ಸಂಸ್ಕಾರ ಭಾರತಿ, ಕರ್ನಾಟಕ ಉತ್ತರ ವತಿಯಿಂದ ಪಂ.ಶ್ರೀನಿವಾಸ ಜೋಶಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಸಂಸ್ಕಾರ ಭಾರತಿ, ಕರ್ನಾಟಕ ಉತ್ತರ ವತಿಯಿಂದ ಪಂ.ಶ್ರೀನಿವಾಸ ಜೋಶಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ  Tribute program to Pt. Srinivas Joshi by Sanskar Bharathi

ಧಾರವಾಡ 28: ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ವತಿಯಿಂದ ದಿನಾಂಕ: 27.09.2025ರಂದು ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಪುರುಷೊತ್ತಮ ಟಂಡನ್ ಸಭಾಂಗಣದಲ್ಲಿ ನಾಡಿನ ಮೇರು ಸಾಹಿತಿ, ಖ್ಯಾತ ಕಾದಂಬರಿಕಾರ ಪದ್ಮಭೂಷಣ ಡಾ. ಎಸ್‌.ಎಲ್‌.ಭೈರ​‍್ಪ ಹಾಗೂ ನಾಡಿನ ಹಿರಿಯ ಸಿತಾರ ಕಲಾವಿದ ಪಂ.ಶ್ರೀನಿವಾಸ ಜೋಶಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಏರಿ​‍್ಡಸಿದ್ದಿತು. 

ಹಿರಿಯ ಚಿಂತಕ ಜಿ.ಸಿ.ತಲ್ಲೂರ ಅವರು ಮಾತನಾಡುತ್ತ ಭೈರ​‍್ಪ ಅವರೊಬ್ಬ ಅಸಾಮಾನ್ಯ ಭಾರತೀಯ ಸಂಸ್ಕೃತಿಯ ಚಿಂತಕ, ತತ್ವಜ್ಞಾನಿಯಾಗಿದ್ದರು. ಯಾರು ವೇದ-ಉಪನಿಷತ್ತುಗಳನ್ನು ಓದಿಲ್ಲವೋ ಅದನ್ನವರು ಭೈರ​‍್ಪನವರ ಎಲ್ಲ ಕಾದಂಬರಿಗಳಲ್ಲಿ ಕಾಣಬಹುದಾಗಿದೆ. ಹೊಟೇಲ್ ಮಾಣಿಯಾಗಿ, ನಾಟಕ ಕಂಪನಿಗಳಲ್ಲಿ ಗೇಟ್ ಕೀಪರ್‌ನಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅಷ್ಟಾಗ್ಯೂ ಅವರು ಜೀವನದ ಬಗ್ಗೆ ಎಂದೂ ನಿರಾಸೆ ಪಟ್ಟವರಲ್ಲ.  ಜೀವನದ ಎಲ್ಲ ಆಯಾಮಗಳನ್ನೂ ಕಂಡುಂಡ ಅನುಭವಗಳನ್ನು ಅನುಭಾವಗಳನ್ನಾಗಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ ಎಂದರು.  ನಮ್ಮವರೇ ಆದ ಪಂ. ಶ್ರೀನಿವಾಸ ಜೋಶಿ ಅವರು ರಂಗಭೂಮಿ ಹಾಗೂ ಹಿಂದೂಸ್ಥಾನಿ ಸಂಗೀತ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾದುದು ಎಂದು ಸ್ಮರಿಸಿದರು.   

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಶ್ರೀಧರ ನಾಡಗೀರ ಅವರು ಮಾತನಾಡುತ್ತ ಡಾ. ಭೈರ​‍್ಪ ಅವರೊಬ್ಬ ಅಪ್ಪಟ ರಾಷ್ಟ್ರೀಯವಾದಿಯಾಗಿ ಭಾರತೀಯ ತತ್ವಶಾಸ್ತ್ರದಲ್ಲಿ ಆಳವಾದ ನಂಬಿಕೆ ಹೊಂದಿದ್ದರು.  ಓದುಗರ ಮೇಲೆ ಗಾಢವಾದ ಪರಿಣಾಮ ಭೀರಿದ್ದರು.  ಓದುಗರಿಗೆ ನಮ್ಮ ಭಾರತೀಯ ತತ್ವಶಾಸ್ತ್ರದಲ್ಲಿ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅಪಾರವಾದ ಶ್ರದ್ಧೆ ತಳಿಯುವಂತದ್ದು, ಅದನ್ನು ಬೆಳೆಸುವಲ್ಲಿ ಬಹುದೊಡ್ಡ ರಾಷ್ಟ್ರಸೇವೆ ಗೈದಿದ್ದಾರೆ ಇಂಥ ಶ್ರೇಷ್ಠ ಚಿಂತಕರನ್ನು ಕಳೆದುಕೊಂಡಿದ್ದು ತುಂಬಲಾರದ ಹಾನಿಯಾಗಿದೆ.  ಅವರು ತಮ್ಮ ಸಾಹಿತ್ಯದ ಮೂಲಕ ಶಾಶ್ವತವಾಗಿ ಬದುಕಿದ್ದಾರೆ ಎಂದರು.  ಪಂ.ಶ್ರೀನಿವಾಸ ಜೋಶಿಯವರು ಮೌನತಪಸ್ವಿಗಳಂತೆ ಸಂಗೀತ ಕ್ಷೇತ್ರದಲ್ಲಿ ತಮ್ಮ ಕೊಡುಗೆ ಕೊಟ್ಟಿದ್ದಾರೆ ಎಂದು ಸ್ಮರಿಸಿದರು.   

ಸಂಸ್ಕಾರ ಭಾರತಿ ಕರ್ನಾಟಕ ಉತ್ತರದ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಮಾತನಾಡುತ್ತ ತಮ್ಮ ಸಾಹಿತ್ಯದ ಮೂಲಕ ಜಗದಗಲ ಬೆಳೆದ ಸರಸ್ವತಿ ಪುತ್ರ ಡಾ. ಎಸ್‌.ಎಲ್‌.ಭೈರ​‍್ಪನವರು ತಮ್ಮ ಇಡೀ ಬದುಕನ್ನೇ ಭಾರತೀಯ ಸಂಸ್ಕೃತಿಯ ಏಳ್ಗೆಗಾಗಿ ಮೀಸಲಿಟ್ಟರು.  ಅದನ್ನು ಬಹಳಷ್ಟು ರಸವತ್ತಾಗಿ ಕಟ್ಟಿಕೊಟ್ಟರು.  ಸಾಹಿತ್ಯದಷ್ಟೇ ಹಿಂದೂಸ್ಥಾನಿ ಸಂಗೀತವನ್ನು ಅಪ್ಪಟವಾಗಿ ಪ್ರೀತಿಸುತ್ತಿದ್ದರು. ಭೈರ​‍್ಪನವರು 1998ರ ಡಿಸೆಂಬರ್ 6ರಂದು ಕರ್ನಾಟಕದ ಮೊಟ್ಟಮೊದಲ ಸಂಸ್ಕಾರ ಭಾರತಿ ಸಮಿತಿಯನ್ನು ಧಾರವಾಡ ಉದ್ಘಾಟಿಸಿದರು. ಅಲ್ಲದೇ ಧಾರವಾಡ ಜರುಗುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ಸಭಾಂಗಣದಲ್ಲಿ ಹಿಂಭಾಗದಲ್ಲಿ ಕುಳಿತು ಸಂಗೀತವನ್ನು ಆಲಿಸುತ್ತಿದ್ದುದನ್ನು ಸ್ಮರಿಸಿದರು. ಬಿ.ವ್ಹಿ.ಕಾರಂತರ ನಂತರದಲ್ಲಿ ಅತಿ ಹೆಚ್ಚು ನಾಟಕಗಳಿಗೆ ಸಂಗೀತ ಸಂಯೋಜನೆಗೊಳಿಸಿದವರು ಪಂ.ಶ್ರೀನಿವಾಸ ಜೋಶಿಯವರು ಎಂದು ಸ್ಮರಿಸಿದರು.   

ಪೂಜ್ಯ ಮಹಾಪೌರರಾದ ಜ್ಯೋತಿ ಪಾಟೀಲರು ಮಾತನಾಡುತ್ತ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣವನ್ನು ಡಾ. ಎಸ್‌.ಎಲ್‌.ಭೈರ​‍್ಪನವರು ಹೊಂದಿದ್ದರು.  ಬಹುತೇಕ ಗೃಹಿಣಿಯರು ಇವರ ಕಾದಂಬರಿಗಳ ಪ್ರೇರಣೆಯಿಂದ ಪಡೆಯುವ ಮೂಲಕ ತಮ್ಮ ಜೀವನ ಸಾರ್ಥಕತೆ ಹೊಂದಿದ್ದಾರೆ ಎಂದರು.   

ಡಾ. ಸೌಭಾಗ್ಯ ಕುಲಕರ್ಣಿ ಅವರು ಮಾತನಾಡುತ್ತ ಭೈರ​‍್ಪನವರು ಸ್ನೇಹಜೀವಿಯಾಗಿದ್ದರು, ಕನ್ನಡ ಸಾಹಿತ್ಯಕ್ಕೆ ಹೊಸ ಛಾಪನ್ನು ಮೂಡಿಸಿದ ಧೀಮಂತ ಸಾಹಿತಿಯಾಗಿದ್ದರು.  ಭಾರತೀಯ ಸಂಸ್ಕೃತಿಯನ್ನು ಯಾವಾಗಲೂ ಎತ್ತಿ ಹಿಡಿಯುತ್ತಿದ್ದರು.  ಪಂ. ಶ್ರೀನಿವಾಸ ಜೋಶಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕಲಾಜೀವಿಯಾಗಿದ್ದರು ಎಂದು ಸ್ಮರಿಸಿದರು.   

ಶ್ರೀನಿವಾಸ ವಾಡಪ್ಪಿಯವರು ಮಾತನಾಡುತ್ತ ಭೈರ​‍್ಪನವರು ಒಂದು ಸಂದರ್ಶನದಲ್ಲಿ ಹೇಳುತ್ತ ಇಡೀ ಸಾಹಿತ್ಯ ಪ್ರಪಂಚದೊಳಗೆ ಯಾವುದಾದರೂ ಒಬ್ಬ ಕವಿ ವೇದ-ವೇದಾಂತವನ್ನು, ಭಾರತೀಯ ತತ್ವಜ್ಞಾನವನ್ನು ಕನ್ನಡದ ಆಡು-ನುಡಿಯಲ್ಲಿ ಹೇಳಬಲ್ಲವರೆಂದರೆ ಅದು ವರಕವಿ ಬೇಂದ್ರೆಯವರಿಗೆ ಮಾತ್ರ ಸಾಧ್ಯ ಎಂದು ಹೇಳಿರುವುದನ್ನು ಸ್ಮರಿಸಿದರು.   

ಡಾ. ಕೃಷ್ಣ ಕಟ್ಟಿ ಮಾತನಾಡುತ್ತ, ಭೈರ​‍್ಪನವರು ಕನ್ನಡ, ಕನ್ನಡತ್ವ, ಭಾರತ, ಭಾರತತ್ವ ಈ ದರ್ಶನಗಳನ್ನು ಜಗತ್ತಿಗೆ ತಮ್ಮ ಕಾದಂಬರಿಗಳ ಮೂಲಕ ಮಾಡಿಕೊಟ್ಟಂತಹ ಬಹುದೊಡ್ಡ ವ್ಯಕ್ತಿಯಾಗಿದ್ದಾರೆ.  ಭೈರ​‍್ಪನವರು ಇಡೀ ಭಾರತೀಯ ದರ್ಶನವನ್ನು ಜಗತ್ತಿನ ಇಳೆಯ ಜಾಣರು ಮೆಚ್ಚುವಂತೆ ತಮ್ಮ ಕಾದಂಬರಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.  ಅಕ್ಷರದ ಸೇವೆಯನ್ನು ಮಾಡಿದ ಭೈರ​‍್ಪನವರಿಗೆ ಕ್ಷರ ಅನ್ನುವುದು ಇಲ್ಲ ಎಂದು ಸ್ಮರಿಸಿದರು.   

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಮಾತನಾಡುತ್ತ ಅವಳಿನಗರದೊಡನೆ ಬಹಳಷ್ಟು ಒಡನಾಟವಿಟ್ಟುಕೊಂಡಿದ್ದ ಭೈರ​‍್ಪನವರು ತಮ್ಮ ಆರಂಭಿಕ ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿದ್ದು ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಿಂದಲೇ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸ್ಮರಿಸಿದರು.   

ಡಾ. ಡಿ.ಎಂ.ಹಿರೇಮಠ, ಮೃಣಾಲ ಅರುಣ ಜೋಶಿ, ಡಾ. ಹ.ವೆಂ.ಕಾಖಂಡಿಕಿ, ಡಾ. ಅಮೃತ ಯಾರ್ದಿ, ಡಾ. ವೀಣಾ ಬಿರಾದಾರ, ವೀರಣ್ಣ ಪತ್ತಾರ, ಡಾ. ಶ್ರೀಧರ ಕುಲಕರ್ಣಿ, ಸುರೇಖಾ ದೀಕ್ಷಿತ, ಸತೀಶ ಮೂರುರು, ಡಾ. ಬಿ.ಎಮ್‌.ಶರಭೇಂದ್ರಸ್ವಾಮಿ, ಪ್ರಸನ್ ಕುಲಕರ್ಣಿ ಅವರು ತಮ್ಮ ನುಡಿನಮನ ಸಲ್ಲಿಸಿದರು.   

ಸತೀಶ ಮೂರುರು ನಿರೂಪಿಸಿದರು.  ಡಾ. ಶಶಿಧರ ನರೇಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಡಾ. ಬಿ.ಎಮ್‌.ಶರಭೇಂದ್ರಸ್ವಾಮಿ ವಂದಿಸಿದರು.  ನಂತರ ಒಂದು ನಿಮಿಷ ಮೌನಾಚರಣೆ ಆಚರಿಸುವ ಮೂಲಕ ಅಗಲಿದ ಇರ್ವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.   

ಕಾರ್ಯಕ್ರಮದಲ್ಲಿ ಹರ್ಷ ಡಂಬಳ, ವಿಜಯಾನಂದ ಶೆಟ್ಟಿ, ಶ್ರೀನಿವಾಸ ನಾಡಗೀರ ಪ್ರಭುಗೌಡ ಪೊಲೀಸ್‌ಪಾಟೀಲ,  ಡಾ.ಗಿರಿಧರ ಕಿನ್ನಾಳ, ಗಾಂವಕರ, ಅಶೋಕ ಮೊಕಾಶಿ, ರಮೇಶ ನಾಡಗೀರ, ರಾಮಕೃಷ್ಣ ಮರಾಠೆ, ಸಾಧನಾ ಮಿರಜಕರ, ಹೂಗಾರ, ರವಿ ರಸಾಳಕರ, ಪ್ರಕಾಶ ಬಾಳಿಕಾಯಿ, ಶಿಲ್ಪಾ ಪಾಂಡೆ, ವೈಶಾಲಿ ರಸಾಳಕರ, ಡಾ. ಎ.ಎಲ್‌.ದೇಸಾಯಿ, ಡಾ. ಗುರುಬಸವ ಮಹಾಮನೆ ಮುಂತಾದವರು ಇದ್ದರು.