ಸರ್ಕಾರಿ ನೌಕರಿಗೆ ವರ್ಗಾವಣೆ ಅನಿವಾರ್ಯ: ಡಾ. ಪುಟ್ಟರಾಜ
Transfer is inevitable for government employees: Dr. Puttaraja
ಬ್ಯಾಡಗಿ 10 : ಸರಕಾರಿ ನೌಕರರಿಗೆ ಬಡ್ತಿ ವರ್ಗಾವಣೆ ಎಂಬುದು ಸಾಮಾನ್ಯ ಹಾಗೂ ಅನಿವಾರ್ಯ ಆಗಿರುತ್ತವೆ. ಈ ಹಿನ್ನಲೆಯಲ್ಲಿ 14 ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿ ಈಗ ಹಾವೇರಿ ಜಿಲ್ಲಾ ಆಸ್ಪತ್ರೆಗೆ ವರ್ಗ ಆಗಿ ಹೋಗುತ್ತಿದ್ದೇನೆ ಎಂದು ತಾಲೂಕ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಟ್ಟರಾಜ ಹೇಳಿದರು.ತಾಲೂಕ ಆಸ್ಪತ್ರೆಯ ಸಭಾ ಭವನದಲ್ಲಿ ಜರುಗಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲ್ಲಿಗೆ ಹೊಸದಾಗಿ ಬಂದಾಗ ಆಸ್ಪತ್ರೆಯಲ್ಲಿ ನೂರಾರು ಸಮಸ್ಯೆಗಳಿದ್ದವು. 2007 ರಲ್ಲಿ ಮಾಜಿ ಶಾಸಕರಾದ ಸುರೇಶಗೌಡ್ರ ಅನುದಾನ ತಂದು 50 ಹಾಸಿಗೆಯ ಆಸ್ಪತ್ರೆ 100 ಹಾಸಿಗೆಯದ್ದಾಗಿ ಹೊಸ ಕಟ್ಟಡವಾಯಿತು. ಉತ್ತಮ ವೈದ್ಯರ ಆಗಮನೊಂದಿಗೆ ರೋಗಿಗಳ ಸಂಖ್ಯೆಯು ಬಹಳ ಹೆಚ್ಚಾಗಿತು.ಸ್ವಚ್ಛತೆ ಹಾಗೂ ಉತ್ತಮ ಚಿಕಿತ್ಸೆ ಉತ್ತಮ ಪರಿಸರದ ಹಂಬಲ ಸದಾ ನನ್ನ ಮನಸಲ್ಲಿತ್ತು. ಎಲ್ಲ ವೈದ್ಯರ ದಾದಿಯರ ಇತರ ಸಿಬ್ಬಂದಿಗಳ ಸಹಕಾರ ಪಡೆದು ನೂರಾರು ಪ್ರಶಸ್ತಿ ಗಳಿಸಲು ಹಾಗೂ ಆಸ್ಪತ್ರೆ ಹೆಸರು ಗಳಿಸಲು ಸಾಧ್ಯವಾಯಿತು ಎಂದು ಸ್ಮರಿಸಿದರು.
ಈ ಆಸ್ಪತ್ರೆಯಲ್ಲಿ ಎಲ್ಲರೂ ಪುಟ್ಟರಾಜ ಆಗಿ ಕಾರ್ಯ ನಿರ್ವಹಣೆ ಮಾಡಿದ್ದರಿಂದ ನನಗೆ ಹೆಸರು ಬಂದಿದೆ. ಮುಂದೆ ಬರುವ ಆಡಳಿತಧಿಕಾರಿ ಇನ್ನೂ ಹೆಚ್ಚು ಉತ್ತಮ ಸೇವೆ ಸಲ್ಲಿಸಿ ರೋಗಿಗಳಿಗೆ ಉತ್ತಮ ಸಲ್ಲಿಸಿ ಎಂದು ಕೋರಿದರು. ಬ್ಯಾಡಗಿ ತಾಲೂಕಿನ ಹಾಗೂ ಪಟ್ಟಣದ ಜನತೆ ಬಹಳ ಒಳ್ಳೆಯವರು. ಕೋವಿಡ್ ಸಮಯದಲ್ಲಿ ಎಲ್ಲ ಶಾಸಕರು ಹಾಗೂ ಮಾಧ್ಯಮದವರು ಬಹಳ ಸಹಕಾರ ನೀಡಿದರು ಎಂದು ತಿಳಿಸಿದರು.ಕಚೇರಿ ಅಧಿಕ್ಷಕರಾದ ಚಂದ್ರಕಾಂತ ಬೆಳ್ಳೋಡಿ. ಶುಶ್ರುಷಧಾ ಕಾರಿ ವಿದ್ಯಾಶ್ರೀ. ಕ್ಷ ಕಿರಣ ತಜ್ಞರಾದ ಅಶೋಕ ಮೊರಬ. ರೇಖಾ ಸೊಂಟಕ್ಕಿ. ಅರೋಗ್ಯ ಮಿತ್ರ ವಿಭಾಗದ ಮಂಜುನಾಥ ಕತ್ತಿ ಹಾಗೂ ಪುಟ್ಟರಾಜ ಅವರಿಗೆ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ರೋಟರಿ ಕ್ಲಬ್ನವರು ಸನ್ಮಾನ ಮಾಡಿದರು.ಡಾ. ರಾಘವೇಂದ್ರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ. ಮಹೇಶ ಭಜಂತ್ರಿ ಪ್ರಸ್ಥಾ ವಿಕವಾಗಿ ಮಾತನಾಡಿದರು. . ಡಾ. ಸುರೇಶ ಗುಂಡಪಲ್ಲಿ. ಡಾ. ಎನ್ ನಾಗರಾಜ. ಡಾ. ಚಂದ್ರಕಾಂತ ಮಣ್ಣಪುರ. ಡಾ. ವಿರೇಶ ಹೊಸಮನಿ. ಡಾ. ಚೇತನ. ಡಾ. ಬಸವರಾಜು ರೋಟರಿ ಕ್ಲಬ್ನ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಮಾಜಿ ಗೌರ್ನರ್ ಮಾಲತೇಶ ಅರಳಿಮಟ್ಟಿ. ಮಂಜುನಾಥ. ಉಪ್ಪಾರ. ಮಾಜಿ ಅಧ್ಯಕ್ಷರಾದ ಬಸವರಾಜ ಸುಂಕಾಪುರ. ವಿಶ್ವನಾಥ ಅಂಕಲಕೋಟಿ. ಅಮಿತಾ ಸಿಸ್ಟರ್. ಸಂತೋಷ. ಪ್ರಕಾಶ ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 