ಸಾರಿಗೆ ಅಧಿಕಾರಿಗಳಿಂದ ಅನಧಿಕೃತ ಬಾಡಿಗೆ ದ್ವಿಚಕ್ರ ವಾಹನಗಳು ಜಪ್ತು
Transport officials seize unauthorized rental two-wheelers
ಸಾರಿಗೆ ಅಧಿಕಾರಿಗಳಿಂದ ಅನಧಿಕೃತ ಬಾಡಿಗೆ ದ್ವಿಚಕ್ರ ವಾಹನಗಳು ಜಪ್ತು
ವಿಜಯನಗರದ (ಹೊಸಪೇಟೆ) 29: ಕಮಲಾಪುರದಲ್ಲಿ ಬೆಂಗಳೂರು ಮೂಲದ ರಾಯಲ್ ಬೈಸನ್ ಕಂಪನಿ ಅವರಿಂದ ದ್ವಿಚಕ್ರ ವಾಹನಗಳನ್ನು ಬಾಡಿಗೆ ಪಡೆದುಕೊಂಡು ಅನಿಧಿಕೃತವಾಗಿ ಚಾಲಯಿಸುತ್ತಿದ್ದ 3 ವಾಹನಗಳ ವಿರುದ್ಧ ಮೋಟಾರು ವಾಹನ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ, ವಾಹನಗಳನ್ನು ಜಪ್ತು ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ತಿಳಿಸಿದ್ದಾರೆ.
ಹಂಪಿ, ಕಮಲಾಪುರ, ಮತ್ತು ಕಡ್ಡಿರಾಂಪುರ ಭಾಗದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಧಿಕೃತವಾಗಿ ಬಾಡಿಗೆಯ ದ್ವಿಚಕ್ರ ವಾಹನಗಳನ್ನು ನೀಡುತ್ತಿರುವುದನ್ನು ವಿರೋಧಿಸಿ ಅಕ್ಟೋಬರ್.27 ರಂದು ಫೆಡ್ರೇಶನ್ ಆಫ್ ಕರ್ನಾಟಕ ಅಟೋರಿಕ್ಷಾ, ವಿಜಯನಗರ ಆಟೋ ಚಾಲಕರ ಸಂಘದಿಂದ ಹಂಪಿಯಿಂದ ಹೊಸಪೇಟೆಯವರೆಗೆ ಬಾಡಿಗೆಗೆ ದಿಚಕ್ರ ವಾಹನವನ್ನು ಸೇವೆ ನೀಡುವುದಕ್ಕೆ ಅನುಮತಿ ನೀಡಬಾರದೆಂದು ಆಗ್ರಹಿಸಿ ನೂರಾರು ಆಟೋ ಚಾಲಕರು ಪ್ರಾದೇಶಿಕ ಸಾರಿಗೆ ಕಚೇರಿವರೆಗೆ ಪ್ರತಿಭಟನೆಯನ್ನು ನಡೆಸಿದ್ದರು. ಆದ್ದರಿಂದ ಈ ಬಾಡಿಗೆ ವಾಹನಗಳು ಸಂಖ್ಯೆ ಕೆಎ05 ಎಎಲ್6522, ಕೆಎ05 ಎಎಲ್6638 ಸಂಖ್ಯೆಯ ಎರಡು ದ್ವಿಚಕ್ರವಾಹಗಳನ್ನು ಹಿರಿಯ ಮೋಟಾರು ವಾಹನ ನೀರೀಕ್ಷಕರು ಅಂತಹ ವಾಹನಗಳನ್ನು ತಪಾಸಣೆ ನಡೆಸಿ ಜಪ್ತು ಪಡೆದು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇರಿಸಲಾಗಿದೆ ಮತ್ತು ಬೆಂಗಳೂರು ರಾಯಲ್ ಬೈಸನ್ ಕಂಪನಿಯ ವೈಬ್ಸೈಟ್ನ್ನು ರದ್ದುಗೊಳಿಸಲಾಗಿದೆ. ಬಾಡಿಗೆ ವಾಹನಗಳು ಅಡಿಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿರುವ ದ್ವಿಚಕ್ರ ವಾಹನಗಳ ವಿರುದ್ಧ ನಿರಂತರ ತಪಾಸಣೆ ಕಾರ್ಯಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 