ಮೃತ ಗೃಹರಕ್ಷಕ ಸಿಬ್ಬಂದಿ ಮಂಜುಳಾಗೆ ಶ್ರದ್ಧಾಂಜಲಿ

ಮೃತ ಗೃಹರಕ್ಷಕ ಸಿಬ್ಬಂದಿ ಮಂಜುಳಾಗೆ ಶ್ರದ್ಧಾಂಜಲಿ  Tributes paid to deceased home guard Manjula

ಸವದತ್ತಿ 17: ಮಹಾದೇಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಮಂಜುಳಾ ಅವರ ಅಕಾಲಿಕ ನಿಧನಕ್ಕೆ ಸವದತ್ತಿ ಗೃಹರಕ್ಷಕ ದಳದ ಘಟಕದ ವತಿಯಿಂದ ನಗರದ ಕೋಟೆ ಆವರಣದಲ್ಲಿ ಶ್ರದ್ಧಾಂಜಲಿ ಸಭೆ ಹಮ್ಮಿಕೊಂಡು ಗೌರವ ಸಲ್ಲಿಸಲಾಯಿತು.  

ಹತ್ಯೆಗೀಡಾದ ಮಂಜುಳಾ ಅವರ ಸ್ಮರಣಾರ್ಥ, ಘಟಕಾಧಿಕಾರಿ ಆನಂದ ಲಮಾಣಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ವಿಶೇಷ ಪರೇಡ್ ನಡೆಸಿ, ಮೌನಾಚರಣೆಯ ಮೂಲಕ ದಿವಂಗತರಿಗೆ ಭಾವಪೂರ್ಣ ನಮನ ಸಲ್ಲಿಸಿದರು.  

ಘಟಕಾಧಿಕಾರಿ ಆನಂದ ಲಮಾಣಿ ಮಾತನಾಡಿ ನಮ್ಮ ಸಹೋದ್ಯೋಗಿ ಮಂಜುಳಾ ಅವರ ಹತ್ಯೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಈ ದುಃಖದ ಸಮಯದಲ್ಲಿ ಇಲಾಖೆಯು ಮಂಜುಳಾ ಅವರ ಕುಟುಂಬದ ಬೆಂಬಲಕ್ಕೆ ಸದಾ ನಿಲ್ಲಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ಪ್ರಕ್ರಿಯೆಗಳು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಯಬೇಕು ಎಂದು ಆಗ್ರಹಿಸಿದರು.  

 ರೇಣುಕಾ ದೇಸಾರ ಮಾತನಾಡಿ, ಮಂಜುಳಾ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ದುಷ್ಕೃತ್ಯಗಳು ಮರುಕಳಿಸಬಾರದು ಮತ್ತು ಸಮಾಜದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.  

ಶ್ರದ್ಧಾಂಜಲಿ ಸಭೆಯಲ್ಲಿ ಸವದತ್ತಿ ಘಟಕದ ಗೃಹರಕ್ಷಕ ಸಿಬ್ಬಂದಿಗಳಾದ ಜಯಪ್ರಕಾಶ್ ಬೆಳವಡಿ, ಬುರನಸಾಬ ಡಾಂಗೆ, ವೈಶಾಲಿ ಭಜಂತ್ರಿ, ಬಸವರಾಜ ಕಲ್ಲೂರ, ವಿಜಯಕುಮಾರ್ ಚಂದರಗಿ, ಹುಸೇನ ಹವಾಲ್ದಾರ, ನೇತ್ರಾವತಿ ನಿಕ್ಕಂ, ಸುನೀಲ್ ಲಮ್ಮಾಣಿ ಸೇರಿದಂತೆ ಅನೇಕರು ಪಾಲ್ಗೊಂಡು ಮೃತರಿಗೆ ಗೌರವ ಅರ​‍್ಿಸಿದರು.