ಬರ್ಲಿನ್, ನ ೨೯ (ಸ್ಪುಟ್ನಿಕ್) ಲಂಡನ್‌ನಲ್ಲಿ ನಡೆಯಲಿರುವ ನ್ಯಾಟೋ ನಾಯಕರ ಶೃಂಗಸಭೆಯ ಹೊರತಾಗಿ ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಡಿಸೆಂಬರ್ ೪ ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಜರ್ಮನ್ ಸರ್ಕಾರದ ಉಪ ವಕ್ತಾರ ಉಲ್ರಿಕ್ ಡೆಮ್ಮರ್ ಶುಕ್ರವಾರ ಹೇಳಿದ್ದಾರೆ.
"ಡಿಸೆಂಬರ್ ೪ ರಂದು ಬೆಳಿಗ್ಗೆ ಮರ್ಕೆಲ್ ಮೈತ್ರಿಕೂಟದ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಸಭೆ ನಡೆಯಲಿದೆ" ಎಂದು ಡೆಮ್ಮರ್ ತಿಳಿಸಿದ್ದಾರೆ.
ಸಭೆಯ ಕಾರ್ಯಸೂಚಿಯ ಬಗ್ಗೆ ಪ್ರತಿಕ್ರಿಯಿಸಲು ಡೆಮ್ಮರ್ ನಿರಾಕರಿಸಿದ್ದು, ಉಭಯ ನಾಯಕರು ಚರ್ಚಿಸಲು ಸಾಕಷ್ಟು ಸಮಸ್ಯೆಗಳಿವೆ ಎಂದಿದ್ದಾರೆ
ಡಿಸೆಂಬರ್ ೩ ರಂದು, ಶೃಂಗಸಭೆ ಪ್ರಾರಂಭವಾಗುವ ಮೊದಲು, ಏಂಜೆಲಾ ಮರ್ಕೆಲ್ ಸಿರಿಯಾ ಕುರಿತು ಟರ್ಕಿ, ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.