ದಿ. ಡಾ. ಎಸ್. ಎಲ್. ಭೈರಪ್ಪನವರಿಗೆ ಶ್ರದ್ಧಾಂಜಲಿ ಸಭೆ
Tribute meeting for Dr. S. L. Bhairappa
ಧಾರವಾಡ 26: ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟವು ದಿ. 25-09-2025 ರಂದು ಸಾಧನಕೇರಿಯ ‘ಚೈತ್ರ’ದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ 94 ವರ್ಷಗಳ ಪರಿಪೂರ್ಣ ಬದುಕನ್ನು ಕಂಡು ಇತ್ತೀಚೆಗೆ ನಮ್ಮನ್ನಗಲಿದ ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜ, ಕಾದಂಬರಿ ಪ್ರಕಾರದಲ್ಲಿ ಹಿಮಾಲಯದೆತ್ತರಕ್ಕೆ ಬೆಳೆದು ನಿಂತಿದ್ದ ಶ್ರೇಷ್ಠ ಸಾಹಿತಿ ದಿ. ಡಾ.ಎಸ್.ಎಲ್. ಭೈರ್ಪನವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ಸಾಹಿತಿಗಳಾದ ಪ್ರೊ. ದುಷ್ಯಂತ ನಾಡಗೌಡ, ಡಾಽ ಹ.ವೆಂ. ಕಾಖಂಡಿಕಿ, ಹರ್ಷ ಡಂಬಳ, ಶ್ರೀನಿವಾಸ ವಾಡಪ್ಪಿ, ಡಾಽಽ ಕೃಷ್ಣ ಕಟ್ಟಿ, ಮನೋಜ ಪಾಟೀಲ, ಪ್ರಲ್ಹಾದ ಯಾವಗಲ್ಲ, ವೆಂಕಟೇಶ ದೇಸಾಯಿ, ಡಾ. ಅರವಿಂದ ಯಾಳಗಿ, ಡಾಽಽ ಮಂದಾಕಿನಿ ಪುರೋಹಿತ ಮುಂತಾದವರು ಮಾತನಾಡಿ, ತತ್ವಶಾಸ್ತ್ರ ಮತ್ತು ಮನಃಶ್ಶಾಸ್ತ್ರದ ಶ್ರೇಷ್ಠ ಅಧ್ಯಾಪಕರಾಗಿ, ವಿನಯಶೀಲ ವ್ಯಕ್ತಿಯಾಗಿ, ನೇರ ನಡೆ-ನುಡಿಗಳೊಂದಿಗಿನ ಧೀಮಂತ ವ್ಯಕ್ತಿಯಾಗಿ ಹಲವಾರು ಕೃತಿರತ್ನಗಳನ್ನು ಸಹಸ್ರಾರು ಓದುಗ ಬಳಗಕ್ಕೆ ನೀಡಿದ ಅಪೂರ್ವ ವ್ಯಕ್ತಿ ಎಸ್.ಎಲ್. ಭೈರ್ಪ ಅವರ ಜ್ಞಾನರಾಶಿಗೆ ಸೂಕ್ತವಾಗಿ ಸಲ್ಲಬೇಕಿದ್ದ ನೊಬೆಲ್ ಪ್ರಶಸ್ತಿಯಿರಲಿ ಈ ಹಿಂದೆಯೇ ಎಂದೋ ಸಿಗಬೇಕಿದ್ದ ಜ್ಞಾನಪೀಠ ಪುರಸ್ಕಾರದಿಂದಲೂ ವಂಚಿತರಾಗಿದ್ದು ಕನ್ನಡಿಗರ ದುರ್ದೈವವೇ ಸೈ ಎಂದು ಭೈರ್ಪನವರ ಅಪೂರ್ವ ಕೊಡುಗೆಗಳನ್ನು ಸ್ಮರಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲರು ಮಾತನಾಡಿ ಬರವಣಿಗೆಯ ವಸ್ತುವನ್ನು ಮೊದಲೇ ನಿಷ್ಕರ್ಷ ಮಾಡಿಯೇ ಮುಂದಿನ ಅಡಿ ಇಡುತ್ತಿದ್ದ, ಸತ್ಯವನ್ನು ನಿರ್ಭಯದಿಂದ ಬಿಚ್ಚಿಡುತ್ತಿದ್ದ, ಕಟುವಾಸ್ತವಗಳನ್ನು ಸಮರ್ಥವಾಗಿ ತೆರೆದಿಡುತ್ತಿದ್ದ ಭೈರ್ಪನವರ ಆ ಶೈಲಿಯೇ ಅದೊಂದು ಕನ್ನಡ ಸಾಹಿತ್ಯಕ್ಕಿತ್ತ ಅಪೂರ್ವವಾದ ಕೊಡುಗೆ ಎನ್ನಬಹುದಾಗಿದೆ ಎಂದರು. ಶ್ರೋತುೃಗಳು ಮತ್ತು ಅತಿಥಿಗಳಿಂದ ಭಾವಚಿತ್ರಕ್ಕೆ ಪುಷ್ಾರೆ್ಪಣಗಳೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆಯವರು ಅಗಲಿದ ಕನ್ನಡಿಗರ ಕಣ್ಮಣಿ ದಿ. ಡಾ. ಎಸ್.ಎಲ್. ಭೈರ್ಪ ಮತ್ತು ಖ್ಯಾತ ಸಿತಾರ ವಾದಕ, ಸ್ನೇಹಜೀವಿ ದಿ. ಶ್ರೀನಿವಾಸ ಜೋಶಿಯವರ ನಿಧನಕ್ಕಾಗಿ ಶ್ರದ್ಧಾಂಜಲಿ ಗೊತ್ತುವಳಿ ಮಂಡಿಸಿದರು.
ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು. ಎಸ್.ಎಮ್. ದೇಶಪಾಂಡೆ, ಪರಮೇಶ್ವರ ಎಮ್.ಎಸ್. ಶ್ರೀಧರ ಗಾಂವಕರ, ರಮೇಶ ಇಟ್ನಾಳ, ಅನಂತ ಸಿದ್ಧೇಶ್ವರ, ಶ್ರೀನಿವಾಸ ಹುದ್ದಾರ, ಬಿ.ಜಿ. ಗುಂಡೂರ, ರಮೇಶ ನಾಡಿಗೇರ, ಸೀಮಾ ಪರಾಂಜಪೆ, ಪದ್ಮಾ ಪುರೋಹಿತ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 