ಅಕ್ರಮ ಗಾಂಜಾ ಹೆರಾಯಿನ್ ಸಾಗಾಟ: ಓರ್ವನ ಬಂಧನ
Trafficking of illegal marijuana and heroin: One arrested
88,700ರೂ. ಮೌಲ್ಯದ 3,468ಕೆಜಿ. ಗಾಂಜಾ ರೂ. 3,700 ನಗದು ಹಣ ಎರಡು ಮೋಬೈಲ್ ಫೋನ್ ಒಟ್ಟು ರೂ. 94,900 ಮೌಲ್ಯದ ವಸ್ತು ವಶ
ಬೆಳಗಾವಿ 30: ಗಾಂಜಾ ಮತ್ತು ಹೆರಾಯಿನ್ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಬೆಳಗಾವಿ ನಗರ ಪೊಲೀಸರು ಮಿಂಚಿನ ದಾಳಿ ನಡೆಸಿ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ.
ಕಂಗ್ರಾಳಿ ಬಿಕೆ ಕಲ್ಮೇಶ್ವರ ನಗರ ನಿವಾಸಿ ಮನೋಹರ ಅ ಬಾಳು ಗಜಾನನ ಹುದ್ದಾರ ಬಂಧಿತ ಆರೋಪಿಯಾಗಿದ್ದಾನೆ.
ಈತ ಕಂಗ್ರಾಳಿ ಬಿಕೆಯಿಂದ ಶಾಹೂನಗರ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ದಿ. 28ರಂದು ಅಕ್ರಮವಾಗಿ ಗಾಂಜಾ ಮತ್ತು ಮಾದಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಸಿಬಿ ಬೆಳಗಾವಿ ನಗರ ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್ವರ ಕುಂಬಾರ ಹಾಗೂ ಸಿಬ್ಬಂದಿಯವರು ತಕ್ಷಣ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಆತನಿಂದ 88,700ರೂ. ಮೌಲ್ಯದ 3,468ಕೆಜಿ. ಗಾಂಜಾ ರೂ. 3,700 ನಗದು ಹಣ ಮತ್ತು ಎರಡು ಮೋಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹೀಗೆ ಒಟ್ಟು ರೂ. 94,900 ಮೌಲ್ಯದ ವಸ್ತುಗಳನ್ನು ಜಪ್ತ ಮಾಡಿಕೊಂಡು ಆರೋಪಿ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 