ತಪ್ಪಾಗಿ ಟ್ವೀಟ್ ಮಾಡಿ ಮತ್ತೇ ಪೇಚಿಗೆ ಸಿಲುಕಿದ ಅಮೆರಿಕಾ ಅಧ್ಯಕ್ಷ ಟ್ರಂಪ್

ನವದೆಹಲಿ, ನ.28- ವಿಶ್ವದ ಮಹಾನ್ ಶಕ್ತಿಶಾಲಿ ರಾಷ್ಟ್ರ ಅಮೆರಿಕದ ಅತ್ಯಂತ ಪ್ರಭಾವಿ ನಾಯಕ ಮತ್ತು ಸಹಸ್ರಕೋಟಿ ಡಾಲರ್ಗಳ ವಹಿವಾಟು ನಡೆಸುವ ಖ್ಯಾತ ಉದ್ಯಮಿಯೂ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೇಚಿಗೆ ಸಿಲುಕಿದ್ದಾರೆ.

ಟ್ರಂಪ್ ಮಾಡಿದ್ದದೋಷಪೂರಿತ ಟ್ವೀಟ್ಗೆ ಸಂಬಂಧಿಸಿದಂತೆ  ಈಶಾನ್ಯ ರಾಜ್ಯ ಅಸ್ಸೋಂ ಮೂಲದ ಬುದ್ಧಿವಂತ ಯುವತಿಯೊಬ್ಬಳು ನೀಡಿರುವ ಉತ್ತರ ಇದೀಗ ವೈರಲ್ ಆಗಿದ್ದು, ಆಕೆಯ ದಿಟ್ಟತನಕ್ಕೆ  ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.

ಘಟನೆ ವಿವರ: ನ.21ರಂದು ವಾಷಿಂಗ್ಟನ್ನಲ್ಲಿ ಉಷ್ಣಾಂಶ ಮೈನಸ್ 2 ಡಿಗ್ರಿ ಸೆಲ್ಷಿಯಸ್ ಇದ್ದಾಗ ಟ್ವೀಟ್ ಮಾಡಿದ್ದ ಟ್ರಂಪ್, ಭಯಾನಕ. ಜಾಗತಿಕ ತಾಪಮಾನದ ಎಲ್ಲ ದಾಖಲೆಗಳನ್ನೂ ಇದು ಮುರಿಯಬಹುದು ಎಂದಿದ್ದರು. ಇದಕ್ಕೆ ಉತ್ತರ ನೀಡಿದ್ದ ಟ್ವೀಟ್ಗೆ, ಅಸ್ಸೋಂನ ಯುವತಿ ಆಸ್ಥಾ ಸಮರ್ಾಹ್ (18) ಕಮೆಂಟ್ ಮಾಡಿದ್ದು, ಹವಾಮಾನ ಮತ್ತು ತಾಪಮಾನ ಎರಡೂ ಒಂದೇ ಅಲ್ಲ ಎಂದು ಹೇಳಿದ್ದಾಳೆ.

ನಿಮಗಿಂತಲೂ 54 ವರ್ಷ ಕಿರಿಯಳು.ಸಾಧಾರಣ ಅಂಕಗಳೊಂದಿಗೆ ಈಗಷ್ಟೇ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದೇನೆ. ಆದರೆ ನಿಮಗೆ ಈ ಕುರಿತು ಸಹಾಯ ಬೇಕಿದ್ದರೆ, ನಾನು ಎರಡನೆ ತರಗತಿಯಿಂದ ಬಳಸುತ್ತಿರುವ ವಿಶ್ವಕೋಶ ನಿಮಗೆ ನೀಡಬಲ್ಲೆ ಎಂದು ಟಾಂಗ್ ನೀಡಿದ್ದಾಳೆ.

ಈಕೆಯ  ಟ್ವಿಟ್ಟರ್ ಕಮೆಂಟ್ಗೆ ಜಗತ್ತಿನಾದ್ಯಂತ 25,000ಕ್ಕೂ ಹೆಚ್ಚು  ಲೈಕ್ ಪ್ರತಿಕ್ರಿಯೆಗಳು ದಾಖಲಾಗಿವೆ. 5100ಕ್ಕೂ ಹೆಚ್ಚು ಬಾರಿ ಅದು ರೀ ಟ್ವೀಟ್ ಆಗಿದೆ. ಅಮೆರಿಕದ ಟ್ವಿಟ್ಟರ್ ಬಳಕೆದಾರರು ತಮ್ಮ ಅಧ್ಯಕ್ಷರಿಗೇ ಟಾಂಗ್ ಕೊಟ್ಟ ಯುವತಿಯ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.