ಕ್ಷಯರೋಗ ಪೌಷ್ಟಿಕ ಆಹಾರ ಬುಟ್ಟಿ ವಿತರಣೆ
Tuberculosis nutritional food basket distribution
ಮುಂಡಗೋಡ: ಪಟ್ಟಣದ ತಾಲ್ಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ಭವಿಷ್ಯ ಭಾರತ ಸಂಸ್ಥೆ ಹಾಗೂ ಎಲ್ಟಿಐ ಮೈಂಡ್ ಟೀ ಫೌಂಡೇಶನ್ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಷಯರೋಗ ಪೌಷ್ಟಿಕ ಆಹಾರ ಬುಟ್ಟಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕ್ಷಯ ರೋಗಕ್ಕೆ ಉತ್ತಮ ಆಹಾರ ಪದ್ದತಿ ಕೂಡ ಮುಖ್ಯವಾಗುತ್ತದೆ.ಕ್ಷಯ ರೋಗಿಗಳಿಗೆ ಸಮರ್ಕವಾದ ಪೌಷ್ಟಿಕಾಂಷ ಲಭ್ಯವಾದಲ್ಲಿ ಖಾಯಿಲೆ ಶೀಘ್ರವಾಗಿ ಹತೋಟಿಗೆ ಬಂದು ರೋಗಿಗಳು ಗುಣಮುಖರಾಗುತ್ತಾರೆ.ಹಾಗಾಗಿ ಹೆಚ್ಚೆಚ್ಚು ಪೌಷ್ಟಿಕ ಆಹಾರ ಪಡೆದುಕೊಳ್ಳುವುದು ಅತಿ ಮುಖ್ಯ ಎಂದು ತಾಲೂಕಾ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ಹೇಳಿದರು.
ಮುಂಡಗೋಡ ಭವಿಷ್ಯ ಭಾರತ ಸಂಸ್ಥೆ ಯ ಡಾ.ಸಚಿನ ಕೊಟಗುಣಸಿ ಮಾತನಾಡಿ, ಆರೋಗ್ಯ ಮತ್ತು ಪೌಷ್ಟಿಕತೆಯ ವಿಚಾರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆ ಹಮ್ಮಿಕೊಂಡಿದ್ದು, ಅದರಲ್ಲಿ ಇದು ಕೂಡ ಒಂದಾಗಿದೆ.ನಮ್ಮ ಕಾರ್ಯಕ್ರಮಗಳಿಗೆ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಂಪೂರ್ಣವಾಗಿ ಬೆಂಬಲವನ್ನು ನೀಡುತ್ತಿದ್ದಾರೆ.ಹಿರಿಯ ಮೇಲ್ವಿಚಾರಕರಾದ ಜೆ. ಲಕ್ಷ್ಮಣ ಣ ಮಾತನಾಡಿದರು.ಈ ವೇಳೆ ಕೆಲವು ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಬುಟ್ಟಿಯನ್ನು ವಿತರಣೆ ಮಾಡಲಾಯಿತು.
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 