ಶಿಕ್ಷಣ ಪರಿಪೂರ್ಣತೆಗೆ ಟುಟೋರಿಯಲ್ಸ್‌ಗಳು ಶ್ರಮಿಸಬೇಕು- ಡಾ. ರಾಜಶೇಖರ್ ಚಕ್ಕಿ
Tutorials should strive for educational perfection - Dr. Rajashekhar Chakki
ಶಿಕ್ಷಣ ಪರಿಪೂರ್ಣತೆಗೆ ಟುಟೋರಿಯಲ್ಸ್‌ಗಳು ಶ್ರಮಿಸಬೇಕು- ಡಾ. ರಾಜಶೇಖರ್ ಚಕ್ಕಿ
ರಾಣೇಬೆನ್ನೂರು 05: ಯಾವುದೇ ಟ್ಯೂಷನ್ ಕ್ಲಾಸ್ಗಳಿರಲಿ ಅವರು ಅಲ್ಲಿ ಬರುವ ವಿದ್ಯಾರ್ಥಿಗಳ ಅಂತ:ಶಕ್ತಿಯನ್ನು ಪರಿಗಣಿಸಿ ಕ್ಲಾಸ್ಗಳು ಮಾಡಿದಾಗ ಮಾತ್ರ ಅವರೆಲ್ಲರ ಪ್ರೀತಿ, ವಿಶ್ವಾಸ, ಅಭಿಮಾನ ಗಳಿಸಲು ಸಾಧ್ಯವಾಗುವುದು ಎಂದು ಡಾ. ರಾಜಶೇಖರ್ ಚಕ್ಕಿ ಹೇಳಿದರು. ಅವರು ಇಲ್ಲಿನ ಶ್ರೀ ಆದಿಶಕ್ತಿ ದೇವಸ್ಥಾನದ ಆಧ್ಯಾತ್ಮ ಮಂದಿರದಲ್ಲಿ, ಚಕ್ಕಿ ಟ್ಯುಟೋರಿಯಲ್ಸ್ ಹಳೆಯ ವಿದ್ಯಾರ್ಥಿಗಳ ಅಭಿಮಾನಿ ಬಳಗ, ಆಯೋಜಿಸಿದ್ದ ಸಂಸ್ಥೆಯ ಬೆಳ್ಳಿ ಹಬ್ಬ ಮತ್ತು ಗುರು ಶಿಷ್ಯರ ಸಮಾಗಮ -2025 ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಮ್ಮ ಸಂಸ್ಥೆ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಅವರಲ್ಲಿರುವ ಅಂತ:ಶಕ್ತಿ ಪುನರ್ ಮೌಲ್ಯಗಳ ಪರಿಚಾರಕರಾಗಿ ಸೇವೆ ಸಲ್ಲಿಸಿದೆ. ಹಣ ಗಳಿಸುವ ಉದ್ದೇಶ ನನ್ನದಾಗಿರಲಿಲ್ಲ ಜನಸಾಮಾನ್ಯರು ಸಹ ಇಲ್ಲಿ ಟ್ಯೂಷನ್ ಪಡೆಯಬೇಕು, ಸಮಾಜದಲ್ಲಿ ಅಪ್ರತಿಮ ಶೈಕ್ಷಣಿಕ ಸಾಧನೆ ಮಾಡಬೇಕು ಎನ್ನುವ ಏಕೈಕ ಹಂಬಲ ನನ್ನದಾಗಿತ್ತು. ಇದರ ಪರಿಣಾಮ(1995-2009 ರವರೆಗೆ ) ಹತ್ತಾರು ಸಾವಿರ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಪ್ರಬುದ್ಧತೆ ಮೆರೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ರಾಜಶೇಖರ್ ಚಕ್ಕಿ ಅವರ ಧರ್ಮಪತ್ನಿ ಶ್ರೀಮತಿ ಪ್ರತಿಮಾ ಚಕ್ಕಿ ಅವರನ್ನು ಸಹಾ ಹಳೆಯ ವಿದ್ಯಾರ್ಥಿಗಳ ಅಭಿಮಾನಿ ಬಳಗವು ಹೃದಯಸ್ಪರ್ಶಿ ಸನ್ಮಾನಿಸಿ ಧನ್ಯತೆ ಮೆರೆದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧ ಬಸಪ್ಪ ಅಸುಂಡಿ, ಪ್ರೊ, ಪ್ರಭುಲಿಂಗಪ್ಪ ಕೊಡದ, ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು ಪಾಲ್ಗೊಂಡಿದ್ದರು . ಈ ನಿಮಿತ್ತ ಮ್ಯೂಸಿಕಲ್ ಚೇರ್, ಅಂತ್ಯಾಕ್ಷರಿ, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ತಮ್ಮಲ್ಲಿರುವ ಆಂತರಿಕ ಪ್ರತಿಭೆ ಹೊರ ಸೂಸಿ ಸಂಭ್ರಮಿಸಿದರು. ವೈಶಾಲಿ ನಾಡಿಗೇರ ಸಂಗಡಿಗರು ಪ್ರಾರ್ಥಿಸಿದರು. ಶ್ರೀಧರ್ ಪಾಸ್ತೆ, ಸ್ವಾಗತಿಸಿ, ವಿನಾಯಕ ಶಿಗ್ಲಿಕರ ನಿರೂಪಿಸಿ, ರಾಜು ಬಿಲ್ಲಳ್ಳಿ ವಂದಿಸಿದರು. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಸಂಘದ 300ಕ್ಕೂ ಹೆಚ್ಚು ಸಾಧಕರು ಪಾಲ್ಗೊಂಡಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 