ಮಹಾಸಭೆಯಲ್ಲಿ ಮರುವಿವಾಹದ ಹನ್ನೆರಡನೆಯ ಸಮ್ಮೇಳನ
Twelfth Conference on Remarriage at the General Assembly
ಮಹಾಸಭೆಯಲ್ಲಿ ಮರುವಿವಾಹದ ಹನ್ನೆರಡನೆಯ ಸಮ್ಮೇಳನ
ಬೆಳಗಾವಿ 29: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಬೆಳಗಾವಿ ಜಿಲ್ಲಾ ಘಟಕ ಹಾಗೂ ಕೆಎಲ್‌ಇ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ವೀರಶೈವ ಲಿಂಗಾಯತ ವಧು ವರರ ಅನ್ವೇಷಣ ಕೇಂದ್ರವು ವೀರಶೈವ ಲಿಂಗಾಯತ ವಿಧವೆ/ವಿಧುರ ವಿಚ್ಛೇದಿತರುಗಳ ಮರು ಮದುವೆ ಬಯಸುವವರ ಹಾಗೂ ತಡವಾಗಿ ಮದುವೆ ಆಗುವವರ ಸಮ್ಮೇಳನವನ್ನು ದಿ. 27ರಂದು ಸಾಯಂಕಾಲ ಬೆಳಗಾವಿ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿತ್ತು.
ಅನ್ವೇಷಣ ಕೇಂದ್ರದ ಅಧ್ಯಕ್ಷ ಡಾ. ಎಫ್.ವ್ಹಿ.ಮಾನ್ವಿ ಅವರು ಮಾತನಾಡುತ್ತ, ಜೀವನ ಹೊಸ್ತಿಲಲ್ಲಿ ಹಲವಾರು ಏಳುಬೀಳುಗಳಿಂದ ವೈವಾಹಿಕ ಜೀವನದ ಪಥ ತಪ್ಪಿರುತ್ತದೆ. ಅದಕ್ಕೆ ವ್ಯಥೆ ಪಡುವುದರಲ್ಲಿ ಅರ್ಥವಿಲ್ಲ. ಜೀವನಕ್ಕೆ ಬಾಳಸಂಗಾತಿ ಬೇಕು. ಬಾಳ ಸಂಗಾತಿ ಇಲ್ಲದ ಜೀವನಕ್ಕೆ ಅರ್ಥವಿಲ್ಲ. ಹನ್ನೆರಡನೆಯ ಶತಮಾನದ ಶರಣರು ವೈವಾಹಿಕ ಜೀವನವನ್ನು ಒಂದು ಯೋಗವೆಂದು ಕರೆದಿದ್ದಾರೆ. ಸತಿಪತಿ ಒಂದಾಗಿ ಬದುಕಬೇಕೆಂದು ಕರೆನೀಡಿದ್ದಾರೆ. ದಾಂಪತ್ಯ ಜೀವನವನ್ನು ಜೊತೆಯಾಗಿ ಅನುಭವಿಸಬೇಕು. ನಮ್ಮ ಸನಾತನ ಸಂಸ್ಕೃತಿಯೂ ಕೂಡ ಧರ್ಮ ಅರ್ಥ ಕಾಮ ಮೋಕ್ಷವನ್ನು ಪ್ರತಿಪಾದಿಸುತ್ತದೆ. ಇವೆಲ್ಲ ನೈತಿಕ ಮಾರ್ಗದಲ್ಲಿ ಇರಬೇಕು. ಜೀವನದಲ್ಲಿ ಯಾವುದೋ ಘಳಿಗೆಯಲ್ಲಿ ದಾಂಪತ್ಯದಿಂದ ದೂರ ಸರಿದಿರುತ್ತೇವೆ ಅದನ್ನು ಮರು ಪಡೆಯುವುದು ಬಹುಮುಖ್ಯ. ಈ ಉದ್ದೇಶದಿಂದಲೇ ಮಹಾಸಭೆಯು ಕಾಲಕಾಲಕ್ಕೆ ವಿವಾಹ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದೆ. ಈ ದಿಸೆಯಲ್ಲಿ ಇಂದು ವಿಧವೆ/ ವಿಧುರ, ವಿಚ್ಛೇದಿತರ, ತಡವಾಗಿ ಮದುವೆ ಆಗುವವರ ಮರು ವಿವಾಹದ ಹನ್ನೆರಡನೆಯ ಸಮ್ಮೇಳನವನ್ನು ಆಯೋಜಿಸಿದೆ. ಇದರ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು.
ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ ಮಹಾಸಭೆ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ ಮುಂದಾಳತ್ವದಲ್ಲಿ ಸಮಾಜದ ಬಾಂಧವರಿಗೆ ವೈವಾಹಿಕ ಸಂಬಂಧಗಳನ್ನು ಒಂದಾಗಿಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದೆ. ಇತ್ತೀಚಿಗೆ ನಾವು ಬೃಹತ್ ವಿವಾಹ ಸಮ್ಮೇಳನವನ್ನು ಜೆಎನ್‌ಎಂಸಿಯಲ್ಲಿ ಆಯೋಜಿಸಿದ್ದೇವು. ಈಗ ಮತ್ತೆ ಮರುವಿವಾಹ ಸಮ್ಮೇಳವನ್ನು ಹಮ್ಮಿಕೊಂಡಿದ್ದೇವೆ. ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಇದೊಂದು ಉತ್ತಮವಾದ ವೇದಿಕೆಯಾಗಿದೆ. ಇದು ಎರಡು ಕುಟುಂಬಗಳ ಸಮ್ಮೀಲನವು ಆಗಿದೆ. ಒಬ್ಬರಿಗೊಬ್ಬರು ಅರ್ಥೈಸಿಕೊಂಡು ಜೀವನವನ್ನು ರೂಪಿಸಿಕೊಳ್ಳಲು ವಿಶೇಷವಾದ ವೇದಿಕೆ ಇದಾಗಿದ್ದು ಸಮಾಜದ ಬಾಂಧವರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಡಾ.ಗುರುದೇವಿ ಹುಲೆಪ್ಪನವರಮಠ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಮಂಜುಶ್ರೀ ಹಾವಣ್ಣನವರ ಹಾಗೂ ಆಶಾ ಯಮಕನಮರಡಿ ನಿರೂಪಿಸಿ ವಂದಿಸಿದರು. ಪ್ರಕಾಶ ಬಾಳೇಕುಂದ್ರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಬಹು ಸಂಖ್ಯೆಯಲ್ಲಿ ಮರುವಿವಾಹಕ್ಕೆ ಮಧುವರರು ಆಗಮಿಸಿ ಲಾಭ ಪಡೆದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 