ಪೂರ್ವಜರ ಸಂಪ್ರದಾಯಿಕ ಕಲೆಗಳು ಮನಸ್ಸನ್ನು ಉಲ್ಲಸಿತಗೊಳ್ಳುತ್ತದೆ : ಪಾಂಡುರಂಗಿ
Traditional arts of ancestors delight the mind: Pandurangi
ಧಾರವಾಡ 18: ನಮ್ಮ ಪೂರ್ವಜರ ಈ ಸಂಪ್ರದಾಯಿಕ ಕಲೆಗಳು ಮನಸ್ಸನ್ನು ಉಲ್ಲಸಿತಗೊಳ್ಳುತ್ತದೆ. ನಮ್ಮ ಸಂಪ್ರದಾಯಿಕ ಕಲೆಗಳು ನಮ್ಮ ಸಂಸ್ಕೃತಿಯು ಉಳಿಯುವಂತಾಗುತ್ತದೆ ಎಂದು ಮನೋ ಆರೋಗ್ಯ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಜಯಶ್ರೀ ಗುತ್ತಲ ದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರ-2025 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಜಾನಪದ ಸಾಹಿತ್ಯದಲ್ಲಿ ಗ್ರಾಮೀಣ ಬದುಕಿನ ಒಳನೋಟಗಳಿವೆ. ತಮ್ಮ ಬದುಕಿನ ನೋವು-ನಲಿವುಗಳನ್ನು ಹಾಡಿನ ಮೂಲಕ ಹೊರ ಹಾಕಿ ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕುಟುಂಬ ನಿರ್ವಹಣೆ ಜೊತೆ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಪೂರ್ಣಾ ಪಾಟೀಲ ಮಾತನಾಡಿ, ಜನಪದರ ಜೀವನದ ಸಮಗ್ರ ಚಿತ್ರಣವೇ ಜಾನಪದ ಸಾಹಿತ್ಯದಲ್ಲಿದೆ. ಕುಟ್ಟುವಾಗ, ಬೀಸುವಾಗ, ಮದುವೆ ಸಮಾರಂಭದಲ್ಲಿ ತವರು ಮನೆ ಸಿರಿ ಹೆಣ್ಣುಮಕ್ಕಳ ಹಬ್ಬದ ಹಾಡುಗಳ ನೈಜ ಚಿತ್ರಣಗಳಿವೆ. ಜೀವನದ ನೈಜತೆಯೇ ಜಾನಪದದಲ್ಲಿದೆ. ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಿಂದಿನ ಮೇಯರ್ ಡಾ. ಹನಮಂತ ಡಂಬಳ ಮಾತನಾಡಿ, ಜಯಶ್ರೀ ಗುತ್ತಲ ಇಂದು ಭೌತಿಕವಾಗಿ ಇಲ್ಲದಿದ್ದರೂ ಎಸ್.ಬಿ. ಗುತ್ತಲ ಅವರು ದತ್ತಿ ಇಡುವ ಮೂಲಕ ಅವರನ್ನು ಸ್ಮರಿಸುತ್ತಾ ಜೀವಂತವಾಗಿರಿಸಿದ್ದಾರೆ. ಜಯಶ್ರೀ ಗುತ್ತಲ ಅವರು ಸಂಗೀತ ಪರಂಪರೆಯಿಂದ ಬಂದವರಾಗಿದ್ದಾರೆ. ಹೀಗಾಗಿ ಜಾನಪದದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಎಲ್ಲಾ ಮಹಿಳಾ ಮಂಡಳದ ಹಾಡು ಕೇಳಿ ಸಂತಸವಾಯಿತೆಂದು ಹೇಳಿದರು.
ಪ್ರಾರಂಭದಲ್ಲಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಜರುಗಿದ ಮೂಲ ಜಾನಪದ ಹಾಡುಗಳ ಸ್ಪರ್ಧೆಯನ್ನು ಡಾ. ಆನಂದ ಪಾಂಡುರಂಗಿ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ ಒಟ್ಟು 36 ಮಹಿಳಾ ಮಂಡಳಗಳು ಭಾಗವಹಿಸಿದ್ದವು. ಹುಬ್ಬಳ್ಳಿಯ ವಾಗ್ದೇವಿ ಮಹಿಳಾ ಮಂಡಳದವರು ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದುಕೊಂಡು 2025ರ ಜಯಶ್ರೀ ಗುತ್ತಲ ಜಾನಪದ ಪುರಸ್ಕಾರವನ್ನು ತಮ್ಮದಾಗಿಸಿಕೊಂಡರು. ದ್ವಿತೀಯ ಸ್ಥಾನವನ್ನು ಹುಬ್ಬಳ್ಳಿ ಶ್ರೀಗೌರಿ ಭಜನಾ ಮಂಡಳ ಪಡೆದರೆ, ಧಾರವಾಡದ ರುಕ್ಷ್ಮಿಣಿ ಪಾಂಡುರಂಗ ಭಜನಾ ಮಂಡಳಿ ತೃತೀಯ ಬಹುಮಾನ ಪಡೆದರು.
ಧಾರವಾಡದ ತುಂಗಭದ್ರಾ ಮಹಿಳಾ ವೇದಿಕೆ, ಗಾನ ಚಿಂತನಾ ಮಹಿಳಾ ಮಂಡಳ ಮತ್ತು ಶ್ರೀರಾಮ ಜಯರಾಮ ಗುಂಪು ಮಹಿಳಾ ಮಂಡಳದವರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು. ಸ್ಪರ್ಧೆಯ ನಿರ್ಣಾಯಕರಾಗಿ ಎನ್.ಆರ್. ಕುಲಕರ್ಣಿ, ವಿಜಯೇಂದ್ರ ಅರ್ಚಕ, ಶ್ರುತಿ ಕುಲಕರ್ಣಿ ಆಗಮಿಸಿದ್ದರು.
ಎಸ್. ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಕೃತಿಕಾ ಸತ್ಯಬೋದ ಗುತ್ತಲ ಮೂಲ ಜಾನಪದ ಹಾಡುಗಳ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ದತ್ತಿದಾನಿ ಎಸ್.ಬಿ. ಗುತ್ತಲ ದತ್ತಿ ಕುರಿತು ಮಾತನಾಡಿದರು. ನಿರ್ಣಾಯಕರಾಗಿ ಶ್ರುತಿ ಕುಲಕರ್ಣಿ, ವಿಜಯೇಂದ್ರ ಅರ್ಚಕ, ಎನ್.ಆರ್. ಕುಲಕರ್ಣಿ ಭಾಗವಹಿಸಿದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಶ್ರೀಧರ ಕುಲಕರ್ಣಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 