ರಥಮ ಮಹಿಳಾ ಅಟೋ ರಿಕ್ಷಾ ಚಾಲಕಿಗೆ ಸನ್ಮಾನ Twin Cities' first woman auto-rickshaw driver felicitated

ಲೋಕದರ್ಶನ ವರದಿ 

ಬೆಟಗೇರಿ 16 : ತನ್ನ ಪತಿ ನಿಧನ ಹೊಂದಿದ ನಂತರ ಸಂಸಾರದ ಜವಾಬ್ದಾರಿ, ಮಕ್ಕಳ ಶಿಕ್ಷಣ ಮತ್ತು ಬ್ಯಾಂಕಿನ ಸಾಲದ ಸಮಸ್ಯೆಗಳನ್ನು ಪರಿಹರಿಸಲು ಸ್ವತಃ ತಾನೇ ಕೇವಲ ನಾಲ್ಕು ದಿನಗಳಲ್ಲಿ ರೀಕ್ಷಾ ಓಡಿಸುವದನ್ನು ಕಲಿತು ಅದೇ ಅಟೋ ರಿಕ್ಷಾವನ್ನು ತಾನು ಓಡಿಸಬೇಕೆಂದು ಗಟ್ಟಿ ನಿರ್ಧಾರ ಕೈಕೊಂಡು ಗದಗ ಬೆಟಗೇರಿ ನಗರದಲ್ಲಿ ಅಟೋ ರಿಕ್ಷಾ ಓಡಿಸುತ್ತಿರುವ ರೇಖಾ ಸಂತೋಷ ಹುಲ್ಲೂರ ಅವರಿಗೆ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ಗದಗ ರೈಲು ನಿಲ್ದಾಣದಲ್ಲಿ ಸಮಿತಿ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಅಲ್ಲದೇ ಆಕೆಯ ನಿರ್ಧಾರ ಕೈಗೂಡಲೆಂದು ಹಾರೈಸಿದರು.  

ಸನ್ಮಾನ  ಕಾರ್ಯಕ್ರಮದಲ್ಲಿ ರೇಲ್ವೆ ನಿಲ್ದಾಣದ ಮುಖ್ಯ ಅಧೀಕ್ಷಕ ಮನೋಜ ಬಾಗಡೆ, ಪರಿಸರ ಅಧಿಕಾರಿ ತೇಜರಾಜ, ಆರ್‌.ಪಿ.ಎಫ್‌., ಐ.ಪಿ.ಎಫ್‌. ರೀತೇಶಕುಮಾರ, ಸ್ಟೇಶನ್ ಅಟೋ ರಿಕ್ಷಾ ಚಾಲಕರು ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದು  ಶುಭ ಹಾರೈಸಿದರು. 

ಸನ್ಮಾನ ಸ್ವೀಕರಿಸಿದ ಮಾತನಾಡಿದ ರೇಖಾ ಹುಲ್ಲೂರ ತನ್ನನ್ನು ಗುರುತಿಸಿ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯವರು ಸನ್ಮಾನಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಎಸ್‌.ವಿ. ಸುಲಾಖೆ, ಮನ್ಸೂಖಲಾಲ ಪುಣೇಕರ, ಸಂಧ್ಯಾ ಗುಂಡಿ, ಎಂ.ಟಿ. ಕಬ್ಬಿಣ, ಅರ್ಜುನಸಾ ಮೇರವಾಡೆ, ಈರಣ್ಣ ಜ್ಯೋತಿ, ಕೃಷ್ಣಾಸಾ ಮೇರವಾಡೆ, ಅಶೋಕ ಅಂಗಡಿ, ಜಂಬಣ್ಣ ಹುಡೇದ, ಬಸವರಾಜ ಕಿರೇಸೂರ, ಜ್ಞಾನೇಶ್ವರ ಉತ್ತರಕರ, ಗಿರಿಧರಸಿಂಗ್ ಬ್ಯಾಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.