ನಿವೃತ್ತ ಗ್ರಾಪಂ ಕಾರ್ಯದರ್ಶಿ ನಿಂಗಪ್ಪ ಕಲಹಾರಿಗೆ ಸನ್ಮಾನ
Tribute to retired Gram Panchayat Secretary Ningappa Kalahari
ನಿವೃತ್ತ ಗ್ರಾಪಂ ಕಾರ್ಯದರ್ಶಿ ನಿಂಗಪ್ಪ ಕಲಹಾರಿಗೆ ಸನ್ಮಾನ
ತಾಳಿಕೋಟಿ 04: ತಾಲೂಕಿನ ತುಂಬಗಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಿಂಗಪ್ಪ ಕಲಹಾರಿಗೆ ಗ್ರಾಮ ಪಂಚಾಯತ ಆಡಳಿತ ಮಂಡಳಿ ವತಿಯಿಂದ ಇತ್ತೀಚೆಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಮಾದರ ಮಾತನಾಡಿ ನಮ್ಮ ಪಂಚಾಯತಿಯಲ್ಲಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ನಿಂಗಪ್ಪ ಅವರು ಸರಳ ಸ್ವಭಾವದ ಸಜ್ಜನ ವ್ಯಕ್ತಿಯಾಗಿದ್ದು ತಮ್ಮ ಸೇವೆಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದಾರೆ ಅವರ ಶಿಸ್ತು ಸಮಯ ಪಾಲನೆ ನಮಗೆಲ್ಲರಿಗೂ ಮಾದರಿ ಯೋಗ್ಯವಾಗಿವೆ, ಅವರ ವಿಶ್ರಾಂತ ಬದುಕು ಸುಖ ಸಮೃದ್ಧಿ ಹಾಗೂ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದರು. ಗ್ರಾಮ ಪಂಚಾಯತ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ ಸಜ್ಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಂಕ್ರಮ್ಮ ಭಜಂತ್ರಿ, ಸದಸ್ಯರಾದ ನಿಂಗನಗೌಡ ಚೌಧರಿ, ಶರಣಬಸವರಾಜ ಕೊಳ್ಳಿ ರಾಮನಗೌಡ ಹಾದಿಮನಿ, ಸುಭಾಸ ಮದ್ದರಕಿ, ಮಲ್ಲಮ್ಮ ದಿಡ್ಡಿಮನಿ, ಅಶೋಕ ಉಪ್ಪಲದಿನ್ನಿ, ಮುಖಂಡರಾದ ಅಶೋಕ ಕಾಮರಡ್ಡಿ, ವಿಶ್ವನಾಥ ನಾಯ್ಕೋಡಿ, ದೇವು ಚಲವಾದಿ, ಚಂದ್ರಶೇಖರ ದೊಡ್ಮನಿ, ಸಿದ್ದಲಿಂಗ ಕೊಳ್ಳಿ, ರವಿ ತೋಟದ ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 