ಸಮಗ್ರ ಜಲ ಮತ್ತು ನೆಲ ನಿರ್ವಹಣೆ ಕುರಿತು ತರಬೇತಿ
Training on Integrated Water and Land Management
ಧಾರವಾಡ 03: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ವತಿಯಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಧಾರವಾಡ ಜಿಲ್ಲೆಯ, ನವಲಗುಂದ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಸಮಗ್ರ ಜಲ ಮತ್ತು ನೆಲ ನಿರ್ವಹಣೆ ಕುರಿತು ಗ್ರಾಮ ಮಟ್ಟದ ತರಬೇತಿಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ನಿರ್ದೇಶಕರಾದ ಡಾ. ಗೀರೀಶ ಎನ್. ಮರಡ್ಡಿಯವರು ಜಲಾಶಯದ ನೀರಿನ ಸಮರ್ಕ ಬಳಕೆಯಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪಾತ್ರ ಅತೀ ಮುಖ್ಯವಾದದ್ದು ಎಂದು ತಿಳಿಸಿದರು. ಅಲ್ಲದೇ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ತಾಂತ್ರಿಕತೆಗಳು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ನೀರು ಬಳಕೆಯಿಂದ ಅಧಿಕ ಇಳುವರಿ ಪಡೆಯುವ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ವಿಧಾನ ಕುರಿತು ಮಾಹಿತಿ ನೀಡುವುದಲ್ಲದೆ, ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆ, ನೀರಿನ ಕರ ಆಕರಣೆ / ಸಂಗ್ರಹಣೆ ಕುರಿತು ಮಾಹಿತಿ ನೀಡಿದರು. ವಾಲ್ಮಿ, ಧಾರವಾಡ ಸಂಸ್ಥೆಯಿಂದ ಈ ಎಲ್ಲ ವಿಷಯ ಕುರಿತು ತರಬೇತಿಗಳನ್ನು ನೀಡುತ್ತಿದ್ದು ಅದರ ಪ್ರಯೋಜನವನ್ನು ಪ್ರತಿಯೊಂದು ನೀ.ಬ.ಸ.ಸಂಘದ ಪದಾಧಿಕಾರಿಗಳು, ಸದಸ್ಯರು ್ಘ ರೈತರು ಪಡೆದುಕೊಳ್ಳುವಂತೆ, ಹೆಚ್ಚು ಹೆಚ್ಚು ಸದಸ್ಯರು ತರಬೇತಿಗೆ ಹಾಜರಾಗುವಂತೆ ಕರೆ ನೀಡಿದರು.
ಸದಾಶಿವಗೌಡ ಎ. ಪಾಟೀಲ, ಅಧ್ಯಕ್ಷರು ಮಲಪ್ರಭಾ ಯೋಜನಾ ಮಟ್ಟದ ನೀ.ಬ.ಸ.ಸಂಘಗಳ ಮಹಾಮಂಡಳ, ನವಿಲುತೀರ್ಥ ರವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ನೀರು ಬಳಕೆದಾರರ ಸಹಕಾರ ಸಂಘಗಳು ಸಕ್ರೀಯವಾಗಿ ತರಬೇತಿಯಲ್ಲಿ ಪಾಲ್ಗೊಂಡು ಸಂಘಗಳ ಬಲವರ್ಧನೆಗೆ ಕ್ರಮ ವಹಿಸಬೇಕೆಂದು ತಿಳಿಸಿದರು.
ಇಂದುಧರ ಹಿರೇಮಠ, ಸಹಾಯಕ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಹಾಗೂ ಮಣ್ಣಿನ ಆರೋಗ್ಯ ನಿರ್ವಹಣೆ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಸುರೇಶ ಕುಲಕರ್ಣಿ, ಸಮಾಲೋಚಕರು, ವಾಲ್ಮಿ, ಧಾರವಾಡ ಇವರು ಸಂಘಗಳ ರಚನೆ, ಕಾರ್ಯ, ಕರ್ತವ್ಯಗಳುಗಳ ಕುರಿತು ಮಾಹಿತಿ ನೀಡಿದರು.
ಅನಿಲಕುಮಾರ ಮಸಳಿ, ಸಹ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಮಾತನಾಡುತ್ತಾ ಕಾಲುವೆಗಳನ್ನು ದುರಸ್ತಿ ಮಾಡಿಸಿ, ಕೊನೆಯ ಹಂತದ ರೈತರಿಗೂ ಕೂಡಾ ನೀರು ತಲುಪುವಂತೆ ಕ್ರಮ ಕೈಗೊಳ್ಳುಲು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶೇಕಣ್ಣ ಅಂಬಲಿ, ರೈತ ಸಂಘದ ಮುಖಂಡರು, ಮಲಪ್ರಭಾ ಯೋಜನಾ ಮಟ್ಟದ ನೀ.ಬ.ಸ.ಸಂಘಗಳ ಮಹಾಮಂಡಳ, ನವಿಲುತೀರ್ಥದ ನಿರ್ದೇಶಕರಾದ ಸುರೇಶ ಮ. ನಿಡವಣಿ, ಮು.ಕಾ.ನಿ.ರಾದ ಜಿ.ಕೆ. ದುಮ್ಮಳ್ಳಿ, ಪುಂಡಲೀಕಪ್ಪ ಯ. ಪಿಡ್ಡೆಣ್ಣವರ, ಅಧ್ಯಕ್ಷರು, ಬೀರೇಶ್ವರ ನೀ.ಬ.ಸ.ಸಂಘ, ಹೆಬ್ಬಾಳ, ಶಿರೂರು, ಆಯಟ್ಟಿ, ಗುಮ್ಮಗೋಳ, ಬ್ಯಾಲ್ಯಾಳ, ಶಿರಕೋಳ, ಹಣಸಿ, ಜಾವೂರು ಹಾಗೂ ಹೆಬ್ಬಾಳ ಗ್ರಾಮಗಳ ನೀ.ಬ.ಸ.ಸಂಘಗಳ ಅಧ್ಯಕ್ಷರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 