ಅಕ್ರಮ ಮರಳು ದಂಧೆಗೆ ನಲುಗಿದ ತುಂಗಭದ್ರಾ ನದಿ ಒಡಲು
Tungabhadra river, devastated by illegal sand mining
ಹೂವಿನಹಡಗಲಿ 08: ತಾಲೂಕಿನಜೀವಾಳವಾಗಿರುವ ತುಂಗಭದ್ರಾ ಬಲ ದಂಡೆಯ ನದಿ ತೀರದಲ್ಲಿಕಬ್ಬಿಣದ ತೆಪ್ಪಗಳ ಮೂಲಕ ಅಕ್ರಮ ಮರಳು ದಂಧೆ ನಿರಂತರವಾಗಿ ನಡೆಯುತ್ತಿದೆ. ಮರಳು ನೀತಿ ಜಾರಿಗೊಳಿಸುವಲ್ಲಿ ತೋರಿರುವ ನಿರ್ಲಕ್ಷ್ಯದ ಫಲವಾಗಿ ಸರಕಾರಕ್ಕೆ ಲಕ್ಷಾಂತರ ರೂ. ಮೌಲ್ಯದ ರಾಜಧನ ನಷ್ಟವಾಗುತ್ತಿದೆ. ಅಲ್ಲದೇ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ಪರಿಸರ, ಅಂತರ್ಜಲದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಮನೆ ಮಾಡಿದೆ.
ತಾಲೂಕಿನ ಬಲ ದಂಡೆಯ ತುಂಗಭದ್ರಾ ನದಿ ತೀರದ ಮದಲಗಟ್ಟಿ, ಬನ್ನಿಮಟ್ಟಿ, ನಂದಿಗಾವಿ, ಮೈಲಾರ, ಕುರುವತ್ತಿ, ಲಿಂಗನಾಯ್ಕನಹಳ್ಳಿ ಹಾಗೂ ಹಾವೇರಿ ಜಿಲ್ಲೆಯ ಎಡ ದಂಡೆಯ ನದಿ ತೀರದ ಹಾವನೂರು,ಗಳಗನಾಥ ,ಮೇವುಂಡಿ ಭಾಗದಲ್ಲಿ ಬಿಹಾರದ ಕಾರ್ಮಿಕರು ಕಬ್ಬಿಣದ ತೆಪ್ಪಗಳ ಮೂಲಕ ಹಾವೇರಿ ಜಿಲ್ಲೆ ಗೆ ನಿರಂತರ ಅಕ್ರಮ ಮರಳು ಸಾಗಣೆ ನಡೆಯುತ್ತದೆ. ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರಂತರವಾಗಿ ಹಲವು ಕಡೆಗಳಲ್ಲಿ ಅಕ್ರಮ ಮರಳು ದಂಧೆಕೋರರು ವಿರುದ್ಧ ದಾಳಿ ಮಾಡಿ ಕೇಸ್ ದಾಖಲು ಮಾಡಿದ್ದಾರೆ. ಆದರೂ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ.
ಮನೆ, ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಒಂದು ಗಾಡಿಗೆ ಕನಿಷ್ಠ ರೂ. 28 ರಿಂದ ರೂ. 30 ಸಾವಿರಕ್ಕೆ ಅಕ್ರಮವಾಗಿ ರಾತ್ರಿ ಸಮಯದಲ್ಲಿ ತಂದು ಹಾಕುತ್ತಾರೆ ಇದಕ್ಕೆ ಕಡಿವಾಣ ಇಲ್ಲ. ಬಡವರಿಗೆ ಮರಳು ಸಿಗುತ್ತಿಲ್ಲ .ಮನೆ ನಿರ್ಮಾಣ ವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎನ್ನಲಾಗಿದೆ. ಕೆಲ ಕಾರಣಗಳಿಂದ ಬ್ಲಾಕ್ ಟೆಂಡರ್ ವಿಳಂಬ ನೀತಿಯಿಂದ ಮರಳು ದಂಧೆಕೋರರಿಗೆ ಲೂಟಿ ಮಾಡಲು ಅನುಕೂಲವಾಗಿದೆ. ಸರ್ಕಾರಕ್ಕೆ ಲಕ್ಷಾಂತದ ರೂ. ನಷ್ಟವಾಗುತ್ತಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 