ಚಿದಂಬರ ಮುನವಳ್ಳಿಗೆ ಸನ್ಮಾನ
Tribute to Chidambaram Munavalli
ಬೆಳಗಾವಿ 10: ಇತ್ತೀಚೆಗೆ ಮಹಾರಾಷ್ಟ್ರದ ಸಂತ ಜ್ಞಾನೇಶ್ವರರ ಸಮಾಧಿ ಸ್ಥಾನವಾದ ಆಳಂದಿಯಲ್ಲಿರುವ ವೇದಶ್ರೀ ತಪೋವನದಲ್ಲಿ ನಡೆದ ದೀಕ್ಷಾಂತ ಸಮಾರಂಭದಲ್ಲಿ ಬೆಳಗಾವಿಯ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಅಂಕಣಕಾರರಾದ ಚಿದಂಬರ ಮುನವಳ್ಳಿ ಇವರಿಗೆ ವೇದ ಸಾಹಿತ್ಯದ ಸ್ನಾತಕೋತ್ತರ ಪದವಿಯನ್ನು ನೀಡಿ ಗೌರವಿಸಲಾಯಿತು.
ಪ್ರಾಚೀನ ಭಾರತೀಯ ಜ್ಞಾನಪದ್ಧತಿ, ವಾಸ್ತುಕಲೆ, ಸಂಸ್ಕೃತಿ ಇವುಗಳ ಬಗ್ಗೆ ವಿವಿಧ ಕೋರ್ಸಗಳನ್ನು ನಡೆಸುತ್ತಿರುವ ಭೀಷ್ಮ ಸ್ಕೂಲ್ ಆಫ್ ಇಂಡಿಯನ್ ನಾಲೆಜ್ ಸಿಸ್ಟಮ್ ಪುಣೆ, ಈ ಕಾರ್ಯಕ್ರಮ ಆಯೋಜಿಸಿತ್ತು. ರಾಮ ಜನ್ಮ ಭೂಮಿಯ ಟ್ರಸ್ಟೀ ಹಾಗೂ ಕೋಶಾಧ್ಯಕ್ಷರಾದ ರಾಷ್ಟ್ರ ಸಂತ ಶ್ರೀ ಗೋವಿಂದದೇವ ಗಿರಿ ಮಹಾರಾಜ ಇವರು ಸಮಾವರ್ತನ ಪ್ರಮಾಣ ಪತ್ರಗಳನ್ನು ನೀಡಿ ಈ ಸಂಪದ್ಭರಿತ ಜ್ಞಾನವನ್ನು ಕಲಿಯಲಿಚ್ಛಿಸುವ ಎಲ್ಲರಿಗೂ ಹಂಚಬೇಕು ಹಾಗೂ ಭವ್ಯ ಪರಂಪರೆಯನ್ನು ಹೊಂದಿರುವ ದೇಶವನ್ನು ಮತ್ತೆ ಉತ್ತುಂಗ ಸ್ಥಿತಿಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ತಿಳಿಸಿದರು.
ಎರಡು ವರ್ಷಗಳ ಆನ್ ಲೈನ್ ಅಭ್ಯಾಸ ಕ್ರಮದಲ್ಲಿ ನಾಲ್ಕು ವೇದಗಳು,ಆರು ವೇದಾಂಗಗಳಾದ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ, ಉಪವೇದಗಳಾದ ಆಯುರ್ವೇದ, ಧನುರ್ವೇದ, ಗಂಧರ್ವವೇದ, ಸ್ಥಾಪತ್ಯವೇದ ಹಾಗೂ ಪ್ರಮುಖ ಹತ್ತು ಉಪನಿಷದ್‌ಗಳ ಅಧ್ಯಯನಗಳನ್ನು ಪರೀಶೀಲಿಸಿ ಈ ಪ್ರಶಸ್ತಿಗಳನ್ನು ನೀಡಲಾಯಿತು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 