ಉಪನ್ಯಾಸದಲ್ಲಿ ಅನುವಾದ ಲೇಖಕ ಹರ್ಷ ರಘುರಾಮ ಅಭಿಪ್ರಾಯ
Translation author Harsha Raghuram's opinion in the lecture
ಕಲಬುರಗಿ 15 : ಜಗತ್ತಿನ ವಿವಿಧ ದೇಶಗಳ ಜಾನಪದಕ್ಕೆ ಭಾರತೀಯ ಜಾನಪದವು ಮೂಲವಾಗಿದೆ. ಎಂಬುದು ಹಲವು ವಿದ್ವಾಂಸರ ಅಂಬೋಣ. ಇದನ್ನು ಚಾರಿತ್ರಿಕ ಬೌಗೋಳಿಕ ಸಿದ್ಧಾಂತವು ಸಾಬೀತುಪಡಿಸಿದೆ. ಅದೇ ರೀತಿ ಜಗತ್ತಿನ ಜಾನಪದ ಕಥೆಗಳಿಗೆ ಭಾರತವೇ ಮೂಲವೆಂದು ಒಪ್ಪಿತವಾಗಿದೆ ಎಂದು ಆಸ್ಟ್ರೀಯಾ ದೇಶದ ಅನುವಾದ ಲೇಖಕ ಹರ್ಷ ರಘುರಾಮ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಕಲ್ಯಾಣ ಕರ್ನಾಟಕ ಲೇಖಕರ ಗ್ರಂಥಾಲಯ ಮತ್ತು ಭಾವಚಿತ್ರಭವನದಲ್ಲಿ ಆಯೋಜಿಸಿದ ‘ಜರ್ಮನ್ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದ ಸಂಬಂಧಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ತಂತ್ರಜ್ಞಾನ ಬೆಳೆದಂತೆ ಹೊಸ ತಲೆಮಾರಿನ ಲೇಖಕರಿಗೆ ವಿದೇಶಿ ಭಾಷೆಗಳ ಜ್ಞಾನ ಮತ್ತು ಸಾಹಿತ್ಯ ಅರಿವಾಗುತ್ತಿದೆ. ಸಾಹಿತ್ಯ ಕೃತಿ, ಕಾದಂಬರಿ ಮತ್ತು ಕಥೆಗಳು ಕನ್ನಡ ಭಾಷೆಗೆ ಅನುವಾದಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕನ್ನಡ ಭಾಷೆಯಲ್ಲಿ ಸೃಜನಶೀಲ ಸಾಹಿತ್ಯದ ಬೆಳವಣಿಗೆ ಸಾಧ್ಯವಾಗುತ್ತಿದೆ.
ಡಿಜಿಟಲ್ ಮಾಧ್ಯಮಗಳ ವಿಸ್ತರಣೆ ಮತ್ತು ಅವಕಾಶಗಳಿಂದ ದೇಶ ವಿದೇಶಗಳ ಸಂಸ್ಕೃತಿ, ಸಾಹಿತ್ಯ ವಿನಿಮಯವಾಗುತ್ತಿದೆ. ಜಗತ್ತಿನ ಶ್ರೇಷ್ಠ ಲೇಖಕರ ಗ್ರಂಥಗಳ ಓದಿನಿಂದ ಪರಸ್ಪರ ಸಾಹಿತ್ಯಕ-ಸಾಂಸ್ಕೃತಿಕ ಕೊಡು-ಕೊಳ್ಳುವಿಕೆ ಆಗುತ್ತಿದೆ. ಆದರಿಂದ ಯುವ ಲೇಖಕರು ಮತ್ತು ಬರಹಗಾರರು ಬೇರೆ ಬೇರೆ ಭಾಷೆಗಳನ್ನು ಕಲಿಯುವ ಆಸಕ್ತಿ, ಬರೆವಣಿಗೆ ಮತ್ತು ಅನುವಾದಕ್ಕೆ ಮುನ್ನುಡಿ ಬರೆಯಬೇಕು. ಬಾಸೆಲ್ ಸಂಸ್ಥೆಯ ಮೂಲಕ ಮತ ಪ್ರಚಾರಕ್ಕೆ ಬಂದ ಜರ್ಮನಿಯ ಫರ್ಡಿನ್ಯಾಂಡ್ ಕಿಟಲ್ ಅವರು ಕನ್ನಡ ಇಂಗ್ಲೀಷ್ ನಿಘಂಟು ರಚಿಸಿದರು. ಕನ್ನಡ ಸಾಹಿತ್ಯದ ಅನೇಕ ಕೃತಿಗಳನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಕ್ರಿಶ್ಚಿಯನ್ ಪ್ರಚಾರಕ ಹರ್ಮನ್ ಫ್ರೆಡ್ರಿಕ್ ಮೋಗ್ಲಿಂಗ್ ಕನ್ನಡ ಸಾಹಿತ್ಯ ಕಲಿತು, ಸಾಹಿತ್ಯ ಪುರಾಣ, ಮಹಾಕಾವ್ಯ ಅನುವಾದಿಸಿದರು. ಹೊಸ ತಲೆಮಾರಿನ ಸಾಹಿತ್ಯಾಸಕ್ತರು ಕನ್ನಡ ಬಳಸುವ ಜೊತೆಗೆ ಜರ್ಮನ್ ಸೇರಿದಂತೆ ಇತರೆ ಬಾಷೆಗಳನ್ನು ಕಲಿಯುವ, ಓದುವ ಕುತೂಹಲದೊಂದಿಗೆ ಸಮಕಾಲೀನ ವೈಚಾರಿಕ ಸಾಹಿತ್ಯ ಹಂಚಿಕೆ ಮತ್ತು ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಅಧ್ಯಯನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಡಾ. ಶ್ರೀಶೈಲ ನಾಗರಾಳ ಮಾತನಾಡಿ ಕನ್ನಡಿರಾದ ಹರ್ಷ ರಘುರಾಮ ಅವರು ಜರ್ಮನಿಯಲ್ಲಿ ನೆಲೆಸಿ ಜರ್ಮನ್ ಭಾಷೆ ಕಲಿತು ಕನ್ನಡಕ್ಕೆ ಕಥೆ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ಜರ್ಮನಿ ಕಥೆಯ ಸಂವೇದನೆಯನ್ನು ಕನ್ನಡ ಸಾಹಿತ್ಯಕ್ಕೆ ತಂದಿರುವ ರಘುರಾಮ ಸೃಜನಶೀಲ ಅನುವಾದಕ ಮತ್ತು ವಿಭಿನ್ನ ಶೈಲಿಯ ಬರಹಗಾರ. ಮ್ಯಕಾನಿಕಲ್ ಎಂಜಿನಿಯರ್ ಕಲಿತ ಒಬ್ಬ ಪದವಿಧರ ಸಾಹಿತ್ಯಾಭಿರುಚಿ ಸೆಳೆತದಿಂದ ಎರಡು ಭಾಷೆಗಳ ಜ್ಞಾನ, ವಿಷಯ ಪಾಂಡಿತ್ಯ, ಸೃಜನಶೀಲ ಮನಸ್ಸು ಅವರನ್ನು ಸೃಜನಶೀಲ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದೆ ಎಂದರು.
ಲೇಖಕ ಹಾಗೂ ಕಥೆಗಾರ ಮಹಾಂತೇಶ್ ನವಲಕಲ್ ಮಾತನಾಡಿ ಜರ್ಮನಿ, ಆಸ್ಟ್ರೀಯ ಮತ್ತು ಪೋಲೆಂಡ್ ದೇಶಗಳಲ್ಲಿ ಒಂದೇ ರೀತಿಯ ಸಂಸ್ಕೃತಿಯಿದೆ. ಆದರೂ ಆಂಗ್ಲ ಭಾಷೆಗೆ ಮಾರು ಹೋಗದೆ ತನ್ನದೇ ಆದ ವಿಶಿಷ್ಠ ಸಂಸ್ಕೃತಿ ಮತ್ತು ಭಾಷೆಯನ್ನು ಬೆಳೆಸಿಕೊಂಡಿರುವುದು ವಿಶೇಷ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಜಗತ್ತು ಬೆಳೆದಂತೆ ಮನುಷ್ಯರು ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯದತ್ತಾ ಮುಕ್ತವಾಗಿ ತೆರೆದುಕೊಳ್ಳಬೇಕು. ಕಲ್ಯಾಣ ಕರ್ನಾಟಕದಲ್ಲಿ ಬಹು ಭ’ಎ ಬಲ್ಲವರಿದ್ದಾರೆ. ಕನ್ನಡ, ಉರ್ದು, ಮರಾಠಿ, ತೆಲುಗು ಮತ್ತು ಇಂಗ್ಲೀಷ್ ಭಾಷೆ ಗೊತ್ತಿದೆ. ಆದರೆ, ಸಾಹಿತ್ಯ ರಚನೆ, ಸಾಹಿತ್ಯಾನುವಾದ ಕೆಲಸಗಳಿಗೆ ಆಸಕ್ತಿವಹಿಸದಿರುವುದು ವಿಪರ್ಯಾಸ. ಹೊಸ ಬರಹಗಾರರು ಸೀಮಿತ ಸಂಸ್ಕೃತಿ ಮತ್ತು ಭಾಷೆಗೆ ಸೀಮಿತರಾಗದೆ ಬೇರೆ ಭಾಷೆಗಳ ಸಾಹಿತ್ಯವನ್ನು ಅನುವಾದ ಮಾಡುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಜರ್ಮನ್ ಮತ್ತು ಕನ್ನಡ ಸಾಹಿತ್ಯ ಕುರಿತು ಸಂವಾದ ನಡೆಸಲಾಯಿತು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರು, ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಂಶೋಧನಾ ಸಂಘ ಹಾಗೂ ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಗಳು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 