ನೂತನ ನಿರ್ದೇಶಕ ಮಲ್ಲನಗೌಡ ಬಿರಾದಾರಗೆ ಸನ್ಮಾನ
Tribute to new director Mallana Gowda Birada
ನೂತನ ನಿರ್ದೇಶಕ ಮಲ್ಲನಗೌಡ ಬಿರಾದಾರಗೆ ಸನ್ಮಾನ
ತಾಳಿಕೋಟಿ 14: ಮುದ್ದೇಬಿಹಾಳ ತಾಲೂಕ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕೊಡಗಾನೂರ ಗ್ರಾಮದ ಮಲ್ಲನಗೌಡ ನಿಂಗನಗೌಡ ಬಿರಾದಾರ ಇವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಗೆಳೆಯರ ಬಳಗದ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲನಗೌಡ ಬಿರಾದಾರ ಅವರು ಎಲ್ಲರ ಸಹಕಾರದೊಂದಿಗೆ ನಾನು ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಗಿದೆ ನನಗೆ ಬೆಂಬಲಿಸಿದ ಎಲ್ಲರನ್ನು ಹಾಗೂ ಪ್ರೀತಿಯಿಂದ ನನ್ನನ್ನು ಸನ್ಮಾನಿಸಿದ ನಿಮ್ಮನ್ನು ಅಭಿನಂದಿಸುತ್ತೇನೆ ಎಂದರು. ಈ ಸಮಯದಲ್ಲಿ ಮಿತ್ರ ಬಳಗದವರಾದ ಶಂಕರಗೌಡ ಕಂತಲಗಾಂವಿ, ಸಂಗನಗೌಡ ಹೆಗರೆಡ್ಡಿ, ಪ್ರಭುಗೌಡ ನಾಡಗೌಡ, ಸಂಗನಗೌಡ ಅಸ್ಕಿ, ಬಸನಗೌಡ ನಾಡಗೌಡ ಮಲ್ಲನಗೌಡ ಬಿರಾದಾರ ಶಾಂತಗೌಡ ಬಿರಾದಾರ, ಮಲ್ಲನಗೌಡ ಯಾದಗಿರಿ, ಬಸನಗೌಡ ನಾಡಗೌಡ, ಪ್ರವೀಣ ರೆಡ್ಡಿ, ಎಚ್.ಬಿ.ಬಿರಾದಾರ,ಅಪ್ಪು ಆನೇಸೂರ, ತಿಪ್ಪಣ್ಣ ಅದೋನಿ ಮತ್ತಿತರರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 