ದಿ ಸುಭಾಷ ಚವ್ಹಾಣರವರಿಗೆ ಶ್ರದ್ಧಾಂಜಲಿ ಸಭೆ
Tribute meeting for Subhash Chavan
ಶಿಗ್ಗಾವಿ 11: ಸುಭಾಸ ಚವ್ಹಾಣ ಒಬ್ಬ ಹುಟ್ಟು ಹೋರಾಟಗಾರರಾಗಿದ್ದರು. ತಮ್ಮ ಜೀವನದುದ್ದಕ್ಕೂ ಬಡವರ ಪರ ದೀನದಲಿತರ ಪರ ಕಾರ್ಮಿಕರ ಪರವಾಗಿ ಶ್ರಮಿಸಿದ್ದರು ಎಂದು ಗುತ್ತಿಗೆ ಸಂಘದ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ನೀರೀಕ್ಷಣಾ ಮಂದಿರದಲ್ಲಿ ಇತ್ತೀಚೆಗೆ ನಿಧನರಾದ ಮರಾಠಾ ಸಮಾಜದ ಅಧ್ಯಕ್ಷ ಹಾಗೂ ಮಾಜಿ ಪುರಸಭೆ ಅಧ್ಯಕ್ಷರು ಮತ್ತು ಹಾಲಿ ಸದಸ್ಯ ದಿ ಸುಭಾಷ ಚವ್ಹಾಣರವರಿಗೆ ತಾಲೂಕ ಗುತ್ತಿಗೆದಾರರ ಸಂಘದವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿಭಾವುಕರಾಗಿ ಮಾತನಾಡಿದ ಅವರುನಗರದಲ್ಲಿ ಆಶ್ರಯ ಪ್ಲಾಟಿನ ಮನೆಗಳು ಸರಿಯಾಗಿ ಹಂಚಿಕೆಯಾಗದಿದ್ದ ಸಂದರ್ಭದಲ್ಲಿ ಮತ್ತು ಗುಣಮಟ್ಟದ ಮನೆಗಳನ್ನು ಆಡಳಿತವರ್ಗ ನಿರ್ಮಿಸಲಾಗಿದ್ದ ಸಂದರ್ಭದಲ್ಲಿ 2001 ಮತ್ತು 2002 ರಲ್ಲಿ ಜನರ ಪರವಾಗಿ ಧ್ವನಿಯನ್ನು ಎತ್ತಿ ಅಲ್ಲಿಂದ ಇಲ್ಲಿಯವರೆಗೂ ನ್ಯಾಯವನ್ನು ಕೊಡಿಸುವವರೆಗೂ ಅವರು ಹೋರಾಟವನ್ನು ಮಾಡಿದರು. ಅಲ್ಲದೇ ಸಮಾಜದ ಬಗ್ಗೆ ಮತ್ತು ನಗರದ ಬಗ್ಗೆ ವಿಶೇಷವಾಗಿರುವಂತಹ ಚಿಂತನೆಗಳನ್ನ ಕಟ್ಟಿಕೊಂಡು ಅವುಗಳನ್ನು ಸಾಕಾರಗೊಳಿಸು ನಿಟ್ಟಿನಲ್ಲಿ ತಮ್ಮ ಜೀವನದ ಕೊನೆಯ ಉಸಿರುರೋವರೆಗೂ ಶ್ರಮವಹಿಸಿದರು ಎಂದರು.
ಈ ಸಂದರ್ಭದಲ್ಲಿಗದಿಗಯ್ಯ ಸದಾಶಿವಪೇಟೆಮಂಜುನಾಥ ದುಬೆ, ಚಂದ್ರು ಹೆಬ್ಬಾಳ, ಮಂಜುನಾಥ ಬ್ಯಾಹಟ್ಟಿ, ರವಿ ಚವ್ಹಾಣ, ವಿರೂಪಾಕ್ಷ ಸಾತನ್ನವರ, ಎಂ. ಎಸ್.ಪಾಟೀಲ, ಆನಂದ ಸುಭೇದಾರ, ಮಂಜುನಾಥ ಮತ್ತಿಗಟ್ಟಿ, ಬಸವರಾಜ ಬಂಡಿವಡ್ಡರ, ಸತೀಶ ಬಾಣದ, ಈಶ್ವರ ಹರಕುಣಿ, ಸೋಮು ಆಜೂರ, ಸಚಿನ ಮಡಿವಾಳರ, ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 