ಆಯುಷ್ ವೈದ್ಯ ಪದ್ಧತಿಯಡಿ ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾವೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್‌

ಆಯುಷ್ ವೈದ್ಯ ಪದ್ಧತಿಯಡಿ ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾವೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್‌ Treatments under the AYUSH system are highly effective: Deputy Commissioner Snehal R

ಲೋಕದರ್ಶನ ವರದಿ 

ಧಾರವಾಡ 28: ಆಲೋಪಥಿಕ್ ಚಿಕಿತ್ಸೆಯನ್ನು ತೆಗೆದುಕೊಂಡರೆ ಅದು ರೋಗದ ಲಕ್ಷಣಗಳನ್ನು ಮಾತ್ರ ಕಡಿಮೆ ಮಾಡುತ್ತದೆ. ಆದರೆ ಆಯುಷ್ ವೈದ್ಯ ಪದ್ಧತಿಯಡಿ ಚಿಕಿತ್ಸೆಗಳು ರೋಗವನ್ನು ಬುಡಮಟ್ಟದಿಂದ ನಿರ್ಮೂಲನೆ ಮಾಡುವಲ್ಲಿ ಬಹಳ ಪರಿಣಾಮಕಾರಿಯಾಗಿವೆ. ದಿನನಿತ್ಯದ ಜೀವನ ಶೈಲಿಯಲ್ಲಿನ ಬದಲಾವಣೆ, ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಹಾಗೂ ಸೂಕ್ತ ಮನೆಮದ್ದು, ಗಿಡ ಮೂಲಿಕೆ ಓಷಧಿಗಳನ್ನು ವೈದ್ಯರುಗಳ ಸಲಹೆಯ ಮೇರೆಗೆ ಬಳಸುವುದರಿಂದ ಸಂಪೂರ್ಣ ಗುಣಮುಖರಾಗಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಅವರು ತಿಳಿಸಿದರು. ಅವರು ನಿನ್ನೆ (ಜು.27) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದೊಂದಿಗೆ ವಿಶೇಷ ಆರೋಗ್ಯ ತಪಾಸಣೆ, ಚಿಕಿತ್ಸೆ, ಫಥ್ಯ, ಯೋಗಾಸನ ಮತ್ತು ಜೀವನ ಶೈಲಿ ಮಾಹಿತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. 

ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ, ಎಲ್ಲಾ ಸರ್ಕಾರಿ ನೌಕರರು ತಮ್ಮ ಕರ್ತವ್ಯಗಳ ಜೊತೆಗೆ ತಮ್ಮ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂದು ನಾವುಗಳು ನಮ್ಮ ವೈಯಕ್ತಿಕ ಆರೋಗ್ಯಕ್ಕೆ ನೀಡುವ ಸಮಯವು ಮುಂದೆ ನಮ್ಮ ಭವಿಷ್ಯದ ಜೀವನವನ್ನು ಸುಖಕರವಾಗಿ ನೆಮ್ಮದಿಯಿಂದ ಕಳೆಯಲು ಸೂಕ್ತವಾಗಿದೆ. ವಿಶೇಷ ಆರೋಗ್ಯ ಶಿಬಿರಗಳ ಸಂಪೂರ್ಣ ಸದುಪಯೋಗವನ್ನು ಎಲ್ಲ ಸರ್ಕಾರಿ ನೌಕರರು ಪಡೆಯಲೇಬೇಕು ಎಂದು ಅವರು ಹೇಳಿದರು.  ಕಾರ್ಯಕ್ರಮದಲ್ಲಿ ಧಾರವಾಡ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮತ್ತು ಉಪರಾಜ್ಯಾಧ್ಯಕ್ಷರಾದ ಸಿದ್ಧನಗೌಡರ ಅವರು ಮಾತನಾಡಿ, ಧಾರವಾಡ ಜಿಲ್ಲಾ ಸರ್ಕಾರಿ ನೌಕರರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದ ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆಗೆ ವಂದನೆಗಳನ್ನು ತಿಳಿಸಿದರು. ಮತ್ತು ಎಲ್ಲ ನೌಕರರ ಸಂಘದ ಪರವಾಗಿ ಇಂತಹ ರಚನಾತ್ಮಕ ಕಾರ್ಯಕ್ರಮಗಳಿಗೆ ಸಹಕರಿಸಲು ಸದಾ ಸಿದ್ಧರಿರುವುದಾಗಿ ಅವರು ತಿಳಿಸಿದರು. 

ಆಯುಷ್ ಪಂಚಕರ್ಮ ವಿಭಾಗದ ತಜ್ಞ ವೈದ್ಯಾಧಿಕಾರಿಗಳಾದ ಡಾ. ಸಂತೋಷ ತಾಡಪತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಧ್ಯೆಯೋದ್ಧೇಶಗಳನ್ನು ತಿಳಿಸಿಕೊಟ್ಟರು. ಯೋಗ ಮತ್ತು ತಜ್ಞ ಪ್ರಕೃತಿ ಚಿಕಿತ್ಸಾ ವೈದ್ಯಾಧಿಕಾರಿ ಡಾ. ಶಶಿಧರ ತಳಕಲ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಯೋಗದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಯೋಗಾಸನಗಳನ್ನು ಪ್ರಾತ್ಯಕ್ಷಿಕೆಯಾಗಿ ಙ-ಃಡಿಜಚಿಞ ಕಡಿಠ ಂಠಿಠಿ ಯೋಗಾ ಮೂಲಕ ತಿಳಿಸಿ, ದ್ಯಾನದ ಬಗ್ಗೆ ಪ್ರಾತ್ಯಕ್ಷಿಕೆಯಾಗಿ ಒತ್ತಡ ನಿರ್ವಹಣೆಗೆ ದ್ಯಾನವೂ ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.  ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಪರಶುರಾಮ ಎಫ್‌. ಕೆ., ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ಅವರು ಇದ್ದರು.  

ಆರೋಗ್ಯ ಶಿಬಿರದಲ್ಲಿ 260 ಜನ ಫಲಾನುಭವಿಗಳು ಆಯುಷ್ ಆರೋಗ್ಯ ಸೇವೆಯನ್ನು ಪಡೆದುಕೊಂಡರು. ಎಲ್ಲ ಶಿಬಿರಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಯುರ್ವೇದ ಓಷಧಿಗಳನ್ನು ಮತ್ತು ಆಯುಷ್ ಅರಿವು ಕರ ಪತ್ರ ಮತ್ತು ಕೈಪಿಡಿಗಳನ್ನು ಉಚಿತವಾಗಿ ವಿತರಿಸಲಾಯಿತು. 46 ಜನ ಫಲಾನುಭವಿಗಳಿಗೆ ಹೆಚ್ಚಿನ ಆಯುರ್ವೇದ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಧಾರವಾಡ ಮತ್ತು ಆಯುಷ್ ಪಂಚಕರ್ಮ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿದರು.   ಹಿರಿಯ ವೈದ್ಯಾಧಿಕಾರಿ ಡಾ. ಅನುರಾಧಾ ಬಲ್ಸಾವರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಆರೋಗ್ಯ ಶಿಬಿರದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ಸವಿತಾ ಹುಣಶಿಮರದ, ಡಾ. ಸಂತೋಷ ತಾಡಪತ್ರಿ ಹಾಗೂ ಡಾ. ಈಶ್ವರ​‍್ಪ ಉಗಾರ ಅವರು ಶಿಬಿರಾರ್ಥಿಗಳ ಆರೋಗ್ಯ ಕೈಗೊಂಡು, ಸೂಕ್ತ ಓಷಧಿ, ಫಥ್ಯ ಹಾಗೂ ಆರೋಗ್ಯ ಸಲಹೆಗಳನ್ನು ನೀಡಿದರು. ಶ್ರೀಶೈಲ ಕುಮಾರ ಚವ್ಹಾಣ ಪಾರ್ಮಸಿ ಅಧಿಕಾರಿಗಳು ಓಷಧಿಗಳನ್ನು ವಿತರಿಸಿದರು.  

 ಆಯುಷ್ ಇಲಾಖೆಯ ಪ್ರಭಾರ ಸಹಾಯಕ ಆಡಳಿತಾಧಿಕಾರಿ ವೀರಣ್ಣ ನಡುವಿನಮನಿ, ಪ್ರಥಮ ದರ್ಜೆ ಸಹಾಯಕ ಆನಂದ ಹಟ್ಟೇನ್ನವರ, ಶುಶ್ರೂಷಾಧಿಕಾರಿ ಮಹಾಲಕ್ಷ್ಮೀ ನಾಯ್ಕ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಗೀತಾ ಹೊಸಮಠ, ಗ್ರೂಪ್ ಡಿ ಹನುಮಂತ ಕುರಬೆಟ ಮತ್ತು ಆಯುಷ್ ಇಲಾಖೆಯ ಸರ್ವ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಹಾಜರಿದ್ದರು.