ಸರಕಾರಿ ಸೇವೆಯಲ್ಲಿ ವರ್ಗಾವಣೆ, ನಿವೃತ್ತಿ ಪ್ರಕ್ರಿಯೆ ನಿರಂತರ ಪ್ರಕ್ರಿಯೆ : ಡಾ.ಹನುಮಂತಪ್ಪ
Transfer and retirement process in government service is a continuous process: Dr. Hanumanthappa
ಸರಕಾರಿ ಸೇವೆಯಲ್ಲಿ ವರ್ಗಾವಣೆ, ನಿವೃತ್ತಿ ಪ್ರಕ್ರಿಯೆ ನಿರಂತರ ಪ್ರಕ್ರಿಯೆ : ಡಾ.ಹನುಮಂತಪ್ಪ
ಶಿಗ್ಗಾವಿ 1: ಸರಕಾರಿ ಸೇವೆಯಲ್ಲಿ ವರ್ಗಾವಣೆ ಹಾಗೂ ಪದೋನ್ನತಿ ಮತ್ತು ನಿವೃತ್ತಿ ಪ್ರಕ್ರಿಯೆ ನಿರಂತರವಾಗಿ ನಡೆಯುವ ಪ್ರಕ್ರಿಯೆ ಎಂದು ನಿವೃತ್ತ ತಜ್ಞ ವೈದ್ಯ ಡಾ.ಹನುಮಂತಪ್ಪ. ಪಿ.ಹೆಚ್ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಸ್ವಾಗತ ಹಾಗೂ ಬೀಳ್ಕೋಡುವ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಆಗಮಿಸುತ್ತಾರೆ ಅವರಿಗೆ ಉತ್ತಮ ಸೇವೆ ಸಲ್ಲಿಸಿದರೇ ಅದು ನಮಗೆ ಕ್ರೆಡಿಟ್ ರೂಪದಲ್ಲಿ ಜಮಾ ಆಗುತ್ತದೆ ಎಂದರು. ವರ್ಗಾವಣೆ ಹೊಂದಿದ ತಜ್ಞ ವೈದ್ಯರಾದ ಡಾ.ಲಕ್ಷ್ಮಣ ನಾಯ್ಕ, ಡಾ.ಗುರುರಾಜ, ಡಾ.ಸುಭಾಸ ಲೋಖ್ರೆ, ಡಾ.ವಿವೇಕ ಜೈನಕೇರಿ, ಡಾ.ವಿಧ್ಯಾವತಿ ಬ್ಯಾಟಪ್ಪನವರ, ಶುಶ್ರೂಷಾ ಅಧಿಕಾರಿಗಳಾದ ಆರ್. ಸಾರಮ್ಮ, ಉಮಾ ಮುಳಗುಂದ, ವನಿತಾ ಕುರಂದವಾಡ, ಓಷಧಿ ವಿತರಕ ಅಧಿಕಾರಿ ನೀಲಮ್ಮ ಹಿರೇಮಠ ಸೇರಿದಂತೆ ವಯೋ ನಿವೃತ್ತಿ ಹೊಂದಿದ ಸುಭಾಸಚಂದ್ರ ತಳವಾರ ಅವರನ್ನು ಸನ್ಮಾನಿಸಲಾಯಿತು. ನಂತರ ನೂತನವಾಗಿ ಆಗಮಿಸಿದ ತಜ್ಞ ವೈದ್ಯರಾದ ಡಾ.ಮಲ್ಲಿಕಾರ್ಜುನಯ್ಯ, ಡಾ.ಅಶೋಕ, ಡಾ.ಬಸಿರಾ, ನಿಂಗಪ್ಪ ಹರ್ಲಾಪೂರ, ಜಯಶ್ರೀ ಹೋತನಹಳ್ಳಿಯವರನ್ನು ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ತಜ್ಞ ವೈದ್ಯರಾದ ಡಾ.ತಬುಸುಮ್, ಡಾ.ರಾಜೇಶ್ವರಿ ಚನ್ನಪ್ಪಗೌಡ್ರ, ಡಾ.ಪಾಟೀಲ, ಡಾ.ರೈತಾ, ಶುಶ್ರೂಷಾ ಅಧೀಕ್ಷಕಿ ಸುಶೀಲಾ ದೇವಸೂರ, ಸಹಾಯಕ ಆಡಳಿತಾಧಿಕಾರಿ ಮಂಜುನಾಥ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 