ಅಗರ್ತಲಾ,
ಡಿಸೆಂಬರ್ 24 ,ಭಾರತೀಯ ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಪೈಲಟ್ ಕೋರ್ಸ್‍ನ 127 ಅಧಿಕಾರಿಗಳಲ್ಲಿ ತ್ರಿಪುರಾದ
ಯುವಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಗ್ರಸ್ಥಾನ ಪಡೆದಿರುವ ತ್ರಿಪುರಾದ ಅರುಣಾಭಾ ಚಕ್ರವರ್ತಿ ಅವರನ್ನು
ಉಪ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಮತ್ತು
ಶಿಕ್ಷಣ ಸಚಿವ ರತನ್ ಲಾಲ್ ಶ್ಲಾಘಿಸಿದ್ದಾರೆ. ಕೋರ್ಸ್ ಸಮಯದಲ್ಲಿ ಪಿಲಾಟಸ್ ವಿಮಾನದಲ್ಲಿ
130 ಗಂಟೆಗಳ ಹಾರಾಟದ ಅನುಭವವನ್ನು ಯಶಸ್ವಿಯಾಗಿ ಪೂರೈಸಿದ ನಂತರ ಅರುಣಾಭಾ ಅವರು ಡಿಸೆಂಬರ್ 21 ರಂದು ಹೈದರಾಬಾದ್ನ ಏರ್
ಫೋರ್ಸ್ ಅಕಾಡೆಮಿಯಲ್ಲಿ ಏರ್ ಚೀಫ್ ಮಾರ್ಷಲ್ ಅವರಿಂದ
ಗೌರವ ಖಡ್ಗವನ್ನು ಪಡೆದರು. ಅರುಣಾಭಾ ಎಎಫ್‌ಎದಲ್ಲಿ ಪದವಿಗಾಗಿ ಪಾಸಿಂಗ್ ಔಟ್ ಪೆರೇಡ್‌ನ
ಒಂದು ಭಾಗವಾಗಿದ್ದರು, ಅಲ್ಲಿ ಅವರಿಗೆ ಅಧ್ಯಕ್ಷರ
ಫಲಕ ಮತ್ತು ಪ್ರತಿಷ್ಠಿತ ಸ್ವೋರ್ಡ್ ಆಫ್ ಆನರ್
ಅನ್ನು ಪ್ರದಾನ ಮಾಡಲಾಯಿತು. "ಅರುಣಾಭಾ
ಅವರ ಯಶಸ್ಸು ನಮ್ಮ ರಾಜ್ಯದ ಯುವಕರಿಗೆ ಇಂತಹ ರೋಚಕ ಕೋರ್ಸ್‌ಗಳನ್ನು ಮುಂದುವರಿಸಲು ಮತ್ತು ತ್ರಿಪುರವನ್ನು ಹೆಮ್ಮೆ ಪಡುವಂತೆ ಮಾಡಲು ಪ್ರೇರೇಪಿಸುತ್ತದೆ" ಎಂದು ಉಪ ಮುಖ್ಯಮಂತ್ರಿ ದೇವ್ ವರ್ಮಾ ಹೇಳಿದ್ದಾರೆ. ಎಂಜಿನಿಯರ್ ಪುತ್ರರಾಗಿರುವ ಅರುಣಾಭಾ, ಶಿಸು ಬಿಹಾರ ಶಾಲೆಯಲ್ಲಿ
ಎಂಟನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದರು. ನಂತರ ಡೆಹೆರಾಡೂನ್‌ನ ಆರ್‌ಐಎಂಸಿಗೆ ಸ್ಥಳಾಂತರಗೊಂಡರು.
ಶಾಲಾ ಶಿಕ್ಷಣದ ನಂತರ ಪುಣೆಯ ರಾಷ್ಟ್ರೀಯ ರಕ್ಷಣಾ
ಅಕಾಡೆಮಿಯಲ್ಲಿ ಪ್ರವೇಶ ಪಡೆದ ಅವರನ್ನು ಪೈಲಟ್ ತರಬೇತಿಗೆ ಆಯ್ಕೆ ಮಾಡಲಾಯಿತು.