ಇಂಗಳಿ ಶ್ರೀರಾಮ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ರೈತರಿಗೆ ಟ್ರ್ಯಾಕ್ಟರ್ ವಿತರಣೆ..!!

 ಇಂಗಳಿ ಶ್ರೀರಾಮ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ರೈತರಿಗೆ ಟ್ರ್ಯಾಕ್ಟರ್  ವಿತರಣೆ..!! Tractor distribution to farmers by Ingali Srirama Primary Rural Agricultural Cooperative Society..!!

ಲೋಕದರ್ಶನ ವರದಿ 

ಮಾಂಜರಿ 20 : ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಶ್ರೀರಾಮ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ರೈತ ಸದಸ್ಯರಾದ ಸುಭಾಷ ಪವಾರ ಮತ್ತು ಭರತ ಪವಾರ ಇವರಿಗೆ ಮಂಜೂರಾದ ಟ್ರಾಕ್ಟರ್‌ಗಳನ್ನು ಯುಗಾದಿಯ ದಿನದಂದು ಗುರುವಾರ ದಿ. 19 ರಂದು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕಿನ ಸಿಇಓ ಎಸ್‌.ಜಿ. ಕಳಾವಂತ ಮತ್ತು ಬ್ಯಾಂಕ್ ನೀರೀಕ್ಷಕ ರೋಹಿದಾಸ ಕುರಳೆ ಭಾಗವಹಿಸಿ, ಟ್ರಾಕ್ಟರ್‌ಗಳಿಗೆ ಪೂಜೆ ಸಲ್ಲಿಸಿ, ಫಲಾನುಭವಿಗಳಿಗೆ ಟ್ರಾಕ್ಟರ್ ಕೀ ಹಸ್ತಾಂತರಿಸಿದರು.  ಬಳಿಕ ನಡೆದ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕಿನ ಸಿಇಓ ಎಸ್‌.ಜಿ. ಕಳಾವಂತ ಮಾತನಾಡಿ, ಮಾಜಿ ಸಂಸದರು ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅಣ್ಣಾಸಾಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ಡಿಸಿಸಿ ಬ್ಯಾಂಕ್ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಮೂಲಕ ರೈತರಿಗೆ ಅನೇಕ ಪ್ರಕಾರದ ಕೃಷಿ, ಕೃಷಿಯೇತರ ಸಾಲಗಳನ್ನು ವಿತರಿಸಲಾಗುತ್ತಿದೆ. ಇಂಗಳಿ ಗ್ರಾಮದ ಶ್ರೀರಾಮ ಪಿಕೆಪಿಎಸ್‌ಗೆ ದಾಖಲೆಯ ಸುಮಾರು 5.2 ಕೋಟಿ ಪತ್ತ ನೀಡಲಾಗಿದೆ.  

ರೈತರು ಇದರ ಲಾಭ ಪಡೆದುಕೊಳ್ಳಬೇಕು. ಡಿಸಿಸಿ ಬ್ಯಾಂಕ್ ಇದು ರೈತರ ಬ್ಯಾಂಕ್ ಆಗಿದ್ದು, ಎಲ್ಲರೂ ತಮ್ಮ ವ್ಯವಹಾರಗಳನ್ನು ಡಿಸಿಸಿ ಬ್ಯಾಂಕಿನೊಂದಿಗೆ ಮಾಡಬೇಕೆಂದು ತಿಳಿಸಿದರು.  ಬ್ಯಾಂಕ್ ನೀರೀಕ್ಷಕ ರೋಹಿದಾಸ ಕುರಳೆ ಮಾತನಾಡಿ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅಣ್ಣಾಸಾಬ ಜೊಲ್ಲೆ ಅವರ ಮಾರ್ಗದರ್ಶನದಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ, ಶೇ. 3 ರ ದರದಲ್ಲಿ ಟ್ರಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳ ಸಾಲ, ಇದರ ಜೊತೆಗೆ ಹೌಸಿಂಗ್ ಸಾಲ, ವಾಹನ ಸಾಲ ಮತ್ತು ಸ್ವ-ಸಹಾಯ ಸಂಘಗಳ ಮುಖಾಂತರ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಶಂಕರ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‌.ಜಿ. ಕಳಾವಂತ ಮತ್ತು ರೋಹಿದಾಸ ಕುರಳೆ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.  

ಈ ಸಮಯದಲ್ಲಿ ರಾಮ ಪಿಕೆಪಿಎಸ್‌ನ ಅಧ್ಯಕ್ಷ ಬಾಲಚಂದ್ರ ಪಾಟೋಳೆ, ಉಪಾಧ್ಯಕ್ಷ ರಮೇಶ ಮಾನೆ, ನಿರ್ದೇಶಕರಾದ ರಾಜೇಂದ್ರ ಶೆಟ್ಟಿ, ಶಿವಾಜಿ ಜಾಧವ, ಸುರೇಶ ಪವಾರ, ಋಷಿಕೇಶ ಪವಾರ, ಅಶೋಕ ಮಿರ್ಜೆ, ಧನಪಾಲ ಕೋಳಿ, ರೂಪಾಲಿ ಅರಗೆ, ಸುಜಾತಾ ಸಾವಂತ, ಶಿವರಾಜ ಕಾಂಬಳೆ, ಸೆಕ್ರಟರಿ ಆನಂದ ಜತ್ರಾಟೆ, ಮುಖಂಡರಾದ ಅಣ್ಣಾಸಾಬ ಪವಾರ, ಶಂಕರ ಪವಾರ, ಸರ್ಜೆರಾವ ಜಾಧವ, ಅಮೃತ ಡಿಗ್ರಜೆ, ಸದಾಶಿವ ಜಾಧವ, ಸುನೀಲ ಅರಗೆ, ರಾವಸಾಬ ಶಿಂಧೆ, ಮನ್ಸೂರ ದಫೇದಾರ, ಸಂಜಯ ಗುರವ, ವಾಲ್ಮಿಕ ಮಾನೆ, ಟ್ರಾಕ್ಟರ್ ಫಲಾನುಭವಿಗಳಾದ ಸುಭಾಷ ಪವಾರ, ಭರತ ಪವಾರ ಸೇರಿದಂತೆ ಸಂಘದ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಸರ್ಜೇರಾವ ಜಾಧವ ಮಾತನಾಡಿ, ಸಂಘದ ಪ್ರಗತಿಯನ್ನು ವಿವರಿಸಿ, ವಂದಿಸಿದರು. ಇಂಗಳಿ ಶ್ರೀರಾಮ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವತಿಯಿಂದ ಫಲಾನುಭವಿಗಳಿಗೆ ಟ್ರ್ಯಾಕ್ಟರ್  ವಿತರಣೆ ಮಾಡುವಾಗ ಅನ್ನಾಸಾಹೇಬ್ ಪವಾರ್ ರಮೇಶ್ ಮನೆ ಶಂಕರ್ ಪವಾರ್ ಸರ್ಜೆರಾವ್ ಜಾಧವ ಹಾಗೂ ಇನ್ನಿತರರು.